Friday, 30 December 2011

ಜಲ ಧಾರೆ


ಜಲ ಧಾರೆ
+++++++

ನನಗೆ ಬೇಕಿಲ್ಲ ಯಾವುದೇ ರಸ್ತೆ 
ರೈಲು ಕಂಬಿಗಳೂ ನಾ ನಡೆಯಲು
ನುಗ್ಗುವೆ ಸಿಕ್ಕ ಸಿಕ್ಕ ಕವಲುದಾರಿಗಳಲ್ಲೇ
ನಾನು ಚಂಚಲೆ ಒಂದು ಕಡೆ ನಿಲ್ಲಲಾಗದು

ಗಾಳಿಯು ಕೈ ಬೀಸಿ ಕರೆದಲ್ಲಿಗೆ ನನ್ನ ಓಟ
ಕಲ್ಲು ಕಣಿವೆಗಳಲ್ಲೂ ನಾನಾಡುವೆ ಆಟ
ನನ್ನ ನೋಡಿ ಕಲಿಯಿರಿ ಜೀವನದ ಒಂದು ಪಾಠ
"ದುಡಿಮೆಯೇ ದೇವರು" 
ನಾ ದುಡಿಯುವುದು ಪ್ರಕೃತಿಗಾಗಿ..


ಪ್ರಕೃತಿ ಮಾತೆ ನನ್ನ ತಾಯಿ 
ಅವಳ ಸೌಂದರ್ಯ ಹೆಚ್ಚಿಸಲು
ನಿಲ್ಲದ ನನ್ನ ಬಾಳಿನ ಪ್ರಯಾಣ 
ಬೇಕೆಂದ ಕಡೆ ನನಗೆ ನಿಲ್ದಾಣ

ನನ್ನ ನಂಬಿ ಬದುಕಿರುವ ಜೀವ ಸಂಕುಲ
ಪ್ರಾಣಿ ಪಕ್ಷಿಗಳ ಪಾಲಿನ ಅಮೃತ
ನನ್ನ ಸದುಪಯೋಗವೇ ಸ್ವರ್ಗ ಸುಖ
ದೇವಲೋಕಕ್ಕೆ ಸಮ ಜಗದೊಳಗಿನ ಈ ಜೀವನ... :)

|| ಪ್ರಶಾಂತ್ ಖಟಾವಕರ್ ||

2 comments:

  1. ಜಿಗಿದರೆ ನಾಡೆಲ್ಲ ವಿದ್ಯುತ್ ಜಾಲ
    ಉಕ್ಕಿದರೆ ಪುಷ್ಕರ ಸ್ನಾನ
    ಮೊಗೆ ಮೊಗೆದು ಬೆಳಕೊಳ್ಳಿ ಭತ್ತ ಗೋಧುಮೆ

    ಲಯ ಪೂರ್ಣ ಕವನ ಗೆಳೆಯ. ಭೇಷ್!

    ReplyDelete
  2. ಪ್ರಶಾಂತ ಪ್ರಶಾಂತವಾಗಿ ಹರಿಯುವ ಜಲಧಾರೆಯಂತಿದೆ ನಿಮ್ಮ ಕವನ. ಪ್ರಕೃತಿಯ ವರ್ಣನೆಗೆ ನೂರು ಕೋಟಿ ಪದಗಳೂ ಸಾಲದು.
    ಚೆನ್ನಾಗಿ ಅನುಭವಿಸಿ ಬರೆದಿದ್ದೀರಿ.

    ಪ್ರಕೃತಿ ಮಾತೆ ನನ್ನ ತಾಯಿ
    ಅವಳ ಸೌಂದರ್ಯ ಹೆಚ್ಚಿಸಲು
    ನಿಲ್ಲದ ನನ್ನ ಬಾಳಿನ ಪ್ರಯಾಣ

    ಎಂತಹ ಸುಂದರ ಸಾಲುಗಳು, ಜೈ ಹೋ

    ReplyDelete