ಪ್ರಥಮ ಪ್ರೇಮಕವನ
******************
ಯಾರ್ಯಾರೋ
ಬಂದವರು ನನ್ನ ಜೊತೆ
ಯಾರ್ಯಾರು
ಹೋಗುವರೋ ನನ್ನ ಜೊತೆ..
ಯಾರ್ಯಾರದ್ದೋ
ವಿಶೇಷ ಕಥೆಗಳು
ಯಾರ್ಯಾರದ್ದೋ
ಅನೇಕ ವ್ಯಥೆಗಳು
ಎಲ್ಲದರ ನಡುವಲ್ಲಿ
ಸಾವಿರಾರು ಸಿಹಿದಿನಗಳು
ಆ ದಿನಗಳ , ಆ ಕ್ಷಣಗಳ
ನೂರಾರು ನೆನಪುಗಳು
ನನ್ನೆದೆಯ ಗೂಡಲ್ಲಿ
ಬಚ್ಚಿಟ್ಟ ಭಾವನೆ
ಅವುಗಳ ನಾ ಬರೆದರೆ
ಅನ್ನಿಸಬಹುದು ಕಲ್ಪನೆ
ಬಣ್ಣ ಬಣ್ಣಗಳ ಕನಸು ಕಟ್ಟಿ
ಬರೆದ ಕವನ ಮನಮುಟ್ಟಲು
ಅದೇ ನನ್ನ ಮನಸ್ಸಿನ ತೃಪ್ತಿ
ನೀನೇ ಕಣೇ.. ಗೆಳತಿ..!!
ಈ ಕವನಗಳ ಸ್ಫೂರ್ತಿ
ನಿನ್ನ ಪ್ರೀತಿಗಾಗಿ
ನನ್ನ ಪದಗಳ ಮಳೆ
ನೀನೆಂದು ಸುರಿಸುವೆ
ನಿನ್ನ ಪ್ರೀತಿಯ ಹೂಮಳೆ
ಆ ನಿನ್ನ ಕಣ್ಣುಗಳ ನೋಡುತ
ನಿನ್ನ ಅಧರದ ಮಧುರ ಸಿಹಿ ಸವಿ
ನೆನೆದರೆ ಸಾಕು ರೋಮಾಂಚನ
ಅದುವೇ ಸ್ವರ್ಗ , ಪ್ರೀತಿಯ ಸಿಂಚನ
ಆ ನಿನ್ನ ನೀಳವಾದ
ಕೇಶರಾಶಿಯ ಚೆಲುವು
ಮನಸೆಳೆಯುವ ಜಾದೂ ಅದು
ಬಲು ಆಕರ್ಷಣೆಯ ಮೈಮಾಟ
ಒಂದು ಕ್ಷಣ ನೀನಿಲ್ಲವೆಂದರೆ ಸಂಕಟ
ಕಾಲ್ಗೆಜ್ಜೆಯ ಕಟ್ಟಿ ನೀ ಕುಣಿಯಲು
ನನ್ನಲ್ಲಿ ಕವಿಯೊಬ್ಬನ ಜನನ..
ಕೈ ಬೀಸಿ ನೀ ಕರೆಯಲು ಪ್ರೀತಿಯಲಿ
ಬರುವವು ನಿನಗಾಗಿ ಮುಗಿಯದ ಕವನ..
