Monday, 30 January 2012

ಮರೆಯಲಾರೆ..!!


ಮರೆಯಲಾರೆ..!! 
++++++++++++++

ಮಾತು ಮಾತಿಗೂ
ನೀ ಹೇಳುತ್ತಿದ್ದ ಸಾಲು..
ನಾ ನಿನ್ನ ಮರೆಯಲಾರೆ..!!
*
ಮಾತು ಮಾತಿಗೂ
ನೀ ಹೇಳುತ್ತಿದ್ದ ಸಾಲು..
ನಾ ನಿನ್ನ ಮರೆಯಲಾರೆ..!!
*
*
ಆ ದಿನದಂದು ನಾ ಏಕೋ ಕೇಳಿದೆ
ಏಕೆ ಹೇಳುವೆ ಆ ಮಾತು ಪದೇ ಪದೇ..
*
*
*
ಅ ದಿನದಿಂದ ನನ್ನಲ್ಲಿ ಕಾಡುವ ಚಿಂತೆ
ನೀ ಏಕೆ ನನ್ನನ್ನೇ ಮರೆತೆ.... ಕಾರಣ..!
*
*
*
*
ತಿಳಿಯಿತು ನಿನ್ನದು ಮರುವಿನ ಕಾಯಿಲೆ
ನಮ್ಮ ಪ್ರೀತಿಯನ್ನು ನೆನಪಿಡಲು ನೀನು
ಪದೇ ಪದೇ ಹೇಳುತ್ತಿದೆ ಆ ಸಾಲನ್ನು .. !!
*
*
*
*
*
ಈಗ ನಾ ಹೇಗೆ ನೆನಪಿಸಲಿ ನಮ್ಮ ಪ್ರೀತಿಯ.. 
ನಾನೇ ಪ್ರತೀದಿನ ಜಪಿಸುತ್ತಿರುವೆ
 ನಿನ್ನ ಸಾಲನ್ನು..
* * * * * * 
ನಾ ನಿನ್ನ ಮರೆಯಲಾರೆ..!!.. :)
* * * * * * *
|| ಪ್ರಶಾಂತ್ ಖಟಾವಕರ್ ||

Sunday, 29 January 2012

ಕಾಮನಬಿಲ್ಲು


ಕಾಮನಬಿಲ್ಲು
************
ಓ ನನ್ನ ಪ್ರೀತಿಯೇ
ಓದು ನೀ ಈ ಕವನ
ನಿನಗಾಗಿ ಬರೆದ ನನ್ನ
ಮನದಾಳದ ಪ್ರೇಮವನ್ನ

ಬಣ್ಣ ಬಣ್ಣದ ಭಾವನೆಗಳ\
ಚಿತ್ರ ಚಿತ್ತಾರವ ಬರೆದು,
ಜೊತೆಯಲ್ಲಿ ಪ್ರೇಮದ ಓಲೆ
ಒಮ್ಮೆ ಓದು ನೀ ನನ್ನ ನಲ್ಲೆ

ಬಣ್ಣದ ಬದುಕನ್ನು ಕಟ್ಟಲು
ನಿನ್ನ ಪ್ರೇಮ ಬಯಸಿ ಬಂದೆ
ಹೃದಯದಿ ಪ್ರೀತಿಯು ಹುಟ್ಟಲು
ನಾ ಮೊದಲ ಪತ್ರವ ಬರೆದೆ


ಅದ ನೋಡಿ ನೀ ಏನೂ ಹೇಳದೆ
ಮೌನ ಶಿಲೆಯಂತೆ ಏಕೆ ಸುಮ್ಮನಿದ್ದೆ
ಬಣ್ಣ ಬಣ್ಣದ ಪ್ರೀತಿ ಪದಗಳ ತಿಳಿಯದೆ
ಆ ಬಣ್ಣಗಳ ಪತ್ರವನ್ನೇ ಸುಟ್ಟು ಹಾಕಿದೆ

ಓ ಪ್ರೀತಿಯೇ ನಿನಗೇನು ಗೊತ್ತು
ಸತ್ಯವಾದ ಪ್ರೀತಿಯ ಆ ತಾಕತ್ತು
ಪ್ರೇಮ ಪತ್ರ ಧಗಧಗನೆ ಉರಿದಿತ್ತು
ಆ ಬೆಂಕಿಯಲ್ಲೂ ಸಹ ಬಣ್ಣ ಕಾಣುತಿತ್ತು



ಸುಡುವ ಹಾಳೆಯಲ್ಲಿ ಹಳದಿ ನೀಲಿ ಕೆಂಪು
ಸುಟ್ಟು ಬೂದಿಯಾದರೂ ಸಹ ಕಪ್ಪು ಬಿಳುಪು
ನಿನ್ನ ಪ್ರೀತಿಸುವುದ ಬಿಟ್ಟು ಮಾಡಿಲ್ಲ ನಾ ತಪ್ಪು
ಪ್ರೀತಿಯು ಬಣ್ಣಗಳಂತೆ ಅಮರ, ಒಮ್ಮೆ ನೀ ಒಪ್ಪು

ಭಾರಿ ಜೋರು ಆ ಉರಿವ ಜ್ವಾಲೆ
ಸುಟ್ಟರು ಸಹ ಪ್ರೀತಿ ಪದಗಳ ಮಾಲೆ
ಸಾವಿಲ್ಲ ಬಣ್ಣಗಳಿಗೆ ಉರಿದರೂ ಹಾಳೆ
       ಬಣ್ಣಗಳ ಪ್ರೀತಿಯು ನನ್ನದು ಒಪ್ಪಿಕೊಳ್ಳೆ .. :)


|| ಪ್ರಶಾಂತ್ ಖಟಾವಕರ್ ||

Thursday, 26 January 2012

ವರುಣ + ಹಸಿರು ಕ್ರಾಂತಿ .. !!


