ಕಥೆ ಕವನ ನಗೆಹನಿ ಹಾಡುಗಳು.... ಮನದಿ ಮೂಡಿದ ಸುಂದರ ಸಾಲುಗಳು.... ಹೊಸ ವಿಷಯ ಬರೆವ ಹಂಬಲ.... ಪ್ರೀತಿಯ ದೇಗುಲದ ಕದ ತೆರೆಯುವ ಕಾಲ.... ಕನಸನ್ನು ಕಥೆಯಾಗಿಸಿ , ಮನ ಮೆಚ್ಚಿಸುವ.... ಅಕ್ಷರ ರೂಪದಿ ಸತ್ಯದ ಅರಿವನ್ನು ತೋರುವ.... ಕ್ಷಣ ಮಾತ್ರದಿ ಸ್ನೇಹದ ಸಾಗರ ನಿರ್ಮಿಸುವ.... ಈ ಸುಂದರ ಸಾಹಿತ್ಯ ಲೋಕಕೆ ಸರ್ವರಿಗೂ ಸುಸ್ವಾಗತ.... :)
Saturday, 31 December 2011
Friday, 30 December 2011
" ಸಿಂಗ್ ಇಸ್ ಕಿಂಗ್ "
ಮಹೇಂದ್ರ ಎಂಬ ಮಹಾರಾಜನು
ವೀರೇಂದ್ರ ಎಂಬ ಯುವರಾಜನು
ಗಂಭೀರ ಚಿಂತನೆಯ ಮಹಾಮಂತ್ರಿ
ಹೆಸರಿಗೆ ನಾನಿಲ್ಲಿ ಯುವರಾಜನು
ಆದರೆ ರಣರಂಗದಲ್ಲಿ ನಾನೇ ಸೇನಾಪತಿ
ಕೈಯಲ್ಲಿ ಒಂದು ಖಡ್ಗ ನನ್ನ ಆಯುಧ
ಒಂದೇ ಹೊಡೆತದಿ ಚೆಂಡುಗಳು ಹಾರುವವು
ರುಂಡ ಮುಂಡಗಳು ಬೇರಾಗಿ ಬರುವ ಕೂಗು
ಸುತ್ತ ನಿಂತ ಸತ್ತ ದೇಹಗಳ ನೋಡಿ ಕಿರುಚುವರು
ನಮ್ಮವರು ಯುದ್ದ ಗೆದ್ದ ಸಂತಸದಿ ಸಂಭ್ರಮಿಸುವರು
ನಾ ಹಿಡಿದ ಬ್ಯಾಟು ನನ್ನ ಮಂತ್ರ ದಂಡ
ನಾ ಹೊಡೆಯುವ ಹೊಡೆತಕೆ ಕುಗ್ಗುವ ಎದುರಾಳಿ
ಎಸೆತಗಾರರೆಲ್ಲಾ ಇಲ್ಲಿ ದಂಡ ಪಿಂಡಗಳು
ಹೋರಾಟದ ಕೊನೆವರೆಗೂ ಅವರ ಗೋಳಾಟ
ಆರು ಆರು ಎಂದು ಮೇಲೆ ಹಾರುವ ನನ್ನ ಆಟ
ಎಡಗೈಯ ಐದು ಬೆರಳುಗಳು ಮಾಡುವ ಜಾದೂ
ಗುಂಡಿನಾ ದಾಳಿಗಳ ದಿಕ್ಕುಗಳು ಇಲ್ಲಿ ಅದಲು ಬದಲು
ಎದುರಾಳಿ ವೀರರೆಲ್ಲಾ ದಿಕ್ಕಾಪಾಲಾಗಿ ಬಿಟ್ಟೋಡಲು
ಮೆಲ್ಲ ಮೆಲ್ಲನೇ ಎಸೆಯುವ ನನ್ನ ನೇರ ಬಾಣಗಳು..
ಅಪರೂಪಕ್ಕೊಮ್ಮೆ ಅತ್ಯದ್ಭುತ ತಿರುಗುಬಾಣಗಳು..
ಮೈದಾನದೊಳು ನಾ ಹಾರಲು ಹಕ್ಕಿಯಂತೆ
ಹಿಡಿಯಲು ನನ್ನತ್ತ ಬರುವ ಚೆಂಡುಗಳ
ನನ್ನ ಕೈಗಳು ಅವುಗಳ ಪಾಲಿಗೆ ಕಬ್ಬಿಣದ ಬಲೆಯಂತೆ
ನಾ ನಿಂತರೆ ಎದುರಾಳಿಯ ಎದುರಲ್ಲಿ
ಅವರಲ್ಲಿ ನನ್ನೊಡನೆ ಯುದ್ಧ ಮಾಡಲು ಭಯವಂತೆ
ಯಾಕೆ ಏನು ಎಲ್ಲಾ ನಿಮಗೆ ಗೊತ್ತೇ.... ?????
