Tuesday, 8 November 2011

ಇದು ಮರಗಳು ಆಡೋ ಮಾತು.... ನನ್ನ ಮನದಲ್ಲಿ ಹೇಗೋ ಬಂತು....


ಯಾರೋ ಒಬ್ಬರು ಬರ್ತಾರೆ....
ನನ್ನ ನೋಡಿ ಖುಷಿ ಪಡ್ತಾರೆ...
ಇನ್ನು ಒಬ್ಬರು ಬರ್ತಾರೆ...
ನನ್ನ ನೋಡಿ ಕಲ್ಪವೃಕ್ಷ ಅಂತಾರೆ...

ಮತ್ತೊಬ್ಬರು ಇಲ್ಲಿ ಬರ್ತಾರೆ..
ನನ್ನ ಚಿತ್ರ ಅವರೆಲ್ಲಾ ಬರಿತಾರೆ...
ಮತ್ಯಾರ್ಯಾರೋ ಇಲ್ಲಿ ಬರ್ತಾರೆ...
ನನ್ನ ಫೋಟೋ ಬಹಳ ಬಹಳ ತೆಗಿತಾರೆ..

ಎಷ್ಟೊಂದು ಕವಿಗಳು ಎಲ್ಲಾ ಬರ್ತಾರೆ...
ನನ್ನ ನೋಡಿ ಕಲ್ಪನೆ ಮಾಡಿ ಏನೆಲ್ಲಾ ಬರಿತಾರೆ..
ಆಮೇಲೆ ಇಲ್ಲಿ ಎಲ್ಲಿಂದಲೋ ಯಾರೋ ಬರ್ತಾರೆ...
ನನ್ನ ನೋಡಿ ಮೆಚ್ಚುತ್ತಾರೆ.... ಮಚ್ಚು ಕೊಡಲಿ ತರ್ತಾರೆ...

ಚೆನ್ನಾಗಿ ನನಗೆ ಹೊಡಿತಾರೆ.. ಗರಗಸ ತಂದು ಕೊಯ್ತಾರೆ...
ನನ್ನ ಇಲ್ಲಿ ಏನೇನೋ ಮಾಡಿ ಜೀವ ಇಲ್ಲದ ವಸ್ತು ಮಾಡಿಡ್ತಾರೆ...
ಆಮೇಲೆ ನನ್ನ ಗೆಳಯ ಗೆಳತಿಯರ ಹುಡುಕಲು ಹೋಗ್ತಾರೆ..
ಅವರನ್ನು ಕೂಡ ಸಿಕ್ಕ ಸಿಕ್ಕಲ್ಲೇ ಕತ್ತರಿಸಿ ಬಿಸಾಡ್ತಾರೆ....

ಯಾಕ್ರಪ್ಪೋ ಯಾಕ್ರಪ್ಪೋ ಹಿಂಗೆ 
ಸುಮ್ಕೆ ಇರೋಕ್ ಅಗಲ್ವೇನ್ರೋ ನಿಮ್ಗೆ
ಕೊಚ್ಚಿ ಕೊಚ್ಚಿ ಹಾಕ್ತೀರ್ಲಲ್ರೋ ಹಂಗೆ..
ಬದುಕೋದ್ ಕಷ್ಟ ಕಣ್ರೋ ಭೂಮಿಮ್ಯಾಗೆ...


( ಇದು ಮರಗಳು ಆಡೋ ಮಾತು
ನನ್ನ ಮನದಲ್ಲಿ ಹೇಗೋ ಬಂತು )


|| ಪ್ರಶಾಂತ್ ಖಟಾವಕರ್ ||
****************************************************************************************


ಯಾರೋ ಒಬ್ಬರು ಬರ್ತಾರೆ....

ನನ್ನ ನೋಡಿ ಖುಷಿ ಪಡ್ತಾರೆ...


ಇನ್ನು ಒಬ್ಬರು ಬರ್ತಾರೆ...

ನನ್ನ ನೋಡಿ ಕಲ್ಪವೃಕ್ಷ ಅಂತಾರೆ...


ಮತ್ತೊಬ್ಬರು ಇಲ್ಲಿ ಬರ್ತಾರೆ..

ನನ್ನ ಚಿತ್ರ ಅವರೆಲ್ಲಾ ಬರಿತಾರೆ...


ಮತ್ಯಾರ್ಯಾರೋ ಇಲ್ಲಿ ಬರ್ತಾರೆ...

ನನ್ನ ಫೋಟೋ ಬಹಳ ಬಹಳ ತೆಗಿತಾರೆ..


ಎಷ್ಟೊಂದು ಕವಿಗಳು ಎಲ್ಲಾ ಬರ್ತಾರೆ...

ನನ್ನ ನೋಡಿ ಕಲ್ಪನೆ ಮಾಡಿ ಏನೆಲ್ಲಾ ಬರಿತಾರೆ..


ಮೇಲೆ ಇಲ್ಲಿ ಎಲ್ಲಿಂದಲೋ ಯಾರೋ ಬರ್ತಾರೆ...

ನನ್ನ ನೋಡಿ ಮೆಚ್ಚುತ್ತಾರೆ.. ಮಚ್ಚು ಕೊಡಲಿ ತರ್ತಾರೆ...


ಚೆನ್ನಾಗಿ ನನಗೆ ಹೊಡಿತಾರೆ.. ಗರಗಸ ತಂದು ಕೊಯ್ತಾರೆ...

ನನ್ನ ಇಲ್ಲಿ ಏನೇನೋ ಮಾಡಿ ಜೀವ ಇಲ್ಲದ ವಸ್ತು ಮಾಡಿಡ್ತಾರೆ...


ಆಮೇಲೆ ನನ್ನ ಗೆಳಯ ಗೆಳತಿಯರ ಹುಡುಕಲು ಹೋಗ್ತಾರೆ..

ಅವರನ್ನು ಕೂಡ ಸಿಕ್ಕ ಸಿಕ್ಕಲ್ಲೇ ಕತ್ತರಿಸಿ ಬಿಸಾಡ್ತಾರೆ..


ಯಾಕ್ರಪ್ಪೋ ಯಾಕ್ರಪ್ಪೋ ಹಿಂಗೆ 

ಸುಮ್ಕೆ ಇರೋಕ್ ಅಗಲ್ವೇನ್ರೋ ನಿಮ್ಗೆ

ಕೊಚ್ಚಿ ಕೊಚ್ಚಿ ಹಾಕ್ತೀರ್ಲಲ್ರೋ ಹಂಗೆ..

ಬದುಕೋದ್ ಕಷ್ಟ ಕಣ್ರೋ ಭೂಮಿಮ್ಯಾಗೆ...( ಇದು ಮರಗಳು ಆಡೋ ಮಾತು
ನನ್ನ ಮನದಲ್ಲಿ ಹೇಗೋ ಬಂತು )|| ಪ್ರಶಾಂತ್ ಖಟಾವಕರ್ ||

No comments:

Post a Comment