ವರುಣ + ಹಸಿರು ಕ್ರಾಂತಿ .. !!
***********************

ಸರಸರನೆ ಸರಸರನೆ
ಭರಭರೆನೆ ಭರಭರನೆ
ಬಂದನಲ್ಲಿಗೆ ವರುಣನು
ಶರವೇಗದ ಸರದಾರನು..

ನವಯೌವನದ ತರುಣ
ಹನಿ ಹನಿ ಆರ್ಭಟದ ಕ್ಷಣ
ಧರೆಯೆಲ್ಲಾ ನೆನೆದು ತಲ್ಲಣ
ಹೊಸ ಚಿಗುರಿಗೆ ಅದು ಕಾರಣ..

ಹಸಿರು ಹರಿದಾಡಿತು ಊರಲ್ಲೆಲ್ಲಾ
ಉಸಿರು ಹಾರಾಡಿತು ಜಗದಲ್ಲೆಲ್ಲಾ
ಕುಣಿದು ಹಾಡಲು ಎಷ್ಟೋ ಬಡಜೀವ
ಬದುಕಲು ಬೇಕು ಈ ವರುಣ ವೈಭವ..


ಸರಸರನೆ ಸರಸರನೆ
ಭರಭರೆನೆ ಭರಭರನೆ
ಬಂದನಲ್ಲಿಗೆ ವರುಣನು
ಶರವೇಗದ ಸರದಾರನು..


ತುಂಬಿ ಚೀಲವ ಬೆಳೆದ ಮೂಟೆ ರಾಶಿ
ಬಂದ ಲಾಭಕ್ಕೆ ಸಿಕ್ಕ ಸಂಸಾರ ಖುಷಿ
ಆಗಲಿಲ್ಲ ದೇವರಲ್ಲಿ ಬೇಡಿದ ಬಯಕೆ ಹುಸಿ
ಮಾಡಲು ಹಬ್ಬವ ಬಂಧು ಬಳಗವ ಸೇರಿಸಿ..

ಮನದೊಳು ಮೂಡುವ ಸಂತಸದ ಕಾಂತಿ
ನೆನಪುಗಳ ಸುಂದರ ಸಂಪ್ರದಾಯ ಸಂಕ್ರಾಂತಿ
ದುಡಿದ ದೇಹಕ್ಕೆ ದುಃಖ ದೂರ , ಸಿಗುವ ಶಾಂತಿ
ಹೇಗೆ ಮರೆಯಲಿ ವರುಣನ , ಅವನಿದ್ದಲ್ಲಿ ಹಸಿರು ಕ್ರಾಂತಿ .. :)

|| ಪ್ರಶಾಂತ್ ಖಟಾವಕರ್ ||


ಬೆಟ್ಟದ ಭೂತಗಳು .. !!


ಬೆಟ್ಟದ ಭೂತಗಳು
**************

ಜಳ ಜಳ , ಜುಳು ಜುಳು
ರಭಸದಿ ತುಂಗಭದ್ರೆಯು
ಧುಮುಕುವಳು ದಟ್ಟಡವಿಯ
ಕಲ್ಲು ಕಣಿವೆಗಳ ಪ್ರಪಾತದೊಳು
ಝೇಂಕರಿಸಿ, ಆರ್ಭಟಿಸಿ, ಹಾರಲು
ವೇಗದೊಳು ಅಗ್ನಿಯಂತೆ ಕುದಿಯಲು..

ಅಪ್ರತಿಮ ಮಾನವ ಮೆದುಳ ಮಾಯೆ
ಮೂಡಿತಲ್ಲಿ ಪ್ರಕಾಶಮಾನವಾದ ಛಾಯೆ
ಅಲ್ಲಾಯಿತು ವಿಸ್ಮಯ, ನವಶಕ್ತಿಯ ಜನನ
ಮುಟ್ಟಿದರೆ ಮುನಿಯು, ಖಚಿತ ಮರಣ
ಶಕ್ತಿಯು ಹೆಮ್ಮರವಾಗಿ ಬೆಳೆದು ನಿಂತು
ಇಡೀ ಜಗವನ್ನೇ ತನ್ನ ಪ್ರತಾಪದಿ ಬೆಳಗಿತು
ಉಗಮವಾದವು ವಿದ್ಯುಜ್ಜನಕ ವಸ್ತುಗಳು..

ಜಳ ಜಳ , ಜುಳು ಜುಳು
ರಭಸದಿ ತುಂಗಭದ್ರೆಯು
ಧುಮುಕುವಳು ದಟ್ಟಡವಿಯ
ಕಲ್ಲು ಕಣಿವೆಗಳ ಪ್ರಪಾತದೊಳು..

