Wednesday 9 November 2011

ಕಲ್ಪನೆಗಳಿಗೆಲ್ಲಾ ನಾನೇ ಇಲ್ಲಿ ಕಥೆಗಾರ.... :)


ಜಂಭದ ಭಂಗಿಯೊಳು ನೀ ನಿಂತಿರಲು...
ಜಂಭದ ಆ ಹುಡುಗಿಯು ನೆನಪಾದಳು...
ಜಂಭದಾ ಹುಡುಗಿನಾ ಎಂದು ಕೇಳಲು...
ಬಿಂದಾಸ್ ಹುಡುಗಿ ಎಂದು ನೀ ಹೇಳಲು..
ಆ ನನ್ನ ಬೆಡಗಿಯು ನಿನ್ನಿಂದ ಬೇರಾದಳು..

ಎಲ್ಲಿಂದಲೋ ಬರುತಿವೆ ಹಳೆ ನೆನಪುಗಳು...
ಯಾರೋ ಒಬ್ಬಳು.. ಗೆಳತಿಯ ನೆನಪುಗಳು..
ಕೈ ಬಳೆಗಳ ನೋಡಲು.. ಬಂದವು ನೆನಪುಗಳು..
ಹುಡುಕಿದಾಗ ಮನದೊಳು.. ಕಾಣದ ನೆನಪುಗಳು..
ಅಲ್ಲೆಲ್ಲೋ ಬಚ್ಚಿಟ್ಟುಕೊಂಡಿವೆ ಆ ಎಲ್ಲಾ ನೆನಪುಗಳು..

ಎರಡು ಮೊಳ ಹೂವನ್ನು ಮುಡಿದು...
ನಾಲ್ಕು ಬಳೆಗಳ ಮಣಿಕಟ್ಟಲ್ಲಿ ಹಿಡಿದು..
ಮುತ್ತಿನ ಸರವಾ ಕೊರಳಲ್ಲಿ ಬಿಗಿದು..
ಹಣೆಯಲ್ಲಿ ಇರುವ ಸಿಂಧೂರವು ಸಣ್ಣದು..
ಶೃಂಗಾರ ಸೀರೆಯು ಸೊಗಸಾಗಿರುವುದು..

ನೀ ಕಂಡ ಹಾಗೆ ನನ್ನ ನೆನಪುಗಳು ಇಲ್ಲ..
ಆ ನನ್ನ ಬೆಡಗಿಯ ಸ್ವರೂಪವೇ ಇದಲ್ಲ....
ಎಲ್ಲೆಲ್ಲೋ ಕಾಣುವ ಆ ಕಪ್ಪು ಛಾಯೆ ನೀನಲ್ಲ..
ಆ ನಿನ್ನ ಕೈ ಬಳೆಗಳು ಮಾತ್ರ ನನ್ನ ಕಾಡುತಿವೆಯಲ್ಲ..
ಕನಸಲ್ಲಿ ಕಾಣುವ ಆ ನನ್ನ ಛಾಯೆಯ ನೆನಪಾಯಿತಲ್ಲ....

ನೆನಪುಗಳು ಮಾತ್ರ ಇರಲು ನನ್ನ ಹತ್ತಿರ
ನಾನು ಹೇಗೆ ಹೇಳಲಿ ಆ ಗೆಳತಿಯ ವಿವರ..
ಎಲ್ಲವೂ ಮರೆತು ಮುಗಿದು ಹೋಗಿದೆ ದೂರ...
ಅವಳ ನೆನಪಿನಲ್ಲಿ ನನ್ನ ಮನವು ಈಗ ಭಾರ...
ಕನಸಲ್ಲಿ ಕರಿ ಛಾಯೆಗಳೇ ಸಾವಿರ ಸಾವಿರ...

ಆ ಛಾಯೆಯ ವರ್ಣನೆಯ ಕಲ್ಪನೆಗಳಿಗೆಲ್ಲಾ ನಾನೇ ಇಲ್ಲಿ ಕಥೆಗಾರ.... :)

|| ಪ್ರಶಾಂತ್ ಖಟಾವಕರ್ ||

No comments:

Post a Comment