ನಿನಗಾಗಿ ಬರೆದೆ , ಒಂದೊಳ್ಳೆ ಕವನ
ಕೇಳೀಗ ನೀನು , ಓ ನನ್ನ ಚಿನ್ನಾ ....!!
***********************
ನಿನಗಾಗಿ ಬರೆದೆ
ಒಂದೊಳ್ಳೆ ಕವನ
ಕೇಳೀಗ ನೀನು
ಓ ನನ್ನ ಚಿನ್ನಾ ....!!
ಚಿನ್ನದಾ ಬೆಲೆಯು
ಗಗನಕೆ ಮುತ್ತಿಡಲು
ನಾ ಹೇಗೆ ತರಲಿ
ನಿನಗೆ ಬಂಗಾರ
ಪ್ರೀತಿಯ ಗೋಪುರ
ಕಟ್ಟಿರಲು ಹೃದಯದಿ
ನಿನಗದು ಸಾಕಲ್ಲವೇ
ನನ್ನ ಹೃದಯವೇ ವಜ್ರ
ನಿನಗಾಗಿ ಬರೆದೆ , ಒಂದೊಳ್ಳೆ ಕವನ
ಕೇಳೀಗ ನೀನು , ಓ ನನ್ನ ಚಿನ್ನಾ ....!!
ಮನಸ್ಸೆಲ್ಲವೂ ಅಯಸ್ಕಾಂತ
ಹತ್ತಿರ ಹತ್ತಿರ ಪ್ರೀತಿಯ ಸೆಳೆತ
ಜೀವನ ಜೋಕಾಲಿ , ಆಸೆಗಳ ಆಟ
ಅನುಕೂಲ ಆಡಂಬರದ ಹುಚ್ಚು ಓಟ
ಅನಿವಾರ್ಯ ಅವಶ್ಯಕತೆಗಳ ಕಾಟ
ನಿನ್ನ ಮನವು ಬೆಳ್ಳಿಯಂತೆ ಬಿಳುಪು
ನಿನ್ನ ಹೃದಯ ಬಂಗಾರ ಹೊಳಪು
ಓ ನನ್ನ ಚಿನ್ನಾ , ಕೇಳು ನನ್ನ ಕವನ
ಆಭರಣದ ಆಸೆಯಲಿ ಅಂತ್ಯವಾಗದಿರಲಿ
ಈ ನಮ್ಮ ಪವಿತ್ರ ಪ್ರೇಮ ಬಂಧನ
ನಿನಗಾಗಿ ಬರೆದೆ , ಒಂದೊಳ್ಳೆ ಕವನ
ಕೇಳೀಗ ನೀನು , ಓ ನನ್ನ ಚಿನ್ನಾ ....!!
ನನ್ನ ಹೃದಯವೇ ವಜ್ರ
ಕೊಟ್ಟಿರುವೆ ನಿನಗದನು
ಕಳೆದು ಹೋದೀತು ಜೋಪಾನ
ಬೆಳಗಲು ಬಾ ನಮ್ಮನೇ ದೀಪವನ್ನ
ಪ್ರೀತಿಯ ಪತ್ರವು , ಎಲ್ಲವೂ ಸತ್ಯವು ....!!
ನಿನಗಾಗಿ ಬರೆದೆ , ಒಂದೊಳ್ಳೆ ಕವನ
ಕೇಳೀಗ ನೀನು , ಓ ನನ್ನ ಚಿನ್ನಾ ....!!
|| ಪ್ರಶಾಂತ್ ಖಟಾವಕರ್ ||
No comments:
Post a Comment