ಬಂದವಲ್ಲಿಗೆ ಭಯಂಕರ ಬೆಟ್ಟದ ಭೂತಗಳು
ಕಂಡದ್ದೆಲ್ಲ ಕಿತ್ತು ತಿನ್ನಲವು ಕಾಡು ದೆವ್ವಗಳು
ಕಾಗೆ ಬುದ್ದಿಯೂ , ನರಿ ಬುದ್ದಿಯೂ ಸೇರಿಸಿ
ಗುಂಪು ಕಟ್ಟಿ , ಹೊಂಚು ಹಾಕಿ , ಪಾಲುಗಾರಿಕೆ..

ಅಧಿಕಾರದ ಅಮಲಿನೊಳು ಮದವೇರಿದ ಹುಚ್ಚರು
ಮಾತು ಮಾತಿನೊಳಗೂ ಕುತಂತ್ರ ಬುದ್ದಿಯ ದುಷ್ಟರು
ಕೈ ಚಾಚಿ , ಬಾಯಿ ಬಿಟ್ಟು ಮತ್ತಷ್ಟು ಬೇಕೆನ್ನುವ ಭ್ರಷ್ಟರು
ಕೂತು ತಿನ್ನಲು ಹಂಡೆಗಿಂತಲೂ ಅಧಿಕ ಹೊನ್ನು ಇದ್ದರೂ..

ಅತ್ತ ಕಡೆಯು ಅಬ್ಬಬ್ಬಾ ಭಾರಿ ಉರಿ ಬಿಸಿಲು
ಇತ್ತ ಕಡೆಯು ಅಯ್ಯಯ್ಯೋ ಎಲ್ಲೆಲ್ಲೂ ಕತ್ತಲು
ನಾವು ಆಸೆಗಳ ಅಲೆಯಲ್ಲಿ ತೇಲುವ ಮೀನುಗಳು
ಭ್ರಷ್ಟಾಚಾರದ ಭೂತಗಳಿಗೆ ನಾವಿಲ್ಲಿ ಕಾಮಧೇನುಗಳು
ಬದುಕಲು ಕಟ್ಟಿದ ಪುಟ್ಟದೊಂದು ಅರಮನೆಯೊಳು
ಕನಸುಗಳ ಕಟ್ಟಿಕೊಂಡು ಹಾರುವ ಪುಟ್ಟ ಹಕ್ಕಿಗಳು .. :)

|| ಪ್ರಶಾಂತ್ ಖಟಾವಕರ್ ||

Sunday, 22 January 2012

ನಗೆಹನಿಗಳು .. [01] .. :)





ಸಿಹಿಯಾದ ಕವನ .. !! 

**********************


ನಿನಗಾಗಿ ಬರೆದೆ
ನಾ ಒಂದು ಕವನ
ಪ್ರೀತಿಯಲ್ಲಿ ಪ್ರತೀ ದಿನ

*
ನಿನಗಾಗಿ ಬರೆದೆ
ನಾ ಒಂದು ಕವನ
ಪ್ರೀಯಿಯಲ್ಲಿ ಪ್ರತೀ ದಿನ

*
*
ಓದಿ ನೀನು ಮೆಚ್ಚಿದೆ..!
ಸಿಹಿಯಾದ ಕವನವೆಂದು..

*
*
ಅಂದಿನಿಂದ ನಾ ಬರೆಯಲಿಲ್ಲ 
ಕವನ ಪ್ರತೀ ದಿನ... ಕಾರಣ..!

*
*
*
*
ಸಿಹಿಯನ್ನು ಪ್ರತೀ ದಿನವೂ ಸವಿದರೆ..!!

*
(_.._ ` _._._ ` _._._._._._ ` _._._)

*
*
+++++++++++++++++++++++++++
ಮುಂದಿನ ಸಾಲನ್ನು ನೀವೇ ಊಹಿಸಿಕೊಳ್ಳಿ .. :)


|| ಪ್ರಶಾಂತ್ ಖಟಾವಕರ್ ||

Saturday, 21 January 2012

ಬಲ್ಲವರಾರು ಈ ಬಾಳೊಂದು ಚದುರಂಗದಾಟ..!! .. :)


ಬಾಳೊಂದು ಚದುರಂಗದಾಟ
ಆಟವ ಗೆಲ್ಲಲ್ಲು ಆಡಲೇಬೇಕು
ಆಡುವ ಮೊದಲೇ ಚಿಂತಿಸಬೇಕು
ಗೆಲ್ಲುವ ಯೋಜನೆಗಳ ರೂಪಿಸಬೇಕು.

ಬಾಳೊಂದು ಚದುರಂಗದಾಟ
ಕ್ಷಣ ಕ್ಷಣಕ್ಕೂ ಬದಲಾಗುವ ದಾರಿ
ಬದಲಾದರೂ ಇರಬೇಕು ಒಂದೇ ಗುರಿ
ಅದಕ್ಕಾಗಿ ಅನೇಕ ಚಿಂತನೆಯ ಪರಿ.. 

ಬಾಳೊಂದು ಚದುರಂಗದಾಟ
ಬಲ್ಲವರು ಯಾರು ವಿಧಿಯಾಟ
ಅದೆಷ್ಟೋ ಆಗುಹೋಗುಗಳ ಕಾಟ
ಏನೇ ಆದರೂ ನಿಲ್ಲದು ಆಸೆಗಳ ಓಟ.. 