ಹಹ್ಹಹ್ಹಹ್ಹಹಃ. ... :)
ಯಾಕಂದ್ರೆ... ನಾನೇ...
* ಯುವರಾಜ ಸಿಂಗ್ *
" ಸಿಂಗ್ ಇಸ್ ಕಿಂಗ್ "
|| ಪ್ರಶಾಂತ್ ಖಟಾವಕರ್ ||
ಪ್ರೇಮ ಬಾಣ. :) .. 》=====>$>
ನಮ್ಮ ಈ ಒಂದು ಪ್ರೇಮ ಬಾಣ ಚಿತ್ರವನ್ನು ಕಂಡು
ನಮಗಾಗಿ "ತಿರುಮಲೈ ರವಿ" ಸರ್ ಅವರು ಬರೆದ ಕವನ.. :)
****************************************
ಪ್ರೇಮದ ಬಾಣಕ್ಕುಂಟು
ನಿಖರವಾದ ಗಮ್ಯ
ತಾಗಿದರದು ಅದನು
ಬಾಳೆಲ್ಲಾ ರಮ್ಯ
ಪ್ರಶಾಂತನ ಪ್ರೇಮಕೆ
ಬಾಣವೇಕೆ ಬೇಕು
ಪದ್ಯಗಳ ಪುಂಜಗಳೇ
ಪ್ರೇಮವುಕ್ಕಲು ಸಾಕು
ಸಿಗಲವಗೆ ಅವನ ಬಯಕೆ
ಮನದುಕ್ಕಲಿ ಲವಲವಿಕೆ
ಬಯಸಿದಂತೆ ಸಾಗಲವಗೆ
ಅವನ ಬಾಳ ನೌಕೆ
ಹೊಸವರ್ಷದ ಹೊಸಪರ್ವದಿ
ಸರ್ವ ಸುಖವು ಸಿಗಲವಗೆ
ನೂರುಕಾಲ ಸೌಖ್ಯದಿಂದ
ಶಾಂತಿಯಿರಲಿ ಬಾಳಲವಗೆ
ಅವರ ಬ್ಲಾಗ್`ಗೆ ಭೇಟಿ ಕೊಡಲು ಇಲ್ಲಿ ಒತ್ತಿರಿ.. ----> ದಾಸರದಾಸ
(ಸೂಚನೆ : ಅವರ ಹೆಸರನ್ನು ಒತ್ತಿರಿ .. ಅವರ ಫೆಸ್`ಬುಕ್'ಗೆ ಭೇಟಿ ಮಾಡಲು)
ಜಲ ಧಾರೆ
ಜಲ ಧಾರೆ
+++++++
ನನಗೆ ಬೇಕಿಲ್ಲ ಯಾವುದೇ ರಸ್ತೆ
ರೈಲು ಕಂಬಿಗಳೂ ನಾ ನಡೆಯಲು
ನುಗ್ಗುವೆ ಸಿಕ್ಕ ಸಿಕ್ಕ ಕವಲುದಾರಿಗಳಲ್ಲೇ
ನಾನು ಚಂಚಲೆ ಒಂದು ಕಡೆ ನಿಲ್ಲಲಾಗದು
ಗಾಳಿಯು ಕೈ ಬೀಸಿ ಕರೆದಲ್ಲಿಗೆ ನನ್ನ ಓಟ
ಕಲ್ಲು ಕಣಿವೆಗಳಲ್ಲೂ ನಾನಾಡುವೆ ಆಟ
ನನ್ನ ನೋಡಿ ಕಲಿಯಿರಿ ಜೀವನದ ಒಂದು ಪಾಠ
"ದುಡಿಮೆಯೇ ದೇವರು"
ನಾ ದುಡಿಯುವುದು ಪ್ರಕೃತಿಗಾಗಿ..
ಪ್ರಕೃತಿ ಮಾತೆ ನನ್ನ ತಾಯಿ
ಅವಳ ಸೌಂದರ್ಯ ಹೆಚ್ಚಿಸಲು
ನಿಲ್ಲದ ನನ್ನ ಬಾಳಿನ ಪ್ರಯಾಣ
ಬೇಕೆಂದ ಕಡೆ ನನಗೆ ನಿಲ್ದಾಣ
ನನ್ನ ನಂಬಿ ಬದುಕಿರುವ ಜೀವ ಸಂಕುಲ
ಪ್ರಾಣಿ ಪಕ್ಷಿಗಳ ಪಾಲಿನ ಅಮೃತ
ನನ್ನ ಸದುಪಯೋಗವೇ ಸ್ವರ್ಗ ಸುಖ
ದೇವಲೋಕಕ್ಕೆ ಸಮ ಜಗದೊಳಗಿನ ಈ ಜೀವನ... :)
|| ಪ್ರಶಾಂತ್ ಖಟಾವಕರ್ ||
Monday, 26 December 2011
ಹ್ಹಹ್ಹಹ್ಹಹ್ಹಾ.. ವಿಶೇಷ ಆಟವಿದು....
