ಮುತ್ತಿನ ಹಾರ
%%%%%%%%%%%%
ಯಾರು ಕಾಣದ
ಕನಸನು ಈಗ
ನಾನಿಲ್ಲಿ ಕಂಡೆ
ಅದರೊಳು ನೀನು
ರಾಣಿಯಂತೆ ಇದ್ದೆ
ಬಂದೆ ನೀನು ಎದುರಿಗೆ
ಬಿಳಿಯ ಸೀರೆಯ ಉಟ್ಟು
ಕಣ್ಣುಗಳೆರಡು ಕೆಂಪಾಗಿತ್ತು
ಗೆಜ್ಜೆಯ ಸದ್ದು ಜೋರಾಗಿತ್ತು
ನಿನ್ನ ನಗುವೇ ಹಾಡಾಗಿತ್ತು
ನಿನ್ನ ರೂಪವು ಹೊಳೆಯುತ್ತಿತ್ತು
ನೋಡಲು ತುಂಬಾ ಮಜವಾಗಿತ್ತು
ಆದರು ತುಂಬಾ ಭಯವಾಗಿತ್ತು
ನನ್ನ ಹೆಸರು ನಿನಗೆ ತಿಳಿದಿತ್ತು
ಕೂಗಿದೆ ನೀನು
ನನ್ನನು ಬಳಿಗೆ
ಹೇಳಿದೆ ನೀನು
ಜನುಮದ ಕಥೆಯ
ಕಥೆಯೊಳು ನಾನು
ಪ್ರೀತಿಯ ಇನಿಯ
ಆಣೆಯ ಮಾಡಿ
ಮನಸ್ಸನ್ನೂ ನೀಡಿ
ನಿನ್ನ ಸೇರದೆ ಹೋಗಿದ್ದೆ
ನೂರು ಗುಂಡುಗಳು....
ನನ್ನ ಎದೆಯನು ಬಗೆದು
ಯುದ್ದದಿ ವೀರ ಮರಣವ
ಪಡೆದ ಸೈನಿಕ ಎಂದು
ಜನುಮ ಜನುಮದ
ಆ ಪ್ರೇಮವ ನೆನಪಿಸಲು
ನನ್ನ ಹೃದಯವು
ಗಡ ಗಡನೆ ನಡುಗಲು
ಕೇಳಿದೆ ನಿನ್ನ ನಾನು
ಹೇಳಲು ನಿನ್ನ ಕಥೆಯನ್ನು
ಪ್ರೀತಿಯ ನೆನಪಲ್ಲಿ ನೀನು
ಪ್ರೇತವು ಆತ್ಮವು ಭೂತವು
ನನಗಾಗಿ ಕಾಯುತ
ಊರಲ್ಲೆಲ್ಲಾ ಅಲೆದಾಡುತ
ಭಯದೊಳು ನಾನು
ನಂಬಲು ನಿನ್ನನ್ನು
ಮುಂದೇನೆಂದು ತಿಳಿಯದೆ
ಸಾಕ್ಷಿಯ ನೀಡಲು ಕೇಳಿದೆ
ನನ್ನ ಎದೆಯೊಳು ಸಿಕ್ಕ
ನೂರು ಗುಂಡುಗಳ ಹಾರವು
ನಿನ್ನ ಕೊರಳಲ್ಲಿ ಇತ್ತು
ಉದ್ದನೆಯ ಕೂದಲ ರಾಶಿಯ
ನಡುವಿನಲ್ಲಿ ಮರೆಯಾಗಿತ್ತು
ಹರಡಿದ ಕೂದಲ ಸರಿಸಿ
ಗುಂಡುಗಳ ಹಾರವ ತೋರಿಸಿ
ನಾನೇ ನಿನ್ನ ಪ್ರೇಯಸಿ
ಬಂದಿರುವೆ ನಿನ್ನನ್ನೇ ಬಯಸಿ
ಎಂದು ನೀನು ನಗು ನಗುತಾ ಹೇಳಿದೆ
ಆ ಕ್ಷಣದೊಳು ತರ ತರ ನಾ ಹೆದರಿದೆ
ಮುಂಜಾನೆಯಲ್ಲಿ ಕೋಳಿ ಕೂಗಿತ್ತು
ಸೂರ್ಯನ ಬೆಳಕಿನ ಕಿರಣಗಳು
ಕಿಟಕಿಯೊಳಗಿಂದ ನನ್ನ ಮೇಲೆ ಬಿದ್ದು
ಕನಸು ಮುಗಿಯದೇ ನಿದ್ದೆಯಿಂದ ಎದ್ದು
ನೋಡಿದೆ ಒಂದು ವಿಶೇಷ ವಿಚಿತ್ರವ
ಹಾಸಿಗೆ ಮೇಲೆ ಗುಂಡುಗಳ ಹಾರವ
ಎದೆಯೊಳು ಏರಿತು ಸದ್ದು ಡವ ಡವ
ಕನಸಿನ ಪ್ರೇತವು ಭೂತವು ನಿಜವ.... ?
ಕಣ್ಣುಗಳ ಒಮ್ಮೆ ತಿಕ್ಕಿ ನೋಡಿದೆ
ಅಬ್ಬಾ..!! ನಿಶ್ಚಿಂತೆಯಿಂದ ಉಸಿರೆಳೆದೆ
ಗುಂಡುಗಳ ಹಾರವು ಅಲ್ಲ ಅದು..
ನನ್ನ ಪತ್ನಿಯ ಮುತ್ತಿನ ಹಾರ.... :)
|| ಪ್ರಶಾಂತ್ ಖಟಾವಕರ್ ||
ಒಂದು ಸುಂದರ ಸಚಿತ್ರ ಕವನ ಕೊಟ್ಟಿದ್ದೀರಿ. ಬಳಸಿಕೊಂಡ ಚಿತ್ರಗಳು ಕವನಕ್ಕೆ ಪೂರಕವಾಗಿದೆ.
ReplyDeleteಅಂದ ಹಾಗೆ ಮುತ್ತಿನ ಹಾರ ಚಿತ್ರದ ಛಾಯಾಗ್ರಾಹಕರು ಡಿ.ವಿ. ರಾಜಾರಾಂ
ನೆನ್ನೆಯ ದಿನ ಮುತ್ತಿನ ಹಾರ ಚಿತ್ರದ ಹಾಡುಗಳನ್ನು ನೋಡಿ ಮಲಗಿದಾಗ ...
ReplyDeleteಆ ಚಿತ್ರದ ದೃಶ್ಯಗಳು ಕನಸಲ್ಲಿ ಬಂದು.. ಬೆಳಿಗ್ಗೆ ಈ ರೀತಿಯ ಕವನ ಕಲ್ಪನೆ...
ಚಿತ್ರಗಳ ಹುಡುಕಿ ಹುಡುಕಿ ಕವನದ ಜೊತೆಯಲ್ಲಿ ಕಥೆಯನ್ನು ಹೇಳುವ ಒಂದು ಪ್ರಯತ್ನ... :)
ನಿಮ್ಮ ಮೆಚ್ಚುಗೆಯ ಮಾತುಗಳು ... ಮಾಹಿತಿಗಳಿಗೆ ತುಂಬಾ ತುಂಬಾ ಧನ್ಯವಾದಗಳು ಸರ್... :)
ಮುತ್ತಿನ ಹಾರ ಪೊಣಿಸಿದ೦ತೆ ಅದ್ಬುತ್ತವಾಗಿದೆ
ReplyDelete