
ನಾ ಹೋಗುತಿದ್ದ ರಸ್ತೇಲಿ ನೀನೇಕೆ ಬಂದೆ.....
ನನ್ನ ಹಿಂದೆ ಮುಂದೆ ನಾ ಬೇಡವೆಂದರೂ ಬಂದೆ
ಅವಸರವಸರವಾಗಿದ್ದರುನೂ ನೀ ಎನ್ನ ಬಿಡದೆ ಬಂದೆ
ಬರಬೇಡೆನ್ನಜೊತೆಗೂಡಿ ಎಂದರು ಓಡೋಡಿ ಬಂದೆ
ಉರಿಬಿಸಿಲ ತಾಳದೆ ನಾನೊಮ್ಮೆ ನಿನ್ನ ನೋಡಿದೆ.....
ಹೇಳಿದರು ಕೇಳದೆ ನೀ ಬಿಡಲಿಲ್ಲ ನನ್ನನು ಆ ಉರಿಬಿಸಿಲಲಿ
ರೂಪವಿಲ್ಲದ ನಿನ್ನ ರೂಪವನ್ನು ಹೇಗೆ ಗುರುತು ಹಿಡಿಯಲಿ
ರೂಪವಿಲ್ಲದ ನಿನ್ನ ನಾನು ನನ್ನ ನೆರಳೆಂದು ಹೇಗೆ ನಂಬಲಿ
ನಿನ್ನ ರೂಪವನ್ನು ತಿಳಿಯಲು ನಾನ್ಯಾವ ಕಾರ್ಯ ಮಾಡಲಿ......
ನೀ ಬಂದರೆ ಬೆಳಕಲ್ಲಿ ಕಪ್ಪಾಗಿ...
ನಂಬುವೆನು ನೀ ಎನ್ನ ನೆರಳೆಂದು
ನೀ ಬಂದರೆ ಕತ್ತಲಲ್ಲಿ ಬಿಳುಪಾಗಿ..
ನಾ ಹೇಗೆ ನಂಬಲಿ ನೀ ಎನ್ನ ನೆರಳೆಂದು... :)
ಕಪ್ಪು = ನೆರಳು
ಬಿಳುಪು = ?
No comments:
Post a Comment