Monday, 12 December 2011

ಪ್ರಾಣ ಸಂಕಟ


ಪ್ರಾಣ ಸಂಕಟ
**************
ಊರ ಹೊರಗೊಂದು
ದೊಡ್ಡ ಆಲದ ಮರ
ಊರ ಜನರು ಹೆದರುವರು
ಹೋಗಲು ಅದರ ಹತ್ತಿರ
ಅಲ್ಲಿರಬಹುದೇನೋ...!!
ದೆವ್ವದ ವಾಸ
ಪ್ರತೀ ದಿವಸ... ?

ಬಲ್ಲವರ ಮಾತಿನಲ್ಲಿ
ಜನರ ಕಲ್ಪನೆ ಸುಳ್ಳು
ಸಾಕ್ಷಿ ಬಯಸುವ ವಿಜ್ಞಾನ
ಭಯದ ಎಲ್ಲಾ ಭಾವನೆಗಳ
ದೂರ ಮಾಡಲು ಸಾಧ್ಯವೇ..!!
ಜನರು ಅಂಜದೇ
ಜೀವನ ಸಾಗುವುದೇ... ?


ಹೆಚ್ಚಾಗಿ ಭೂತಗಳ ವಾಸ
ಹಣ್ಣಿಲ್ಲದ ಮರಗಳೇ ಏಕೆ
ಇರಬವುದು ಹಣ್ಣಿನಲ್ಲೂ
ಅಪರೂಪಕ್ಕೆ ಒಮ್ಮೆ
ಹಾಗೆಂದರೆ...!!
ಹಣ್ಣಿನ ಅಂಗಡಿಗಳ ಗತಿಯೇನು
ತಿನ್ನುವ ಜನಗಳ ಕಥೆ ಏನು... ?

ದೆವ್ವಗಳು ಇರುವುದು 
ಆಲದ ಮರದಲ್ಲಿ ಅಲ್ಲ
ಚಿಂತಕರ ತಲೆಯಲ್ಲಿ
ಭಯದಲ್ಲಿ ಮನದಲ್ಲಿ
ಮಾನಸಿಕ ರೋಗವೇ...!!
ಅರಿಯಲಾಗದ ಪರಿಸ್ಥಿತಿಗೆ
ಪ್ರಕೃತಿಯಲ್ಲಿ ಉತ್ತರವಿದೆಯೇ.. ?


ಹುಡುಕಬೇಕಿಲ್ಲಿ ಹೊಸತನವನ್ನು..
ಭಯದೊಳು ಮರವನ್ನೇ 
ಕಡೆದು ಹಾಕುವುದು ಸರಿಯಲ್ಲ
ಬುಡಸಹಿತ ಕಿತ್ತೆಸೆದರೆ
ಬಿಟ್ಟು ಹೋಗುವವೇ..!!
ಆ ದೆವ್ವಗಳು ಅಲ್ಲಿಂದ
ಎಂಬ ಯೋಚನೆ ಸರಿಯೇ... ?

ಒಂದು ಪ್ರಶ್ನೆ ಮನದಲ್ಲಿ ಹುಟ್ಟಿದೆ
ಈ ಭೂತಗಳು ಬ್ರಹ್ಮ ಸೃಷ್ಟಿಯೋ
ಅಥವಾ ಮಾನವ ನಿರ್ಮಿತ ಜೀವಿಯೋ
ಹೆಚ್ಚು ಹೆಚ್ಚು ಇಲ್ಲಿದೆ ಗೊಂದಲ
ಮತ್ತೊಂದು ಪ್ರಶ್ನೆ ಆಶ್ಚರ್ಯ..!!
ಮಾನವ ಸತ್ತ ಮೇಲೆ ದೆವ್ವ
ಹುಟ್ಟುವುದಿಲ್ಲ ಏಕೆ ಮನುಷ್ಯ ಜನ್ಮವಿಲ್ಲದೆ... ?


ಕುತೂಹಲ ಇಲ್ಲಿ ನಮ್ಮಲ್ಲಿ
ಜನರು ಕಾಣುವ ಭೂತಗಳು
ಕೇವಲ ಹೆಣ್ಣು ಗಂಡು ಆತ್ಮಗಳು
ಕಾಣುವುದಿಲ್ಲ ಬೇರೆ ಪ್ರಾಣಿಗಳು
ಈ ವಿಚಾರ ಹೌದಲ್ಲವೇ... !!
ಜನಗಳ ಕಥೆಯಲ್ಲಿ ಮರಗಳ
ಗಿಡಗಳ ಆತ್ಮ ಕಾಣುವುದಿಲ್ಲವೇಕೆ.... ?

ಜೀವವು ಇದೆ ಮರ ಗಿಡಗಳಿಗೆ
ಅವುಗಳ ಹುಟ್ಟು ಸಾವು ಇದ್ದರೂ
ಆಗುವುದಿಲ್ಲ ದೆವ್ವ ಭೂತಗಳು
ಬರುವುದಿಲ್ಲ ಅವುಗಳ ನೆನಪುಗಳು
ಎಲ್ಲರೂ ಚಿಂತಿಸಿ..!!
ದೆವ್ವವಿದೆ ಎಂದು ಮರಗಳ ಕಡಿದರೆ
ದೆವ್ವಕ್ಕೆ ಸಾವು ಬರುವುದೇ.... ?

|| ಪ್ರಶಾಂತ್ ಖಟಾವಕರ್ ||

1 comment:

  1. ನೀವು ನಿಮ್ಮ ಈ ಕವನಕ್ಕೆ ನಮ್ಮಿಂದ ನಿರೀಕ್ಷಿಸಿದ ಅಭಿಪ್ರಾಯವೇ ನನ್ನದು

    ReplyDelete