ಹ್ಹಹ್ಹಹ್ಹಹ್ಹಾ.. ವಿಶೇಷ ಆಟವಿದು....
XXXXXXXXXXXXXXXXXXXX
ವಿಶೇಷ ಆಟವಿದು, ಭಾರತದಲ್ಲಿ ಶ್ರೇಷ್ಟವಿದು,
ಪ್ರೇಕ್ಷಕರಿಗೆ ರೋಚಕವಿದು, ನನ್ನ ಆಟವಾ ನೋಡುವುದು..
ಅಹಹ್ಹಹ್ಹಹ್ಹಹ್ಹಹ್ಹಾ....
ಒಹ್ ಹೋ ಬೌಲರ್`ಗಳೇ , ಆ ಹಾ ಫೀಲ್`ಡರ್ರುಗಳೇ,
ಹಿಂದೆ ನಿಂತ ಕೀಪರು.. ಅಹಹ್ಹಹ್ಹ....
ನೀವು ಏನು ಮಾಡುವಿರಿ.....
ಬ್ಯಾಟು ಬೀಸಲು ನಾನು, ವಾಹ್ ಅದ್ಭುತ ಹೊಡೆತಗಳು..
ಅದು ನನಗೆ ಬಲು ಸಲೀಸು.. ಅಹಹ್ಹಹ್ಹ...
ಇಷ್ಟು ಸಾಕೆ ನಿಮಗೆ....
ಬೌಲರ್`ಗಳು ನಡುಗಲು, ಪ್ರೇಕ್ಷಕರೆಲ್ಲ ಕೂಗಲು,
ಅಯ್ಯೋ ಫೀಲ್`ಡರ್ರುಗಳಿಗೆ ಗೋಳು... ಅಹಹ್ಹಹ್ಹ...
ನಾನು ವೀರು.. ಎಂಬ ವೀರನು... :)
"ಖಟಾವಕರ್ ಪ್ರಶಾಂತ್"
Saturday, 24 December 2011
ಮುತ್ತಿನ ಹಾರ....!!
ಮುತ್ತಿನ ಹಾರ
%%%%%%%%%%%%
ಯಾರು ಕಾಣದ
ಕನಸನು ಈಗ
ನಾನಿಲ್ಲಿ ಕಂಡೆ
ಅದರೊಳು ನೀನು
ರಾಣಿಯಂತೆ ಇದ್ದೆ
ಬಂದೆ ನೀನು ಎದುರಿಗೆ
ಬಿಳಿಯ ಸೀರೆಯ ಉಟ್ಟು
ಕಣ್ಣುಗಳೆರಡು ಕೆಂಪಾಗಿತ್ತು
ಗೆಜ್ಜೆಯ ಸದ್ದು ಜೋರಾಗಿತ್ತು
ನಿನ್ನ ನಗುವೇ ಹಾಡಾಗಿತ್ತು
ನಿನ್ನ ರೂಪವು ಹೊಳೆಯುತ್ತಿತ್ತು
ನೋಡಲು ತುಂಬಾ ಮಜವಾಗಿತ್ತು
ಆದರು ತುಂಬಾ ಭಯವಾಗಿತ್ತು
ನನ್ನ ಹೆಸರು ನಿನಗೆ ತಿಳಿದಿತ್ತು
ಕೂಗಿದೆ ನೀನು
ನನ್ನನು ಬಳಿಗೆ
ಹೇಳಿದೆ ನೀನು
ಜನುಮದ ಕಥೆಯ
ಕಥೆಯೊಳು ನಾನು
ಪ್ರೀತಿಯ ಇನಿಯ
ಆಣೆಯ ಮಾಡಿ
ಮನಸ್ಸನ್ನೂ ನೀಡಿ
ನಿನ್ನ ಸೇರದೆ ಹೋಗಿದ್ದೆ
ನೂರು ಗುಂಡುಗಳು....