ಇತಿಹಾಸ ಸಾಕ್ಷಿ , ನೆನಪುಗಳ ನೋಟ
ಬಾಳಿನಲ್ಲಿ ರಾಣಿಗಾಗಿ ರಾಜನ ಹೋರಾಟ
ಚದುರಂಗದಲ್ಲಿ ರಾಜನಿಗಾಗಿ ರಾಣಿಯ ಹೋರಾಟ
ಬಲ್ಲವರಾರು ಈ ಬಾಳೊಂದು ಚದುರಂಗದಾಟ..!! 

**********************************************
ಒಂದು ವಿಚಿತ್ರ ಮಾತ್ರ ಅಸ್ಪಷ್ಟ.. 

ಇತಿಹಾಸ ಸಾಕ್ಷಿ , ನೆನಪುಗಳ ನೋಟ
ಬಾಳಿನಲ್ಲಿ ರಾಣಿಗಾಗಿ ರಾಜನ ಹೋರಾಟ
ಚದುರಂಗದಲ್ಲಿ ರಾಜನಿಗಾಗಿ ರಾಣಿಯ ಹೋರಾಟ
ಬಲ್ಲವರಾರು ಈ ಬಾಳೊಂದು ಚದುರಂಗದಾಟ..!! 
--------------------------------------------------------
ಬಾಳಿನಲ್ಲಿ ರಾಣಿಗಾಗಿ ರಾಜನ ಹೋರಾಟ

ಹೆಣ್ಣಿಗಾಗಿ ಗಂಡಿನ ಹೊಡೆದಾಟ ...
ಇತಿಹಾಸದಲ್ಲಿ ಅನೇಕ ಉದಾಹರಣೆಗಳು ಇದೆ..
ಜಾಸ್ತಿ ಸಿನೆಮಾ , ನಾಟಕಗಳಲ್ಲಿ ಅದೇ.. ಇರುತ್ತೆ..

"ಜೀವನ ಒಂದು ನಾಟಕ ರಂಗ" ಅಂತಾರೆ.. ಅಲ್ಲಿ.. 
.
.
ಚದುರಂಗದಲ್ಲಿ ರಾಜನಿಗಾಗಿ ರಾಣಿಯ ಹೋರಾಟ

ಆ ಆಟದ ನಿಯಮ ಇರೋದೇ ಹಾಗೆ.. ರಾಜ ಯೋಚನೆ ಮಾಡಿ ಒಂದೊಂದೇ ಹೆಜ್ಜೆ ಹಾಕಬೇಕು..
ಆದರೆ ರಾಣಿ ಎಂಟು ದಿಕ್ಕಲ್ಲೂ ಸಂಚಾರ .. ರಾಜನ ಗೆಲುವಿನಲ್ಲಿ ಹೆಚ್ಚಿನ ಪಾತ್ರ ರಾಣಿಯದ್ದೆ ಆಗಿದೆ..

ಅದಕ್ಕೆ "ಪ್ರತೀ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ" ಅಂತಾರೆ ಅಲ್ಲಿ.. 


ಬಲ್ಲವರಾರು ಈ ಬಾಳೊಂದು ಚದುರಂಗದಾಟ..!! .. :)


|| ಪ್ರಶಾಂತ್ ಖಟಾವಕರ್ ||

Friday, 20 January 2012

ಈ ಪ್ರೀತಿಯ ನಾ ಏನೆಂದು ಕರೆಯಲಿ.. ?


ಈಗಿಲ್ಲಿ ನೀವೇ ಹೇಳಿ.. :)
ಈ ಪ್ರೀತಿಯ ನಾ ಏನೆಂದು ಕರೆಯಲಿ.. ?

ಮೊದಮೊದಲು ಕವಿಯೊಬ್ಬ
ಬರೆದ ಪ್ರೇಮ ಕವನ..
ಅದ ಕಂಡ ಕನ್ನಡದ ಕನ್ಯೆಯೊಬ್ಬಳು
ಕುಣಿದಾಡಿದಳು ಮೆಚ್ಚಿ ಹಾಡಿದಳು..



ಸ್ನೇಹದಲಿ ಪ್ರೀತಿಯಲಿ
ವರುಷಗಳು ಉರುಳಿದವು..
ಸುಮಧುರ ಸವಿ ಕ್ಷಣಗಳು
ಸಾವಿರಾರು ನೆನಪುಗಳು
ಸಿಕ್ಕಾಪಟ್ಟೆ ಉಡುಗೊರೆಗಳು
ಅವರಿಬ್ಬರ ಪ್ರೀತಿಯು ಬೆಳೆಯಲು..


ಅದೇನೆಂದು ನಾನರಿಯೇ..!!
ನಾಲ್ಕಾರು ವರುಷಗಳ ನಂತರ
ಮತ್ತೆಲ್ಲೋ ಓದಿದಳು ಪುಸ್ತಕಗಳ
ಸೊಗಸಾದ ಕವನಗಳ , ಕಥೆಗಳ..




ಮನಸ್ಸು ಅಲ್ಲಿ ಮಾಯವಾಗಿತ್ತು
ಏನೋ ಒಂದು ತರಹ ಜಾದೂ..
ಚೆಲುವೆಯು ಪ್ರಿಯತಮನ ಬಿಟ್ಟು
ಮತ್ತೊಬ್ಬನ ಬರವಣಿಗೆಯ ಮೋಡಿಗೆ
ಮನಸ್ಸಲ್ಲೇ ಸೋತು ಶರಣಾಗಿ
ಬರೆದವನ ಜೊತೆ ಓಡಿ ಹೋದಳು..!!




