Online Girl .. :) :)
+++++++++++++++++
ಅವಳ ದನಿಯು ಮಧುರ
ಮಾತಲ್ಲಿ ಮುಗ್ದತೆ ಅಪಾರ
ಅವಳ ನಗುವೇ ಇಂಚರ
ಮನದಲ್ಲಿ ವಿದ್ಯುತ್ ಸಂಚಾರ
ಹೃದಯ ಹಾಡುವ ಶಬ್ದ ಸಾವಿರ
ಕಾಡುವ ಚಿಂತೆಗಳ ಸಣ್ಣ ವಿಚಾರ
ಅರಿತಿಹಳು ಈ ಜಗವು ಅತೀ ಕ್ರೂರ
ಮಧುರ ದನಿಯಲಿ ನಗು ಬಂಗಾರ
ಶ್ವೇತ ವರ್ಣ ಮನಸ್ಸು ಪೂರ್ಣ
ಕಂಡೊಡನೆ ಅದೇನೋ ಆಕರ್ಷಣೆ
ಪ್ರತೀ ಮಾತಿಗೂ ಸನಿಹ ಸಂಪೂರ್ಣ
ನೆನಪಾಗಲು ಭಾವನೆಗಳ ಸಂಘರ್ಷಣೆ
ಅವಳಾದಳು ಹೆಸರಲ್ಲಿ ಹತ್ತಿರ
ಕಲ್ಪನೆಯ ಕನಸಿನ ಚಿತ್ತಾರ
ಇದ್ದರೂ ನನ್ನಿಂದ ದೂರ ದೂರ
ದಿನವೂ ಆತ್ಮೀಯ ಮಾತಿನ ಸಾಗರ .. :)
|| ಪ್ರಶಾಂತ್ ಖಟಾವಕರ್ ||
No comments:
Post a Comment