ಮಹೇಂದ್ರ ಎಂಬ ಮಹಾರಾಜನು
ವೀರೇಂದ್ರ ಎಂಬ ಯುವರಾಜನು
ಗಂಭೀರ ಚಿಂತನೆಯ ಮಹಾಮಂತ್ರಿ
ಹೆಸರಿಗೆ ನಾನಿಲ್ಲಿ ಯುವರಾಜನು
ಆದರೆ ರಣರಂಗದಲ್ಲಿ ನಾನೇ ಸೇನಾಪತಿ
ಕೈಯಲ್ಲಿ ಒಂದು ಖಡ್ಗ ನನ್ನ ಆಯುಧ
ಒಂದೇ ಹೊಡೆತದಿ ಚೆಂಡುಗಳು ಹಾರುವವು
ರುಂಡ ಮುಂಡಗಳು ಬೇರಾಗಿ ಬರುವ ಕೂಗು
ಸುತ್ತ ನಿಂತ ಸತ್ತ ದೇಹಗಳ ನೋಡಿ ಕಿರುಚುವರು
ನಮ್ಮವರು ಯುದ್ದ ಗೆದ್ದ ಸಂತಸದಿ ಸಂಭ್ರಮಿಸುವರು
ನಾ ಹಿಡಿದ ಬ್ಯಾಟು ನನ್ನ ಮಂತ್ರ ದಂಡ
ನಾ ಹೊಡೆಯುವ ಹೊಡೆತಕೆ ಕುಗ್ಗುವ ಎದುರಾಳಿ
ಎಸೆತಗಾರರೆಲ್ಲಾ ಇಲ್ಲಿ ದಂಡ ಪಿಂಡಗಳು
ಹೋರಾಟದ ಕೊನೆವರೆಗೂ ಅವರ ಗೋಳಾಟ
ಆರು ಆರು ಎಂದು ಮೇಲೆ ಹಾರುವ ನನ್ನ ಆಟ
ಎಡಗೈಯ ಐದು ಬೆರಳುಗಳು ಮಾಡುವ ಜಾದೂ
ಗುಂಡಿನಾ ದಾಳಿಗಳ ದಿಕ್ಕುಗಳು ಇಲ್ಲಿ ಅದಲು ಬದಲು
ಎದುರಾಳಿ ವೀರರೆಲ್ಲಾ ದಿಕ್ಕಾಪಾಲಾಗಿ ಬಿಟ್ಟೋಡಲು
ಮೆಲ್ಲ ಮೆಲ್ಲನೇ ಎಸೆಯುವ ನನ್ನ ನೇರ ಬಾಣಗಳು..
ಅಪರೂಪಕ್ಕೊಮ್ಮೆ ಅತ್ಯದ್ಭುತ ತಿರುಗುಬಾಣಗಳು..
ಮೈದಾನದೊಳು ನಾ ಹಾರಲು ಹಕ್ಕಿಯಂತೆ
ಹಿಡಿಯಲು ನನ್ನತ್ತ ಬರುವ ಚೆಂಡುಗಳ
ನನ್ನ ಕೈಗಳು ಅವುಗಳ ಪಾಲಿಗೆ ಕಬ್ಬಿಣದ ಬಲೆಯಂತೆ
ನಾ ನಿಂತರೆ ಎದುರಾಳಿಯ ಎದುರಲ್ಲಿ
ಅವರಲ್ಲಿ ನನ್ನೊಡನೆ ಯುದ್ಧ ಮಾಡಲು ಭಯವಂತೆ
ಯಾಕೆ ಏನು ಎಲ್ಲಾ ನಿಮಗೆ ಗೊತ್ತೇ.... ?????
ಹಹ್ಹಹ್ಹಹ್ಹಹಃ. ... :)
ಯಾಕಂದ್ರೆ... ನಾನೇ...
* ಯುವರಾಜ ಸಿಂಗ್ *
" ಸಿಂಗ್ ಇಸ್ ಕಿಂಗ್ "
|| ಪ್ರಶಾಂತ್ ಖಟಾವಕರ್ ||
No comments:
Post a Comment