ನಗು ನಗುತಾ ಬಾರೇ ನನ್ನ ನಲ್ಲೆ ..... :)
*****************************************************
ನಿನ್ನ ನಗುವಿನ ಹೂಮಾಲೆ
ಹುಟ್ಟಿಸಿದೆ ಪ್ರೇಮದ ಅಲೆ
ನನ್ನೆದೆಯ ಗೋಡೆಯ ಮೇಲೆ
ಬರೆದಿದೆ ನಿನ್ನ ಪ್ರೀತಿಯ ಓಲೆ .....
ಬಾರೇ ಸನಿಹಕೆ ಓ ನನ್ನ ನಲ್ಲೆ
ದಾಟಿ ಬಂದಿರುವೆ ಆರೇಳು ಜಿಲ್ಲೆ
ಮಾಡದಿರು ಕೋಪದಿ ನೀ ಹಲ್ಲೆ
ನಗು ಮೊಗದಿ ಬಳಿ ಬಂದು ನಿಲ್ಲೇ .....
ನಿನಗಾಗಿ ತಂದಿಹೆನು ಉಡುಗೊರೆಯ
ನಮ್ಮೂರ ನೆನಪು ನೀಡುವ ಸೀರೆಯ
ಮುನಿಸು ಬಿಟ್ಟು ನೀ ಪ್ರೀತಿಯ ತೋರೆಯ
ನಗು ನಗುತಾ ನೀನೀಗ ನನ್ನ ಬಳಿ ಬರುವೆಯಾ ..... :)
|| ಪ್ರಶಾಂತ್ ಖಟಾವಕರ್ ||
No comments:
Post a Comment