ನನ್ನ ಎದೆಯನು ಬಗೆದು
ಯುದ್ದದಿ ವೀರ ಮರಣವ
ಪಡೆದ ಸೈನಿಕ ಎಂದು
ಜನುಮ ಜನುಮದ
ಆ ಪ್ರೇಮವ ನೆನಪಿಸಲು
ನನ್ನ ಹೃದಯವು
ಗಡ ಗಡನೆ ನಡುಗಲು
ಕೇಳಿದೆ ನಿನ್ನ ನಾನು
ಹೇಳಲು ನಿನ್ನ ಕಥೆಯನ್ನು
ಪ್ರೀತಿಯ ನೆನಪಲ್ಲಿ ನೀನು
ಪ್ರೇತವು ಆತ್ಮವು ಭೂತವು
ನನಗಾಗಿ ಕಾಯುತ
ಊರಲ್ಲೆಲ್ಲಾ ಅಲೆದಾಡುತ
ಭಯದೊಳು ನಾನು
ನಂಬಲು ನಿನ್ನನ್ನು
ಮುಂದೇನೆಂದು ತಿಳಿಯದೆ
ಸಾಕ್ಷಿಯ ನೀಡಲು ಕೇಳಿದೆ
ನನ್ನ ಎದೆಯೊಳು ಸಿಕ್ಕ
ನೂರು ಗುಂಡುಗಳ ಹಾರವು
ನಿನ್ನ ಕೊರಳಲ್ಲಿ ಇತ್ತು
ಉದ್ದನೆಯ ಕೂದಲ ರಾಶಿಯ
ನಡುವಿನಲ್ಲಿ ಮರೆಯಾಗಿತ್ತು
ಹರಡಿದ ಕೂದಲ ಸರಿಸಿ
ಗುಂಡುಗಳ ಹಾರವ ತೋರಿಸಿ
ನಾನೇ ನಿನ್ನ ಪ್ರೇಯಸಿ
ಬಂದಿರುವೆ ನಿನ್ನನ್ನೇ ಬಯಸಿ
ಎಂದು ನೀನು ನಗು ನಗುತಾ ಹೇಳಿದೆ
ಆ ಕ್ಷಣದೊಳು ತರ ತರ ನಾ ಹೆದರಿದೆ
ಮುಂಜಾನೆಯಲ್ಲಿ ಕೋಳಿ ಕೂಗಿತ್ತು
ಸೂರ್ಯನ ಬೆಳಕಿನ ಕಿರಣಗಳು
ಕಿಟಕಿಯೊಳಗಿಂದ ನನ್ನ ಮೇಲೆ ಬಿದ್ದು
ಕನಸು ಮುಗಿಯದೇ ನಿದ್ದೆಯಿಂದ ಎದ್ದು
ನೋಡಿದೆ ಒಂದು ವಿಶೇಷ ವಿಚಿತ್ರವ
ಹಾಸಿಗೆ ಮೇಲೆ ಗುಂಡುಗಳ ಹಾರವ
ಎದೆಯೊಳು ಏರಿತು ಸದ್ದು ಡವ ಡವ
ಕನಸಿನ ಪ್ರೇತವು ಭೂತವು ನಿಜವ.... ?
ಕಣ್ಣುಗಳ ಒಮ್ಮೆ ತಿಕ್ಕಿ ನೋಡಿದೆ
ಅಬ್ಬಾ..!! ನಿಶ್ಚಿಂತೆಯಿಂದ ಉಸಿರೆಳೆದೆ
ಗುಂಡುಗಳ ಹಾರವು ಅಲ್ಲ ಅದು..
ನನ್ನ ಪತ್ನಿಯ ಮುತ್ತಿನ ಹಾರ.... :)
|| ಪ್ರಶಾಂತ್ ಖಟಾವಕರ್ ||
Tuesday, 20 December 2011
ಪ್ರಥಮ ಪ್ರಯತ್ನ
****************
ಒಂದು
ಮುತ್ತಿನ
ಕಥೆ
ಒಂದು
ಮುತ್ತಿನ
ಕಥೆ
ಓಹೋ.. ಸ್ನೇಹಿತರೆ.. ನಾವು ಹೇಳ್ತೀವಿ ಕನ್ನಡ ಕವನ
ಸುಂದರ ಕನ್ನಡ
ಸವಿನುಡಿ ಕನ್ನಡ
ಯಾಕೆ ಇಲ್ಲಿ ರೀಮೇಕು ರೀಮೇಕು ರೀಮೇಕು ರೀ....
ಬೇಕು ಇಲ್ಲಿ ಸ್ವಮೇಕು ಸ್ವಮೇಕು ಸ್ವಮೇಕು ರೀ....
ಅರ್ಥ ಆಯಿತಾ
ಯಾಕೆ ಇಲ್ಲಿ ರೀಮೇಕು ರೀಮೇಕು ರೀಮೇಕು ರೀ....
ನೆನಪಲ್ಲಿ ಇಟ್ಕೊಳ್ಳಿ
ಬೇಕು ಇಲ್ಲಿ ಸ್ವಮೇಕು ರೀ....
ಮೊದಲನೇ ಬಣ್ಣ ಅರಿಶಿನ ಅರಿಶಿನ
ಅರಿಶಿನ ಎಂದರೇ ಹಳದಿಯು
ಹಳದಿಯ ಕೆಳಗಿದೆ ಕುಂಕುಮ ಕುಂಕುಮ
ಕುಂಕುಮ ಎಂದರಿಲ್ಲಿ ಕೆಂಪು
ಯಾಕೆ ಇಲ್ಲಿ ರೀಮೇಕು ರೀಮೇಕು ರೀಮೇಕು ರೀ....