ಹಳೆ ಕವಿಯು ಅಲ್ಲೀಗ 
ದೇವದಾಸನಾದ..!!
ಕುಡಿದು ಕುಡಿದು ನರಳುತ್ತ
ಕಥೆ ಕವನ ಬರೆಯುವುದ
ಮರೆತು ಮಂಕಾಗಿ ಹೋದ..



ಈಗಿಲ್ಲಿ ನೀವೇ ಹೇಳಿ.. :)
ಈ ಪ್ರೀತಿಯ ನಾ ಏನೆಂದು ಕರೆಯಲಿ.. ?
|| ಪ್ರಶಾಂತ್ ಖಟಾವಕರ್ ||

***********************************

Thursday, 19 January 2012

ಅಗೋಚರ


ಅಗೋಚರ
**************
ಬಚ್ಚಿಟ್ಟ ಬಣ್ಣ ಬಣ್ಣಗಳ 
ಭಾವನೆಗಳ ಅವತಾರಗಳನ್ನು 
ಬಿಂಬಿಸುವ ಬದುಕು.. 

ಬಣ್ಣ ಹಚ್ಚಿ ಮುಖವಾಡ ಧರಿಸಿ 
ನಟಿಸಿ ನಗಿಸಿ ಕುಣಿದು ಹಾಡಿ 
ಕೂಗಾಡಿ ನುಡಿವ ನೂರಾರು 
ಭಾವಜೀವಿಗಳ ಬದುಕನ್ನು
ಕಾಲ್ಪನಿಕ ಕಥೆಗಳ ಕನಸಿನ 
ಮಾಯಾಲೋಕ ಸೃಷ್ಟಿಸಿ..

ಅಭಿಮಾನಿಗಳ 
ಮಹಾ ಸಾಗರದಲ್ಲಿ 
ದೂರದ ತೀರವ 
ಹತ್ತಿರಕ್ಕೆ ಕಾಣುವಂತೆ
ಮನೆ ಮನೆ ಮಾತುಗಳ ಕಟ್ಟಿಟ್ಟು
ಇಡೀ ಜಗದ ನಾಟಕವ ಹಿಡಿದಿಟ್ಟು
ಮನಸೆಳೆಯುವ ಚಿತ್ರಗಳ 
ತೆರೆಯ ಮೇಲೆ ತರುವ
ತೆರೆಯ ಹಿಂದಿನ 
ಕಾಣದ ಕೈ ಎಂದರೆ 
    ಛಾಯಾಗ್ರಾಹಕ .. :)



ಅದೇ ಪ್ರಪಂಚವ
ಪ್ರಕೃತಿ ಸೌಂದರ್ಯವ
ಐತಿಹಾಸಿಕ ಪುರಾಣವ
ನೈಜ ಘಟನೆಗಳ ನೋಟವ

ಕನ್ನಡ ಪದಗಳ ಮಾಲೆಯ ಮಾಡಿ
ಅದಕ್ಕಲ್ಲಿ ಸುಂದರ ಚಿತ್ರಣವ ನೀಡಿ
ಕಹಿ ಸಿಹಿ ನೆನಪುಗಳ ಸ್ವಲ್ಪ ಕೂಡಿ
ಬದಲಾವಣೆಯ ರಾಗದ ಜೊತೆ ಹಾಡಿ

ಎಲ್ಲರನ್ನು ವಿಸ್ಮಯಗೊಳಿಸುವ
ಅನನ್ಯ ಅತ್ಯದ್ಬುತ ಕವನಗಳೇ
      ಬದರಿನಾಥ ಪಲವಳ್ಳಿಯವರ ಕವನಗಳು .. :)


|| ಪ್ರಶಾಂತ್ ಖಟಾವಕರ್ || 


ಬದರಿನಾಥ ಪಲವಳ್ಳಿ ಅವರ ಬ್ಲಾಗ್ ಅನ್ನು ವೀಕ್ಷಿಸಲು .. ಇಲ್ಲಿ ಕೆಳಗಿರುವ ಅವರ ಬ್ಲಾಗ್ ಹೆಸರನ್ನು ಒತ್ತಿರಿ.. :)



(ಇದು ಹೊಗಳಿಕೆ ಎಂದು ನೀವು ತಿಳಿದರೂ ಸಹ...
ಇದು ನಿಜ ಸರ್.. ಒಬ್ಬ ಛಾಯಾಗ್ರಾಹಕ.. ನಿಜಕ್ಕೂ ಅಗೋಚರ ವ್ಯಕ್ತಿಯಂತೆ.. 
ಮತ್ತು ನಿಮ್ಮ ಕವನಗಳ ಭಾವಾರ್ಥಗಳು ಕೆಲವೊಮ್ಮೆ ನಮಗಿಲ್ಲಿ ಅಗೋಚರ.. 
ಅದಕ್ಕೆ ಆ ಶೀರ್ಷಿಕೆ ಮತ್ತು ಆ ಸಾಲುಗಳು.)
ಮನಸ್ಪೂರ್ವಕ ಮೆಚ್ಚಿ ಬರೆದ ಮನದ ಮಾತುಗಳು.. :)

Tuesday, 17 January 2012

ಜೀವನ ಕವನ ..!!



