ಎರಡು ಕನಸುಗಳು....
**************
ಗೆಳತಿಯೇ...
ನನ್ನ ಗೆಳತಿಯೇ....
ನಿನ್ನನ್ನು ನೋಡಲೆಂದು
ನನ್ನ ಮನಸ್ಸು ಹೇಳಿದೆ ಇಂದು
ಕನಸಲ್ಲಿ ನೀನು ಬಂದು
ಮನಸ್ಸಲ್ಲಿ ನಿನ್ನ ನೆನಪು ತಂದು
ನೀ ಮರೆಯಾಗಿ ಹೋದೆ
ನಿನ್ನನ್ನು ಹುಡುಕಲೆಂದು
ಇಡೀ ಜಗವನ್ನೇ ನಾ ಸುತ್ತಿ ಬಂದೆ..!!
ಗೆಳತಿಯೇ...
ನನ್ನ ಗೆಳತಿಯೇ...
ಎಲ್ಲಿರುವೆ ನೀನು
ಹುಡುಕುತಾ ನಾನು
ಸುತ್ತಿದರೂ ಇಡೀ ಜಗವನ್ನು
ಕಾಣಲಿಲ್ಲ ನೀನು
ಕಾರಣವೇನು... ?
ಗೆಳತಿಯೇ...
ನನ್ನ ಗೆಳತಿಯೇ...
ನಿನ್ನಾ ನೆನಪಿನಲ್ಲಿ
ಚಿಂತಿಸುತಾ ನಾನಿಲ್ಲಿ
ಮರೆತಿರುವೆ ನಾನೇ ನನ್ನನ್ನು
ಈಗ ಹೇಗೆ ಹುಡುಕಲಿ ನಿನ್ನನ್ನು.. ?
ಗೆಳತಿಯೇ...
ನನ್ನ ಗೆಳತಿಯೇ...
ಕನಸಲ್ಲಿ ನೀ ಬಂದರು
ಕಣ್ಣೆದುರಲ್ಲಿ ಬರುವುದಿಲ್ಲ....
ಕಣ್ಣೆದುರಲ್ಲಿ ನೀ ಕಂಡರೂ
ಕನಸೆಂದು ನಾ ತಿಳಿದೆನಲ್ಲಾ..!!
ಗೆಳತಿಯೇ...
ನನ್ನ ಗೆಳತಿಯೇ...
ನೀನಾದರೂ ಹೇಳಬಹುದಿತ್ತು
ಅದು ಕನಸಲ್ಲ ನಿಜವೆಂದು...
ನೀನು ಸುಮ್ಮನಿದ್ದೆ...
ನನಗೇನು ಗೊತ್ತಿತ್ತು
ನೀನೂ ಕೂಡ ನನ್ನದೇ...
ಕನಸು ಕಾಣುತ್ತಿರುವೆ ಎಂದು..!!
ಗೆಳತಿಯೇ...
ನನ್ನ ಗೆಳತಿಯೇ...
ನನ್ನ ನಿನ್ನ ಎರಡು ಕನಸುಗಳು
ಪ್ರೀತಿಯ ಪ್ರಾರಂಭದ ಸಂಕೇತಗಳು
ನಾನು ನಿನ್ನನ್ನು
ನೀನು ನನ್ನನ್ನು
ಹುಡುಕಲು ಪ್ರೀತಿಯಲ್ಲಿ..
ನೆನಪಿನ ಗುರುತಾಗಿ ಇರಲಿ
ನಿನ್ನ ಕನಸಿನ ನೆನಪುಗಳಲ್ಲಿ
ನನ್ನ ಈ ಕವನ..
ನಿನ್ನ ಹುಡುಕಾಟದಲ್ಲಿ.. :)
|| ಪ್ರಶಾಂತ್ ಖಟಾವಕರ್ ||
ತುಂಬಾ ಚೆನ್ನಾಗಿದೆ ಸರ್ ಕವನದಲ್ಲೇ ಒಂದೊಂದು ಕವನ ಇದೆ !
ReplyDelete