ವರುಣ + ಹಸಿರು ಕ್ರಾಂತಿ .. !!
***********************
ಸರಸರನೆ ಸರಸರನೆ
ಭರಭರೆನೆ ಭರಭರನೆ
ಬಂದನಲ್ಲಿಗೆ ವರುಣನು
ಶರವೇಗದ ಸರದಾರನು..
ನವಯೌವನದ ತರುಣ
ಹನಿ ಹನಿ ಆರ್ಭಟದ ಕ್ಷಣ
ಧರೆಯೆಲ್ಲಾ ನೆನೆದು ತಲ್ಲಣ
ಹೊಸ ಚಿಗುರಿಗೆ ಅದು ಕಾರಣ..
ಹಸಿರು ಹರಿದಾಡಿತು ಊರಲ್ಲೆಲ್ಲಾ
ಉಸಿರು ಹಾರಾಡಿತು ಜಗದಲ್ಲೆಲ್ಲಾ
ಕುಣಿದು ಹಾಡಲು ಎಷ್ಟೋ ಬಡಜೀವ
ಬದುಕಲು ಬೇಕು ಈ ವರುಣ ವೈಭವ..
ಸರಸರನೆ ಸರಸರನೆ
ಭರಭರೆನೆ ಭರಭರನೆ
ಬಂದನಲ್ಲಿಗೆ ವರುಣನು
ಶರವೇಗದ ಸರದಾರನು..
ತುಂಬಿ ಚೀಲವ ಬೆಳೆದ ಮೂಟೆ ರಾಶಿ
ಬಂದ ಲಾಭಕ್ಕೆ ಸಿಕ್ಕ ಸಂಸಾರ ಖುಷಿ
ಆಗಲಿಲ್ಲ ದೇವರಲ್ಲಿ ಬೇಡಿದ ಬಯಕೆ ಹುಸಿ
ಮಾಡಲು ಹಬ್ಬವ ಬಂಧು ಬಳಗವ ಸೇರಿಸಿ..
ಮನದೊಳು ಮೂಡುವ ಸಂತಸದ ಕಾಂತಿ
ನೆನಪುಗಳ ಸುಂದರ ಸಂಪ್ರದಾಯ ಸಂಕ್ರಾಂತಿ
ದುಡಿದ ದೇಹಕ್ಕೆ ದುಃಖ ದೂರ , ಸಿಗುವ ಶಾಂತಿ
ಹೇಗೆ ಮರೆಯಲಿ ವರುಣನ , ಅವನಿದ್ದಲ್ಲಿ ಹಸಿರು ಕ್ರಾಂತಿ .. :)
|| ಪ್ರಶಾಂತ್ ಖಟಾವಕರ್ ||
ಕವನ ಚೆನ್ನಾಗಿದೆ... ನಿಮ್ಮ ತಾಣವು ಕೂಡ ಚೆನ್ನಾಗಿದೆ..
ReplyDeleteಚಿತ್ರಗಳೊಂದಿಗೆ ಹೊಸ ಹೊಸ ಕವನಗಳ ಓದಲು ಬನ್ನಿ. ಹಾಗು ನಿಮ್ಮ ಅಮೂಲ್ಯವಾದ ಪ್ರತಿಕ್ರಿಗಳ ಮತ್ತು ಸರಿ ತಪ್ಪು ಎಲ್ಲವನ್ನು ನಮ್ಮೊಡನೆ ಹಂಚಿಕೊಳ್ಳಿ. ಹಾಗು ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಹಾಗು ಮೆಚ್ಚುಗೆಯ ಮಾತುಗಳಿಗೆ, ಹೃತ್ಪೂರ್ವಕ ವಂದನೆಗಳು.. :)
Delete