ಜೀವನ 
ಕವನ  .. !! 
****************


ಯಾರಿಗೂ ಬೇಡವಾಗಿದೆ ನಮ್ಮ ಮನಸ್ಸು
ಎಷ್ಟೆಷ್ಟೋ ಮಾಡಿದರೂ ಘೋರ ತಪಸ್ಸು
ಬಿಡಲಿಲ್ಲ ನಮ್ಮ ಮೇಲಿನ ಕಠೋರ ಮುನಿಸು
ನಿಜ ನುಡಿಯುವುದೇ ನಮ್ಮ ತಪ್ಪೆಂದರೆ ತಿಳಿಸು

ನಾವೇ ಮಾಡುವೆವು ನಮ್ಮ ಹೃದಯದ ಕೊಲೆ
ಪ್ರಶಾಂತ ಪ್ರಪಂಚದೊಳು ಇಲ್ಲ ಸತ್ಯಕ್ಕೆ ಬೆಲೆ
ಕಾಣುವುದು ಕಣ್ಣೆದುರಲ್ಲಿ ಕಷ್ಟಗಳ ಕಪ್ಪಾದ ಕಲೆ
ಸುತ್ತಮುತ್ತಲು ಸುಳಿದಾಡುತ್ತಿದೆ ಸುಳ್ಳಿನ ಸೆಲೆ

ಕಬ್ಬಿಣದ ಕಂಬಿಗಳ ಮೇಲಿನ ಬಾಳಿನ ಬಂಡಿ
ಆಗಿರುವುದಿಲ್ಲಿ ಹುಚ್ಚು ಹೊಟ್ಟೆಕಿಚ್ಚಿನ ಉಗಿಬಂಡಿ
ತುಂಬಿಹುದು ಮುಸುಕುಧಾರಿಗಳ ಸುಳ್ಳಿನ ಹುಂಡಿ
ಕಲ್ಪನೆಗಳ ಬರೆದಿಟ್ಟ ಕವನಗಳು ಸೇರಿ ತಿಪ್ಪೆಗುಂಡಿ

ನೆನಪುಗಳ ನೂರೊಂದು ನೋಟದ ನರ್ತನ
ಮನದಲ್ಲಿ ಮೂಡುವುದು ಪ್ರೀತಿಯ ಸಿಂಚನ
ಹೃದಯದ ಕೊಲೆ, ರಕ್ತದೋಕುಳಿಯ ಗಾಯನ
ಆ ನೆತ್ತರಿನೋಳು ಬರೆದಿರುವ ನಿಜವು ಈ ಕವನ .. !!

ಬಾಳೊಂದು ಚದುರಂಗದಾಟ..!!
ಬಾಳಿಗೂ ಚದುರಂಗಕ್ಕೂ ಇರುವ ನಂಟು
ಉತ್ತರ ತಿಳಿದರೂ ಬಿಡಿಸಲಾಗದ ಒಗಟು
ಎಷ್ಟು ಬರೆದರೂ ಇದು ಮುಗಿಯದ ಕವನ
ಎಲ್ಲವೂ "ಮಹಾ ರಹಸ್ಯ" ಇದುವೇ ಜೀವನ..!!


|| ಪ್ರಶಾಂತ್ ಖಟಾವಕರ್ ||

Saturday, 14 January 2012

ಪ್ರೆಮಲೋಕದಲ್ಲೊಬ್ಬ ಕವಿ



ಪ್ರೆಮಲೋಕದಲ್ಲೊಬ್ಬ ಕವಿ
**************************************
ನಗ್ತಾಳೆ ನಗ್ತಾಳೆ ನನ್ನ ಚೆಲುವೆ
ನಗುವಾಗ ಮಿಂಚುತಾಳೆ
ಅದ ಕಂಡು ಇಡೀ ಜಗವ ನಾ ಗೆಲ್ಲುವೆ

ಕುಣಿತಾಳೆ ಕುಣಿತಾಳೆ ನನ್ನ ಚೆಲುವೆ
ಕುಣಿಯುವಾಗ ನವಿಲಿನಂತೆ
ಅದ ಕಂಡು ಅವಳಿಗೆ ನಾ ಸೋಲುವೆ

ಹಾಡ್ತಾಳೆ ಹಾಡ್ತಾಳೆ ನನ್ನ ಚೆಲುವೆ
ಹಾಡುವಾಗ ಕೋಗಿಲೆಯಂತೆ
ಅದ ಕಂಡು ಕೇಳಿ ನಾ ತಲೆಯಾಡಿಸುವೆ

ಬರಿತಾಳೆ ಬರಿತಾಳೆ ನನ್ನ ಚೆಲುವೆ
ಕವನಗಳ ಮುತ್ತಿನ ಮಾಲೆಯಂತೆ
ಅದ ಕಂಡು ಹೇಳಿದೆ ನಾ ಚೆಲುವೆಯೇ ನಿನ್ನೇ ಪ್ರೀತಿಸುವೆ.. :)

|| ಪ್ರಶಾಂತ್ ಖಟಾವಕರ್ ||

Friday, 13 January 2012

ಸ್ವರ್ಗ ಹುಡುಕುತ



 

ಸ್ವರ್ಗ ಹುಡುಕುತ
*****************
 ಸ್ವರ್ಗವು ಎಲ್ಲಿದೆ
ಪ್ರೇಯಸಿಯ ಪ್ರಶ್ನೆ
ನರಕವು ಗೊತ್ತಿದೆ
ಪ್ರಿಯತಮನ ಉತ್ತರ



 ಆಸೆಯು ಅತಿಯಾಗಿದೆ
ಸ್ವರ್ಗವ ನೋಡಲು
ಕುತೂಹಲ ಹೆಚ್ಚಾಗಿದೆ
ಆ ಸೌಂದರ್ಯ ಸವಿಯಲು
ಪ್ರೇಯಸಿಯು ಕೇಳಿದಳು..


