Thursday, 24 May 2012

ಪ್ರೇಮ ರೋಗಿ .. :) :)




ಪ್ರೇಮ ರೋಗಿ .. :) :) 
*********************************

ಅವಳೇ ಅವಳೇ ಮೊದಲೇ ಹೇಳಿದಳು
ನಾ ನಿನ್ನ ಪ್ರೀತಿಸುವೆ ಎಂದು ನಾಚುತ್ತ
ನಾ ಹೇಳುವ ಮೊದಲೇ ನಗು ನಗುತ್ತ
ಮೊದಲ ಪ್ರೀತಿಯ ಸಂಭಾಷಣೆಯನ್ನು

ಮಾತುಗಳು ಮುಗಿಯುವ ಮೊದಲೇ
ಮಾತಾಡುತ್ತಿದ್ದಳು ಮುಂದೆ ಮುಂದೆ
ಅರಿಯದೆಯೇ ನನ್ನ ಮಾತುಗಳನ್ನು
ಆಕರ್ಷಿತಳಾಗಿ ನನ್ನ ನೋಡಿದೊಡನೆಯೇ

ಆದರೆ ನನ್ನ ನಿಜವಾದ ಪ್ರೀತಿಯು ಅವಳಲ್ಲ
ನನ್ನ ಸಂಭಾಷಣೆಗಲ್ಲಿ ಅಂತ್ಯವೇ ಇರಲಿಲ್ಲ
ಕೇವಲ ಮಾತು ಮಾತಿನಲ್ಲೇ ಹೊಸ ಪ್ರೀತಿ
ಕ್ಷಣ ಕ್ಷಣವೂ ನನಗದು ಹೊಸ ಹೊಸ ರೀತಿ

ಮೊದಲ ನೋಟದ ಅವಳ ತಂಗಿಯ ಮೈಮಾಟ
ಹುಟ್ಟಿಸಿತ್ತು ಹೃದಯದೊಳು ಪ್ರೀತಿಯ ಗೋಪುರವ
ಮದುವೆಯ ಮಾತುಕತೆ ಮಾಡಲು ಹೋಗಿ
          ಮಾತು ಮಾತಿನಲ್ಲೇ ನಾನಾದೆ ಪ್ರೇಮ ರೋಗಿ .. :) :)

|| ಪ್ರಶಾಂತ್ ಖಟಾವಕರ್ ||

No comments:

Post a Comment