Saturday 12 November 2011

ಓ ಗೆಳಯಾ ನಿನ್ನ ನೆನಪು ಕಾಡುತಿದೆ...


ಓ ಗೆಳಯಾ ನಿನ್ನ ನೆನಪು ಕಾಡುತಿದೆ...
ಇಷ್ಟ ಇದೆ ಅಂತ ಸ್ನೇಹ ಮಾಡಿದೆ...
ಕಷ್ಟ ಇದೆ ಅಂತ ನೀನು ಹೇಳಿದೆ...
ನಷ್ಟ ಬೇಡ ಅಂತ ಸಾಲ ನೀಡಿದೆ..

ಮೋಸ ಮಾಡಿ ಏಕೆ ಓಡ್ ಹೋದೆ..
ನಿನ್ನ ತುಂಬಾ ತುಂಬಾ ನಂಬಿದ್ದೆ...
ಅದೆಲ್ಲವನ್ನು ನೀನಿಲ್ಲಿ ಸುಳ್ಳಾಗಿಸಿದೆ..
ಇಂದು ನಿನ್ನ ನೆನಪು ಬಹಳ ಕಾಡುತಿದೆ.. 

ನಿನ್ನನ್ನು ಹುಡುಕಾಡಿ ಸಾಕಾಗಿ ಹೋಗಿದೆ..
ಎಲ್ಲಿದ್ದರು ಬೇಗನೆ ಬಂದು ಬಿಡಬಾರದೇ...
ನಾ ಕೊಟ್ಟ ಹಣವನ್ನು ಮರಳಿ ಕೊಡಬಾರದೇ...
ನೀ ಹೀಗೆ ನನ್ನ ಸ್ನೇಹಕ್ಕೆ ಮೋಸ ಮಾಡಬಹುದೇ..

ನೀ ಬೇಗನೆ ಬಂದು ನನ್ನ ನೋಡು...
ನಾ ಕೊಟ್ಟ ಸಾಲ ವಾಪಾಸ್ ಮಾಡು..
ಬಡ್ಡಿಯ ಚಿಂತೆಯನ್ನು ಮರೆತುಬಿಡು...
ನಾ ಕೊಟ್ಟ ದುಡ್ಡನ್ನು ಅಷ್ಟೇ ಬೇಗ ಕೊಡು... 

|| ಪ್ರಶಾಂತ್ ಖಟಾವಕರ್ ||

2 comments:

  1. ಹಹಹಹ....! ನಿಮ್ಮ ಸ್ನೇಹಿತ ಸಾಲ ತಗೋಂಡವನು ಯಾವತ್ತಿಗೂ ಬರಲ್ಲ ಅನ್ನಿಸುತ್ತೆ. ಅಲ್ಲ ಮಾರಾಯ್ರೆ ಅವನು ಈ ಕನ್ನಡ ಬ್ಲಾಗ್ ನಲ್ಲಿ ಸದಸ್ಯನಾಗಿದ್ದಾನೋ ಅಂತ ಅನುಮಾನ ಕಾಡುತ್ತಿದೆ. ಅಂತೂ ಮನುಷ್ಯನ ಒಂದು ನಿತ್ಯ ಜಂಜಡವನ್ನು ಕವಿತೆಯಲ್ಲಿ ಮನಮುಟ್ಟುವಂತೆ ಹರವಿ ಬಿಟ್ಟಿದ್ದೀರಿ ಪ್ರಶಾಂತ್.ನಿಮ್ಮ ಈ ಕವಿತೆಯ ಆರ್ತಸ್ವರವನ್ನಾದರೂ ಕೇಳಿ ಹಣ ವಾಪಾಸ್ಸು ಬರಲ್ಲಿ. ಓದುತ್ತಿದ್ದಂತೆ ಕೋಮಲಣ್ಣನ ಹಾಸ್ಯ ನೆನಪಿಗೆ ಬಂತು.

    ReplyDelete
  2. ಸಾಲ ವಸೂಲಾತಿ ಕವನ. ಶೀಘ್ರಮೇವ ಕಾಸು ವಾಪಸಾತಿ ಪ್ರಾಪ್ತಿರಸ್ತು.

    ReplyDelete