ರವಿಯೇ ಈ ಜಗದ ಮೊದಲ ಕವಿ..
*******************************************************
ರವಿ ಕಾಣದ್ದನ್ನು ಕವಿ ಕಾಣುವನು
ಕವಿ ಕಾಣಲು ರವಿಯೇ ಕಾರಣನು
ರವಿ ಕಿರಣಗಳ ಬಣ್ಣದಲ್ಲಿ ಬರೆಯುವನು
ಕವಿ ಭಾವನೆಗಳಿಗೆ ಬಣ್ಣ ನೀಡುವನು
ರವಿ ಬೆಳಕನ್ನು ಜಗಕ್ಕೆಲ್ಲಾ ಚೆಲ್ಲುವನು
ಕವಿ ಸುಂದರ ಮನಸ್ಸಿನ
ಚೆಲುವನವನು....
ರವಿಗೆ ಪ್ರತಿದಿನವೂ ಹುಟ್ಟು ಸಾವು
ಆದರೂ ರವಿಯು ಚಿರಂಜೀವಿಯು
ಕವಿಗೆ ಪ್ರತಿದಿನವೂ ಹೊಸತನದ ಹುಟ್ಟು..
ಎಲ್ಲವನ್ನು ಪದಗಳಲ್ಲಿ ಹಿಡಿದು ಬರೆದಿಟ್ಟು...
ಕವಿಗೂ ಇಲ್ಲ ಇಲ್ಲಿ ಸಾವು.. ದೇಹವನ್ನು ಬಿಟ್ಟು..
ರವಿ ಕೂಡ ಒಬ್ಬ ಕವಿಯೇ.. ಆದರೂ ಕವನಗಳು ಗುಟ್ಟು..
ಆ ಹುಟ್ಟು ಸಾವಿನ ರವಿಯ ಕವನಗಳ ಗುಟ್ಟು
ಏನೆಂದು ಹೇಳುವ ಪ್ರಯತ್ನದಲ್ಲಿ ಬರೆದುಬಿಟ್ಟೆ...
ರವಿ ಹೇಳಿದ ಕವನ...
ನಾನು ಕಾಣುವೆ ಕವಿಗೆ ಇಲ್ಲಿ..
ಹಪ್ಪಳ , ಉಂಡೆ , ದೋಸೆಯಂತೆ..
ಬೆಳ್ಳಿ , ಬಂಗಾರದ ತಟ್ಟೆಯಂತೆ
ಬೆಳಕ ನೀಡುವ ದೀಪದಂತೆ
ಕೆಲವೊಮ್ಮೆ ಉರಿಯುವ ಜ್ವಾಲೆಯಂತೆ
ರುಚಿಕರವಾದ ಒಂದು ಹಣ್ಣಿನಂತೆ
ಹೆಣ್ಣಿನ ಹಣೆಯಲ್ಲಿ ಕುಂಕುಮದಂತೆ
ಕಾಫಿ ಟೀ ಒಳಗೆ ಇಟ್ಟ ಬಿಸ್ಕೆಟ್`ನಂತೆ
ಕವಿಯು ನನ್ನನ್ನು ಊಟ ತಿಂಡಿಗಳಂತೆ ಕಾಣುವನಂತೆ
ಕಾರಣ ಕೇಳಿದರೆ ಹೇಳುವನು ಅವನು
ರವಿ ಕಾಣದ್ದನ್ನು ಕವಿ ಕಾಣುವನು..
ಆದರೆ ಅವನು ತಿಳಿದಿಲ್ಲ ....
ನನ್ನ ಶಕ್ತಿಯ ಮಹಿಮೆಯನ್ನು
ನಾನು ಕಾಣದ್ದನ್ನು ಕವಿ ಕಾಣಲು , ನಾನೇ ಕಾರಣನು
ಈ ಪ್ರಕೃತಿಯಲ್ಲಿ ಕವನ ಬರೆದ ಮೊದಲ ಕವಿ ನಾನೇ ಎನ್ನುವುದನ್ನು.. :)
|| ಪ್ರಶಾಂತ್ ಖಟಾವಕರ್ ||
ಚನ್ನಾಗಿವೆ ಕವನಗಳು ಪ್ರಶಾಂತ್...ಪ್ರಕೃತಿಯಲ್ಲಿ ಕವನ ಬರೆದವನು ಮೊದಲಿಗನಾದ..ನಿಸರ್ಗಗವನದ ಕರ್ತೃ...
ReplyDeleteಕವಿಯ ಆತ್ಮ ಕಥನದಂತಿದಿ ಗೆಳಯ!
ReplyDeleteರವಿ ಮತ್ತು ಕವಿಯನ್ನಿಟ್ಟು ಮೂರ್ತ ಅಮೂರ್ತ ಕಲ್ಪನೆಗಳನ್ನು ಸುಂದರವಾಗಿ ಬೆಸೆದಿದ್ದೀರಿ.
ಪಾಕ ಪ್ರವೀಣ ನೀವೇ!