ಬೇಕು ಇಲ್ಲಿ ಸ್ವಮೇಕು ಸ್ವಮೇಕು ಸ್ವಮೇಕು ರೀ....
ಹೊಳಪಿನ ಕಾರಣವು ಕೆಂಪು
ಉಳಿಸಿರಿ ಉಳಿಸಿರಿ ಬೆಳಸಿರಿ ಬೆಳಸಿರಿ
ನಮ್ಮ ಕನ್ನಡ ಚಿತ್ರೋದ್ಯಮವ
ಯಾಕೆ ಇಲ್ಲಿ ರೀಮೇಕು ರೀಮೇಕು ರೀಮೇಕು ರೀ....
ಬೇಕು ಇಲ್ಲಿ ಸ್ವಮೇಕು ಸ್ವಮೇಕು ಸ್ವಮೇಕು ರೀ....
ಬಂಧು ಮಿತ್ರರೇ ಅರ್ಥ ಮಾಡ್ಕೊಳ್ಳಿ
ಸ್ವಲ್ಪ ನಮ್ಮ ಕನ್ನಡದ ವಿಚಾರ ತಿಳ್ಕೊಳ್ಳಿ
ಸವಿ ಸವಿ ನೆನಪು ಸವಿ ಸವಿ ನೆನಪು ಹಳೆ ಹಳೆ ಹಾಡು ಹಳೆ ಹಳೆ ಹಾಡು
ನಿಮಗಿದು ನೆನಪಿದೆಯ
ಒಂದು ಮುತ್ತಿನ ಕಥೆ
ಒಂದು ಎರಡು ಮೂರು ನಾಲ್ಕು ಆಮೇಲೆ ಏನು
ಅಬ್ಬಬ್ಬಾ ಅದೆಂತಹಾ ಅದ್ಭುತ ಸಾಹಿತ್ಯ ಮತ್ತು ಸಂಗೀತ
ಈಗ ಅದೇ ಚಿತ್ರದ ಮತ್ತೊಂದು ಸುಂದರವಾದ ಹಾಡು
ಪ್ರೀತಿಯ ಹಾಡು
ಕೇವಲ ಕನ್ನಡ
ಮುತ್ತೊಂದ ತಂದೆ ಕಡಲಾಳದಿಂದ
ಅದೇ ಅಂದ ಇಲ್ಲಿ ಕಂಡೆ
ನೀನಿಲ್ಲಿ ಕಂಡ ಅದೇ ಅಂದಕ್ಕಿಂತ
ನೀನೆ ಚೆಂದ ನನ್ನಾಣೆಗೂ
ಮುತ್ತಂತೆ ಮೊಗವಿದೆ , ಮುತ್ತಂತೆ ಗುಣವಿದೆ
ಮುತ್ತಂತೆ ಮನಸ್ಸಿದೆ , ಮುತ್ತಂತೆ ಚೆಲುವಿದೆ....
ಆಆ.. ಅಲೆಗಳು ಮೇಲೇಳುತ
ನೀ ನುಡಿದ ಆ ನುಡಿಗೆ ನೋಡು ಕುಣಿದಿವೆ
ತಂಗಾಳಿಯು ಮೈ ಸೋಕುತ
ನೀ ಬಳಿಗೆ ಹೋಗೆನುತ ನನ್ನ ನೂಕಿದೆ....
ಇನ್ನು ಮುದ್ದು ಹೆಣ್ಣೆ ನಿನ್ನ ಬಿಡೆ ಎಂದೆಂದು
ನನ್ನ ಮುದ್ದು ಗಂಡೆ ನೀನೆ ಪ್ರಾಣ ಎಂದೆಂದು
ಮುತ್ತೊಂದ ತಂದೆ ಕಡಲಾಳದಿಂದ.......!!!!
ಅದೆಂತಹಾ ಸೊಗಸಾದ ಸಾಹಿತ್ಯ ಸುಮಧುರ ಸಂಗೀತ
ಎಂದೆಂದೂ ಮರೆಯಲಾಗದ ಹಾಡುಗಳು
ಯಾಕೆ ಇಲ್ಲಿ ರೀಮೇಕು ರೀಮೇಕು ರೀಮೇಕು ರೀ....
ಬೇಕು ಇಲ್ಲಿ ಸ್ವಮೇಕು ಸ್ವಮೇಕು ಸ್ವಮೇಕು ರೀ....
ಯಾಕೆ ಇಲ್ಲಿ ರೀಮೇಕು ರೀಮೇಕು ರೀಮೇಕು ರೀ....