 ಬೇಡ ಬೇಡ ಅತಿ ಆಸೆಯು
ನರಕವ ನೀ ನೋಡಲಾರೆ
ರೋಮಾಂಚನ ಆ ತಾಣ , ಆದರೂ
ಸ್ವರ್ಗದ ರೂಪದೊಳು ನರಕವು
ಎಲ್ಲವೂ ರಹಸ್ಯಮಯ ಜಗವು


 ಹುಡುಕಲು ಎಲ್ಲೂ ಇಲ್ಲ ಜಾಣೆ
ನೀ ಕೇಳಿದ ಆ ಸ್ವರ್ಗವು
ನಮ್ಮ ಪಾಲಿಗೆ ಸಿಕ್ಕಿದ್ದೇ ಸುಖವೆಂದು
ಒಮ್ಮೆ ನಂಬಿದರೆ ಅದೇ ನಿಜ ಸ್ವರ್ಗವು


ಅನುಭವಿಸಲು ಸ್ವರ್ಗ ಸುಖವ
ಮೊದಲು ಕಲಿಯಬೇಕು ಬದುಕಲು
ಸ್ನೇಹ  ಸಂಬಂಧ  ಪ್ರೇಮವ ತಿಳಿದರೆ
ಈ ಬಾಳಿನಲ್ಲಿ ಇಡೀ ಜಗವೇ ಸ್ವರ್ಗಕ್ಕೆ ಸಮ.. :)

 
|| ಪ್ರಶಾಂತ್ ಖಟಾವಕರ್ ||

Thursday, 12 January 2012

ಬಾಳೊಂದು ಚದುರಂಗದಾಟ..!!


Life is like a game of
>>>> CHESS <<<<
Play it to win it .. !!
********************
ಬಾಳೊಂದು ಚದುರಂಗದಾಟ
ಆಟವ ಗೆಲ್ಲಲ್ಲು ಆಡಲೇಬೇಕು
********************

ಬಾಳೊಂದು ಚದುರಂಗದಾಟ..! :)
ಬಾಳಿಗೂ ಚದುರಂಗಕ್ಕೂ ಇರುವ ನಂಟು
ಉತ್ತರ ತಿಳಿದರೂ ಬಿಡಿಸಲಾಗದ ಒಗಟು
ಎಷ್ಟು ಬರೆದರೂ ಇದು ಮುಗಿಯದ ಕವನ
ಎಲ್ಲವೂ ಮಹಾ ರಹಸ್ಯ.. ಇದುವೇ ಜೀವನ..! :)

|| ಪ್ರಶಾಂತ್ ಖಟಾವಕರ್ ||

Tuesday, 10 January 2012

ಪ್ರಥಮ ಪ್ರೇಮಕವನ



ಪ್ರಥಮ ಪ್ರೇಮಕವನ
******************

ಯಾರ್ಯಾರೋ 
ಬಂದವರು ನನ್ನ ಜೊತೆ
ಯಾರ್ಯಾರು
ಹೋಗುವರೋ ನನ್ನ ಜೊತೆ..

ಯಾರ್ಯಾರದ್ದೋ
ವಿಶೇಷ ಕಥೆಗಳು
ಯಾರ್ಯಾರದ್ದೋ
ಅನೇಕ ವ್ಯಥೆಗಳು
ಎಲ್ಲದರ ನಡುವಲ್ಲಿ
ಸಾವಿರಾರು ಸಿಹಿದಿನಗಳು
ಆ ದಿನಗಳ , ಆ ಕ್ಷಣಗಳ
ನೂರಾರು ನೆನಪುಗಳು

ನನ್ನೆದೆಯ ಗೂಡಲ್ಲಿ
ಬಚ್ಚಿಟ್ಟ ಭಾವನೆ
ಅವುಗಳ ನಾ ಬರೆದರೆ
ಅನ್ನಿಸಬಹುದು ಕಲ್ಪನೆ
ಬಣ್ಣ ಬಣ್ಣಗಳ ಕನಸು ಕಟ್ಟಿ
ಬರೆದ ಕವನ ಮನಮುಟ್ಟಲು
ಅದೇ ನನ್ನ ಮನಸ್ಸಿನ ತೃಪ್ತಿ
ನೀನೇ ಕಣೇ.. ಗೆಳತಿ..!!
ಈ ಕವನಗಳ ಸ್ಫೂರ್ತಿ

ನಿನ್ನ ಪ್ರೀತಿಗಾಗಿ
ನನ್ನ ಪದಗಳ ಮಳೆ
ನೀನೆಂದು ಸುರಿಸುವೆ
ನಿನ್ನ ಪ್ರೀತಿಯ ಹೂಮಳೆ

ಆ ನಿನ್ನ ಕಣ್ಣುಗಳ ನೋಡುತ
ನಿನ್ನ ಅಧರದ ಮಧುರ ಸಿಹಿ ಸವಿ
ನೆನೆದರೆ ಸಾಕು ರೋಮಾಂಚನ
ಅದುವೇ ಸ್ವರ್ಗ , ಪ್ರೀತಿಯ ಸಿಂಚನ

