************
ಓ ನನ್ನ ಪ್ರೀತಿಯೇ
ಓದು ನೀ ಈ ಕವನ
ನಿನಗಾಗಿ ಬರೆದ ನನ್ನ
ಮನದಾಳದ ಪ್ರೇಮವನ್ನ
ಬಣ್ಣ ಬಣ್ಣದ ಭಾವನೆಗಳ\
ಚಿತ್ರ ಚಿತ್ತಾರವ ಬರೆದು,
ಜೊತೆಯಲ್ಲಿ ಪ್ರೇಮದ ಓಲೆ
ಒಮ್ಮೆ ಓದು ನೀ ನನ್ನ ನಲ್ಲೆ
ಬಣ್ಣದ ಬದುಕನ್ನು ಕಟ್ಟಲು
ನಿನ್ನ ಪ್ರೇಮ ಬಯಸಿ ಬಂದೆ
ಹೃದಯದಿ ಪ್ರೀತಿಯು ಹುಟ್ಟಲು
ನಾ ಮೊದಲ ಪತ್ರವ ಬರೆದೆ
(ಪ್ರೇಮ ಪತ್ರ : ಪ್ರೀತಿಯ ಮಾತುಗಳಾ ಕಾಣಿಕೆ ಕೊಟ್ಟವಳೇ >> ಇಲ್ಲಿ ಒತ್ತಿರಿ)
ಅದ ನೋಡಿ ನೀ ಏನೂ ಹೇಳದೆ
ಮೌನ ಶಿಲೆಯಂತೆ ಏಕೆ ಸುಮ್ಮನಿದ್ದೆ
ಬಣ್ಣ ಬಣ್ಣದ ಪ್ರೀತಿ ಪದಗಳ ತಿಳಿಯದೆ
ಆ ಬಣ್ಣಗಳ ಪತ್ರವನ್ನೇ ಸುಟ್ಟು ಹಾಕಿದೆ
ಓ ಪ್ರೀತಿಯೇ ನಿನಗೇನು ಗೊತ್ತು
ಸತ್ಯವಾದ ಪ್ರೀತಿಯ ಆ ತಾಕತ್ತು
ಪ್ರೇಮ ಪತ್ರ ಧಗಧಗನೆ ಉರಿದಿತ್ತು
ಆ ಬೆಂಕಿಯಲ್ಲೂ ಸಹ ಬಣ್ಣ ಕಾಣುತಿತ್ತು
ಸುಡುವ ಹಾಳೆಯಲ್ಲಿ ಹಳದಿ ನೀಲಿ ಕೆಂಪು
ಸುಟ್ಟು ಬೂದಿಯಾದರೂ ಸಹ ಕಪ್ಪು ಬಿಳುಪು
ನಿನ್ನ ಪ್ರೀತಿಸುವುದ ಬಿಟ್ಟು ಮಾಡಿಲ್ಲ ನಾ ತಪ್ಪು
ಪ್ರೀತಿಯು ಬಣ್ಣಗಳಂತೆ ಅಮರ, ಒಮ್ಮೆ ನೀ ಒಪ್ಪು
ಭಾರಿ ಜೋರು ಆ ಉರಿವ ಜ್ವಾಲೆ
ಸುಟ್ಟರು ಸಹ ಪ್ರೀತಿ ಪದಗಳ ಮಾಲೆ
ಸಾವಿಲ್ಲ ಬಣ್ಣಗಳಿಗೆ ಉರಿದರೂ ಹಾಳೆ
ಬಣ್ಣಗಳ ಪ್ರೀತಿಯು ನನ್ನದು ಒಪ್ಪಿಕೊಳ್ಳೆ .. :)
|| ಪ್ರಶಾಂತ್ ಖಟಾವಕರ್ ||
|| ಪ್ರಶಾಂತ್ ಖಟಾವಕರ್ ||
ಗೆಳೆಯ ನಿಮಗೆ ಮೊದಲು ಅಭಿನಂದಿಸ ಬೇಕಾದ್ದು ನಿಮ್ಮ ನಿರಂತರ ಕಾವ್ಯ ಚಟುವಟಿಕೆಗೆ. ದಿನವೂ ಒಂದು ಕವಿತೆ ಬರೆಯುವ ಮತ್ತು ಅದನ್ನು ಸುಂದರ ಚಿತ್ರಗಳ ಜೊತೆ ಪ್ರಸ್ತುತ ಪಡಿಸುವ ನಿಮ್ಮ ಉತ್ಸಾಹಕ್ಕೆ ಶರಣು!
ReplyDeleteಹೀಗೆ ನಿರಂತರವಾಗಿ ಬರೆಯುವುದೂ ಒಂದು ಸಿದ್ಧಿಯೇ...
ಕಾಮನಬಿಲ್ಲಿನಲ್ಲಿ ಆಕೆ ತುಸು ಮುನಿಸಿಕೊಂಡಂತೆ ಕಾಣುತ್ತಿದ್ದಾಳೆ. ನೀವು ಪೂಸಿ ಮಾಡಿ ಪತ್ರ ಬರೆದು ಅದನ್ನು ಆಕೆಗೆ ಅರ್ಪಿಸಿ ಮತ್ತೆ ಮತ್ತೆ ಕಾಡಿ ಒಲೈಸಿಕೊಳ್ಳುವ ಕಲೆ ರೂಡಿಸಿಕೊಳ್ಳಿ. ಆಕೆ ಖಂಡಿತ ಪ್ರೀತಿ ಮಾಡೇ ಮಾಡುತ್ತಾಳೆ.
ಭಾಷಾ ಬಳಕೆಯಲ್ಲೂ, ಪದ ಜೋಡಣೆಯಲ್ಲೂ ಇಲ್ಲಿಯೂ ಗೆದ್ದಿದ್ದೀರಿ.
ಪ್ರಶಾಂತ್ ಸುಂದರವಾಗಿದೆ ನಿಮ್ಮ ಬ್ಲಾಗ್. ನಿಮ್ಮ ಭಾಷೆಯ ಹಿಡಿತ ಅದ್ಭುತ. ಹೀಗೆ ನಿಮ್ಮ ಬರವಣಿಗೆ ನಿರಂತರವಾಗಿ ಸಾಗಲಿ
ReplyDelete