ಬೇಕು ಇಲ್ಲಿ ಸ್ವಮೇಕು ಸ್ವಮೇಕು ಸ್ವಮೇಕು ರೀ....
ಸವಿನುಡಿ ಕನ್ನಡ
|| ಪ್ರಶಾಂತ್ ಖಟಾವಕರ್ ||
ದಾವಣಗೆರೆ..
Monday, 19 December 2011
ಪ್ರೇಮಿಯ ಪ್ರಾರ್ಥನೆ ಪ್ರೀತಿಯ ಪ್ರಪಂಚದಲ್ಲಿ
ಪ್ರೇಮಿಯ ಪ್ರಾರ್ಥನೆ ಪ್ರೀತಿಯ ಪ್ರಪಂಚದಲ್ಲಿ
********************************
ಮುದ್ದು ಮುದ್ದು ಮಾಯೆಯು ಮನದಲ್ಲಿ
ಕಿಲ ಕಿಲನೆ ಕನಸುಗಳ ಕಲ್ಪನೆಯಲ್ಲಿ
ಪಟ ಪಟನೆ ಪದಗಳು ಪುಟಿದೆದ್ದವಿಲ್ಲಿ
ಸರ ಸರನೆ ಸಾಲುಗಳ ಸೌಂದರ್ಯದಲ್ಲಿ
ಬೇಗ ಬೇಗನೆ ಬಾರೆ ಬೆಡಗಿಯೇ ಬಾಳಿನಲ್ಲಿ
ಸುಮ್ಮ ಸುಮ್ಮನೆ ಸ್ನೇಹದಲ್ಲಿ ಸಲುಗೆಯಲ್ಲಿ
ಪರಿ ಪರಿಯ ಪ್ರೇಮ ಪ್ರಾರ್ಥನೆ ಪ್ರೀತಿಯಲ್ಲಿ
ಅಯ್ಯೋ ಅಯ್ಯೋ ಆಸೆಯು ಅತಿಯಾಯಿತಿಲ್ಲಿ
ನಿಜ ನಿಜ ನನ್ನಾಣೆ ನಿನ್ನ ನನ್ನ ನಂಬಿಕೆಯಲ್ಲಿ
ಪ್ರಿಯೆ ಪ್ರಿಯೆ ಪ್ರೇಮದ ಪ್ರಶಾಂತ ಪರಿಸರದಲ್ಲಿ
ಪರ ಪರನೆ ಪ್ರವಾಹವು ಪ್ರೀತಿಯ ಪ್ರಪಂಚದಲ್ಲಿ
ಹೌದು ಹೌದು ಹುಚ್ಚಾಸೆಗಳ ಹಾಡು ಹೃದಯದಲ್ಲಿ
ಬೇರೆ ಬೇರೆ ಭಾವಗಳ ಬಣ್ಣ ಬಣ್ಣಗಳಲ್ಲಿ
ಗುಡು ಗುಡುಗಿದೆ ಗಾನ ಗುಂಡಿಗೆಯಲ್ಲಿ
ತರ ತರ ತಾಳಕೆ ತನನನ ತಲೆಯಲ್ಲಿ
ಜುಮು ಜುಮು ಜುಮ್ಮೆಂದ ಜೀವವಿಲ್ಲಿ
ಜೋಡಿ ಪದಗಳ ಪ್ರೇಮ ಪತ್ರ
ನೀ ಬರಲು ಬೇಗನೆ ನನ್ನ ಹತ್ರ
ಜೋಡಿ ಹಕ್ಕಿಗಳಂತೆ ನಾವು ಹಾರಾಡಲು
ಪ್ರೀತಿಯಿಂದ ಜೊತೆ ಜೊತೆಯಾಗಿರಲು
Saturday, 17 December 2011
ಪ್ರೀತಿ ಮತ್ತು ಗೌರವ..
ಪ್ರೀತಿ ಮತ್ತು ಗೌರವ..
**********
ನಾನು ನಾನೇ ಎಂದರೆ
ನೀವು ಒಪ್ಪುವುದಿಲ್ಲ
ನಾನು ನಾನಲ್ಲ ಎಂದು
ನೀವು ಹೇಳಿದರೂ
ನಾನು ಒಪ್ಪುವುದಿಲ್ಲ
ನಾನು ನಾನೇ ಎಂದರೆ
ನೀವು ಹೇಳುವಿರಿ
ನಾನು ಎಂಬ ಅಹಮ್ಮ್
ನಿನಗೆ ಬೇಡವೆಂದು
ಬೇಗನೆ ಅದನ್ನು ಬಿಡು ಎಂದು
ನಾನು ನಾನೇ ಎನ್ನುವ ಅಹಮ್ಮ್ ಬಿಟ್ಟರು
ನೀವು ಅದನ್ನು ನಂಬುವುದಿಲ್ಲ
ನೀವು ನಂಬಿದರೂ ಸಹ
ನನ್ನಲ್ಲಿ ಅದು ಬಿಟ್ಟುಹೋದ ಭಾವನೆ ಬರುವುದಿಲ್ಲ
ಬಂದರೂ ಮತ್ತೆ ನೀವು ಅದನ್ನು ನಂಬುವುದಿಲ್ಲ
ನಾನು ನಾನೇ ಎನ್ನುವುದನ್ನು ಬಿಟ್ಟು
ನಾವು ಎನ್ನುವ ಅಭ್ಯಾಸ ನಮ್ಮದು
ನಮ್ಮ ಈ ಮಾತಿಗೆ ಕಾರಣ ನಾವೇ....
