ಮೋಹಿನಿಯ ಅವತಾರದಲ್ಲಿ
*********************
ನಗುವಿನ ಕವನ
ಬರೆದರೆ ದಿನ ದಿನ
ನಗುವೆಯ ಚಿನ್ನ
ಏತಕೆ ಈ ಮೌನ
ಹಳ್ಳಿ ಮನೆಯ ಹಿತ್ತಲಿನಲ್ಲಿ
ಭಾರಿ ಜೋರು ಕತ್ತಲಿನಲ್ಲಿ
ನಿನ್ನ ಕಂಡ ಆ ರಾತ್ರಿಯಲ್ಲಿ
ಮೋಹಿನಿಯ ಅವತಾರದಲ್ಲಿ
ಮನಮೋಹಕ ಆ ನಿನ್ನ ರೂಪ
ಒಂಟಿ ಬದುಕು ನಿನಗದು ಶಾಪ
ಹೆದರಿ ಏರಿತ್ತು ನನ್ನ ದೇಹದ ತಾಪ
ಆದರೂ ಪ್ರೀತಿಯ ಕೂಗು ಅಪರೂಪ
ಹೃದಯ ಹಾಡಿತ್ತು ಪ್ರೇಮ ಗೀತೆ
ನಿನ್ನ ಗೆಜ್ಜೆ ಸದ್ದಿನ ಜೊತೆ ಜೊತೆ
ಭಯದಲ್ಲೂ ಬರೆದ ಪ್ರೇಮ ಕವಿತೆ
ಆ ಸಿಹಿ ಕ್ಷಣಗಳ ನೀನೇಕೆ ಮರೆತೆ
ನಗುವಿನ ಕವನ
ಬರೆದರೆ ದಿನ ದಿನ
ನಗುವೆಯ ಚಿನ್ನ
ಏತಕೆ ಈ ಮೌನ
|| ಪ್ರಶಾಂತ್ ಖಟಾವಕರ್ ||
No comments:
Post a Comment