ಆ ನಿನ್ನ ನೀಳವಾದ 
ಕೇಶರಾಶಿಯ ಚೆಲುವು
ಮನಸೆಳೆಯುವ ಜಾದೂ ಅದು
ಬಲು ಆಕರ್ಷಣೆಯ ಮೈಮಾಟ
ಒಂದು ಕ್ಷಣ ನೀನಿಲ್ಲವೆಂದರೆ ಸಂಕಟ

ಕಾಲ್ಗೆಜ್ಜೆಯ ಕಟ್ಟಿ ನೀ ಕುಣಿಯಲು
ನನ್ನಲ್ಲಿ ಕವಿಯೊಬ್ಬನ ಜನನ..
ಕೈ ಬೀಸಿ ನೀ ಕರೆಯಲು ಪ್ರೀತಿಯಲಿ
ಬರುವವು ನಿನಗಾಗಿ ಮುಗಿಯದ ಕವನ..
ಹಾಲು ಜೇನು ಪ್ರೀತಿಯಲಿ ಈ ಜೀವನ
ನೀ ಒಪ್ಪಿದರೆ ಸಾಕು ಕಣೇ.. ಈ ಜೀವನ ಧನ್ಯ .. :)

ನಾ ಇಲ್ಲದಿರಬಹುದು
ನಿನ್ನ ಕನಸಿನ ರಾಜ
ಆದರೆ ತಿಳಿದಿರುವೆ 
ಸುಸಂಸ್ಕೃತಿಯ ವಿಚಾರ
ಅನುಭವಗಳು ಅಪಾರ
ಹೇಗೆಂದು ಕಂಡಿರುವೆ ಸಂಸಾರ
ಸ್ನೇಹದಲಿ ಉತ್ತಮನು
ನನಗಾಗಿ ಅದೆಷ್ಟೋ ಜನಸಾಗರ

ಬೇಡವೆಂದು ಒಂದು ಮಾತು
ಸುಮ್ಮನಾಗುವೆ ಅದೇ ಕ್ಷಣದಿ
ಸತಾಯಿಸುವುದಿಲ್ಲ ಪ್ರೀತಿಸೆಂದು
ನಿನ್ನ ಮೆಚ್ಚಿ ಹೇಳಿದ ಹೃದಯದ ಮಾತು

ಇದು ನಾ ಬರೆದ ಮೊದಲ ಪ್ರೇಮಪತ್ರ
ನೀ ನನ್ನ ಹೃದಯಕ್ಕೆ ಆಗಿರುವೆ ಬಲು ಹತ್ರ
ಬಲ್ಲೆನು ನಿನ್ನ ಗೆಲ್ಲುವ ಹಲವು ಪ್ರೇಮಸೂತ್ರ
ನಮ್ಮಪ್ಪ ನಮ್ಮಮ್ಮನ ಮೊದಲನೇ ಪುತ್ರ
ಇದು ಕೇವಲ ನನ್ನ ಪರಿಚಯದ ತುಣುಕು ಮಾತ್ರ

ಇಣುಕಿ ನೋಡು ನನ್ನೆದೆಯೋಳು
ನೀ ತಿಳಿಯಲು ಪ್ರೀತಿಯ ಪ್ರಶ್ನೋತ್ತರ
ಮೊದಲೇ ಹೇಳಿರುವೆ 
ಇದು ನನ್ನ ಮೊದಲ ಪ್ರೇಮಪತ್ರ
ಹೇಗೆ ಮುಗಿಸಲೋ ತಿಳಿಯದು
ಬರೆಯಲು ಪ್ರೀತಿ ಇನ್ನೂ ಬಾಕಿ ಇರುವುದು
ಮುಗಿಯದ ಈ ಪ್ರೇಮಕವನ
ಪದಗಳು ನೆಪ ಮಾತ್ರವೇ ಜಾಣೆ
ನಿನಗರ್ಥವಾಗುವುದೋ ಇಲ್ಲವೋ ನಾಕಾಣೆ

ಯಾರ್ಯಾರೋ 
ಬಂದವರು ನನ್ನ ಜೊತೆ
ಯಾರ್ಯಾರು
ಹೋಗುವರೋ ನನ್ನ ಜೊತೆ..
ಕೈ ಬೀಸಿ ನೀ ಕರೆಯಲು ಪ್ರೀತಿಯಲಿ
ಬರುವವು ನಿನಗಾಗಿ ಮುಗಿಯದ ಕವನ..
ಹಾಲು ಜೇನು ಪ್ರೀತಿಯಲಿ ಈ ಜೀವನ
ನೀ ಒಪ್ಪಿದರೆ ಸಾಕು ಕಣೇ.. ಈ ಜೀವನ ಧನ್ಯ .. :)

ನಿನಗಾಗಿ ನನ್ನೆದೆಯಾಳದಿಂದ ಪ್ರಥಮ ಪ್ರೇಮಕವನ

|| ಪ್ರಶಾಂತ್ ಖಟಾವಕರ್ ||