ನಮ್ಮೊಳಗಿನ ನಮ್ಮ ಮುದ್ದು ಮನಸ್ಸು....
ನಮಗೆ ನಾವೇ ಕೊಡುವ ಬಹುವಚನದ ಕಾರಣ
ನಮ್ಮಲ್ಲಿ ನೆಲೆಸಿರುವರು ಹಲವಾರು ಜನ..
ಹುಟ್ಟಿನಲ್ಲಿ ಮಗುವಾಗಿ ,
ಅಪ್ಪ ಅಮ್ಮನಿಗೆ ಮಗನಾಗಿ ,
ಅಕ್ಕ ತಂಗಿಯರಿಗೆ.. ಅಣ್ಣ ತಮ್ಮಂದಿರಿಗೆ..
ಅಣ್ಣ ತಮ್ಮನಾಗಿ ,
ಅತ್ತೆ ಮಾವನಿಗೆ ಅಳಿಯನಾಗಿ ,
ಮೈದುನನಾಗಿ , ಸ್ನೇಹಿತನಾಗಿ ,
ಪ್ರೇಮಿಯಾಗಿ , ಕವಿಯಾಗಿ ,
ಕಥೆಗಾರನಾಗಿ , ದೇಶದ ಪ್ರಜೆಯಾಗಿ ,
ದೇಶಪ್ರೇಮಿಯಾಗಿ , ಚಿಂತಕನಾಗಿ ,
ಗಂಡನಾಗಿ , ಸಂಸಾರಿಯಾಗಿ ,
ಹಲವಾರು ಬಗೆ ಬಗೆಯ ಅವತಾರಗಳ ರೂಪವು
ಅವೆಲ್ಲದರ ಸಮ್ಮಿಲನವು
ನನ್ನಲ್ಲೇ ಎಂದು ಹೇಳಿದರೆ ತಪ್ಪು
ಅವು ನಿಮ್ಮಲ್ಲೂ ಕೂಡ ಇರುತ್ತವೆ..
ಅದಕ್ಕಾಗಿ ನಾನು ನಾನಲ್ಲ ಅದು ನಾವು ..
ನಾವು ನಮ್ಮನ್ನು ಹೇಳಿಕೊಳ್ಳುವಾಗ
ನೆಪ ಮಾತ್ರಕ್ಕೆ ನಾವು
ಆದರೆ ಒಬ್ಬರೇ ಅದು ನಾನೇ..
ನಾನು ನಾನೇ ಎನ್ನಲು
ಹೆಣ್ಣು ಕಾರಣ
ನನ್ನ ಹೆಂಡತಿಯ
ಪರಿಚಯ ಮಾಡಿಸಲು
ನಮ್ಮ ಹೆಂಡತಿ ಎಂದು ಹೇಗೆ ಹೇಳುವುದು..!!
ನಮ್ಮ ಹೆಂಡತಿಯವರು ಇವರು..!!
ಎಂದು ಗೌರವ ನೀಡಲು
ಅಲ್ಲಿಲ್ಲ ಪ್ರೀತಿಯು
ಪ್ರೀತಿ ಇಲ್ಲದ ಸಂಸಾರದ ಗತಿಯೇನು .... ?
ಈ ಕಾರಣಕ್ಕೆ ಕೆಲವೊಮ್ಮೆ
ನಾನು ನಾನೇ ಆಗಬೇಕು..
ನನ್ನ ಹೆಂಡತಿ ಎನ್ನುವ ಪ್ರೀತಿಯು ಇರಬೇಕು..
ನಾನು ನೀನು ಪ್ರೀತಿಯ ಪದಗಳು ..
ನಾವು ನೀವು ಗೌರವ ಸೂಚಕಗಳು..
ನಾನು ನೀನೆಂದರೆ ಪ್ರೀತಿಯ ಸೆಳೆತ
ನನ್ನ ಮನದಲ್ಲಿ ಸದಾ ನೀನು ಇರುತ
ನಾವು ನೀವು ಎನ್ನಲು ಕ್ಷಣ ಮಾತ್ರದ ಗೌರವ
ನಮ್ಮ ಸಂಸ್ಕೃತಿಯ ಒಂದು ವಿಶೇಷ ಪ್ರಭಾವ
ಪ್ರೀತಿ ಸ್ನೇಹ ಇಲ್ಲವಾದಲ್ಲಿ ..
