ಸತ್ಯವನ್ನೇ ಹೇಳಿದ್ದೇವೆ...
ಸತ್ಯವನ್ನಲ್ಲದೆ... ಬೇರೇನೂ ಹೇಳಿಲ್ಲ.... :)
ತಾಯಿಯ ಗರ್ಭದಲ್ಲಿ ಜನ್ಮ
ಧೈವ ಸತ್ಯ...
ಹೊರಗೆ ಬಂದಾಗ ಜನ್ಮ
ಧಾಖಲೆಯ ಸತ್ಯ..
ಆತ್ಮ ದೇಹದಿಂದ ಹೊರಗೆ
ಮೊದಲ ಮರಣ....
ದೇಹ ಲೋಕದಿಂದ ಹೊರಗೆ
ಎರಡನೇ ಮರಣ...
ಎಲ್ಲರಿಗೂ ಎರಡು ಸಾರಿ ಜನ್ಮ...
ಒಳಗೊಮ್ಮೆ ಮತ್ತು ಹೊರಗೊಮ್ಮೆ...
ಮರಣವೂ ಹಾಗೆ...
ಮೊದಲು ಆತ್ಮ ... ನಂತರ ದೇಹ...
ಸತ್ಯವನ್ನೇ ಹೇಳಿದ್ದೇವೆ...
ಸತ್ಯವನ್ನಲ್ಲದೆ... ಬೇರೇನೂ ಹೇಳಿಲ್ಲ.... :)
|| ಪ್ರಶಾಂತ್ ಖಟಾವಕರ್ ||
ನಿಜವಾದ ಸತ್ಯ! ಪ್ರಾಸ ಚೆನ್ನಾಗಿದೆ... :)
ReplyDelete