ನಾ ಹೇಗೆ ಆಗಲಿ ನಿಮ್ಮವ.. :)
ನಾವು ನಾವೇ.. ನೀವು ನೀವೇ..
ನಾವು + ನೀವು = ನಾವೇ.. ಅಲ್ಲವೇ.. ?
|| ಪ್ರಶಾಂತ್ ಖಟಾವಕರ್ ||
ರವಿಯೇ ಈ ಜಗದ ಮೊದಲ ಕವಿ..
ರವಿಯೇ ಈ ಜಗದ ಮೊದಲ ಕವಿ..
*******************************************************
ರವಿ ಕಾಣದ್ದನ್ನು ಕವಿ ಕಾಣುವನು
ಕವಿ ಕಾಣಲು ರವಿಯೇ ಕಾರಣನು
ರವಿ ಕಿರಣಗಳ ಬಣ್ಣದಲ್ಲಿ ಬರೆಯುವನು
ಕವಿ ಭಾವನೆಗಳಿಗೆ ಬಣ್ಣ ನೀಡುವನು
ರವಿ ಬೆಳಕನ್ನು ಜಗಕ್ಕೆಲ್ಲಾ ಚೆಲ್ಲುವನು
ಕವಿ ಸುಂದರ ಮನಸ್ಸಿನ
ಚೆಲುವನವನು....
ರವಿಗೆ ಪ್ರತಿದಿನವೂ ಹುಟ್ಟು ಸಾವು
ಆದರೂ ರವಿಯು ಚಿರಂಜೀವಿಯು
ಕವಿಗೆ ಪ್ರತಿದಿನವೂ ಹೊಸತನದ ಹುಟ್ಟು..
ಎಲ್ಲವನ್ನು ಪದಗಳಲ್ಲಿ ಹಿಡಿದು ಬರೆದಿಟ್ಟು...
ಕವಿಗೂ ಇಲ್ಲ ಇಲ್ಲಿ ಸಾವು.. ದೇಹವನ್ನು ಬಿಟ್ಟು..
ರವಿ ಕೂಡ ಒಬ್ಬ ಕವಿಯೇ.. ಆದರೂ ಕವನಗಳು ಗುಟ್ಟು..
ಆ ಹುಟ್ಟು ಸಾವಿನ ರವಿಯ ಕವನಗಳ ಗುಟ್ಟು
ಏನೆಂದು ಹೇಳುವ ಪ್ರಯತ್ನದಲ್ಲಿ ಬರೆದುಬಿಟ್ಟೆ...
ರವಿ ಹೇಳಿದ ಕವನ...
ನಾನು ಕಾಣುವೆ ಕವಿಗೆ ಇಲ್ಲಿ..
ಹಪ್ಪಳ , ಉಂಡೆ , ದೋಸೆಯಂತೆ..
ಬೆಳ್ಳಿ , ಬಂಗಾರದ ತಟ್ಟೆಯಂತೆ
ಬೆಳಕ ನೀಡುವ ದೀಪದಂತೆ
ಕೆಲವೊಮ್ಮೆ ಉರಿಯುವ ಜ್ವಾಲೆಯಂತೆ
ರುಚಿಕರವಾದ ಒಂದು ಹಣ್ಣಿನಂತೆ
ಹೆಣ್ಣಿನ ಹಣೆಯಲ್ಲಿ ಕುಂಕುಮದಂತೆ
ಕಾಫಿ ಟೀ ಒಳಗೆ ಇಟ್ಟ ಬಿಸ್ಕೆಟ್`ನಂತೆ
ಕವಿಯು ನನ್ನನ್ನು ಊಟ ತಿಂಡಿಗಳಂತೆ ಕಾಣುವನಂತೆ
ಕಾರಣ ಕೇಳಿದರೆ ಹೇಳುವನು ಅವನು
ರವಿ ಕಾಣದ್ದನ್ನು ಕವಿ ಕಾಣುವನು..
ಆದರೆ ಅವನು ತಿಳಿದಿಲ್ಲ ....
ನನ್ನ ಶಕ್ತಿಯ ಮಹಿಮೆಯನ್ನು
ನಾನು ಕಾಣದ್ದನ್ನು ಕವಿ ಕಾಣಲು , ನಾನೇ ಕಾರಣನು
ಈ ಪ್ರಕೃತಿಯಲ್ಲಿ ಕವನ ಬರೆದ ಮೊದಲ ಕವಿ ನಾನೇ ಎನ್ನುವುದನ್ನು.. :)
|| ಪ್ರಶಾಂತ್ ಖಟಾವಕರ್ ||
Subscribe to:
Posts (Atom)