ಹಾಲು ಜೇನು ಪ್ರೀತಿಯಲಿ ಈ ಜೀವನ
ನೀ ಒಪ್ಪಿದರೆ ಸಾಕು ಕಣೇ.. ಈ ಜೀವನ ಧನ್ಯ .. :)
ನಾ ಇಲ್ಲದಿರಬಹುದು
ನಿನ್ನ ಕನಸಿನ ರಾಜ
ಆದರೆ ತಿಳಿದಿರುವೆ
ಸುಸಂಸ್ಕೃತಿಯ ವಿಚಾರ
ಅನುಭವಗಳು ಅಪಾರ
ಹೇಗೆಂದು ಕಂಡಿರುವೆ ಸಂಸಾರ
ಸ್ನೇಹದಲಿ ಉತ್ತಮನು
ನನಗಾಗಿ ಅದೆಷ್ಟೋ ಜನಸಾಗರ
ಬೇಡವೆಂದು ಒಂದು ಮಾತು
ಸುಮ್ಮನಾಗುವೆ ಅದೇ ಕ್ಷಣದಿ
ಸತಾಯಿಸುವುದಿಲ್ಲ ಪ್ರೀತಿಸೆಂದು
ನಿನ್ನ ಮೆಚ್ಚಿ ಹೇಳಿದ ಹೃದಯದ ಮಾತು
ಇದು ನಾ ಬರೆದ ಮೊದಲ ಪ್ರೇಮಪತ್ರ
ನೀ ನನ್ನ ಹೃದಯಕ್ಕೆ ಆಗಿರುವೆ ಬಲು ಹತ್ರ
ಬಲ್ಲೆನು ನಿನ್ನ ಗೆಲ್ಲುವ ಹಲವು ಪ್ರೇಮಸೂತ್ರ
ನಮ್ಮಪ್ಪ ನಮ್ಮಮ್ಮನ ಮೊದಲನೇ ಪುತ್ರ
ಇದು ಕೇವಲ ನನ್ನ ಪರಿಚಯದ ತುಣುಕು ಮಾತ್ರ
ಇಣುಕಿ ನೋಡು ನನ್ನೆದೆಯೋಳು
ನೀ ತಿಳಿಯಲು ಪ್ರೀತಿಯ ಪ್ರಶ್ನೋತ್ತರ
ಮೊದಲೇ ಹೇಳಿರುವೆ
ಇದು ನನ್ನ ಮೊದಲ ಪ್ರೇಮಪತ್ರ
ಹೇಗೆ ಮುಗಿಸಲೋ ತಿಳಿಯದು
ಬರೆಯಲು ಪ್ರೀತಿ ಇನ್ನೂ ಬಾಕಿ ಇರುವುದು
ಮುಗಿಯದ ಈ ಪ್ರೇಮಕವನ
ಪದಗಳು ನೆಪ ಮಾತ್ರವೇ ಜಾಣೆ
ನಿನಗರ್ಥವಾಗುವುದೋ ಇಲ್ಲವೋ ನಾಕಾಣೆ
ಯಾರ್ಯಾರೋ
ಬಂದವರು ನನ್ನ ಜೊತೆ
ಯಾರ್ಯಾರು
ಹೋಗುವರೋ ನನ್ನ ಜೊತೆ..
ಕೈ ಬೀಸಿ ನೀ ಕರೆಯಲು ಪ್ರೀತಿಯಲಿ
ಬರುವವು ನಿನಗಾಗಿ ಮುಗಿಯದ ಕವನ..
ಹಾಲು ಜೇನು ಪ್ರೀತಿಯಲಿ ಈ ಜೀವನ
ನೀ ಒಪ್ಪಿದರೆ ಸಾಕು ಕಣೇ.. ಈ ಜೀವನ ಧನ್ಯ .. :)
ನಿನಗಾಗಿ ನನ್ನೆದೆಯಾಳದಿಂದ ಪ್ರಥಮ ಪ್ರೇಮಕವನ
|| ಪ್ರಶಾಂತ್ ಖಟಾವಕರ್ ||
ಮೊದಲ ಪ್ರೇಮ ಪತ್ರ ಮನಸಿನೊಳಗೆ ಉಂಟು ಮಾಡುವ ಕಂಪನಗಳ ಸಿಹಿಯನ್ನು ಅತ್ಯುತ್ತಮವಾಗಿ ಚಿತ್ರಿಸಿದ್ದೀರ.
ReplyDeleteನಿಮ್ಮ ಕಾವ್ಯ ಕನ್ನಿಕೆ ಅಕ್ಕರ ಮುತ್ತುಗಳನು ಕೊಡುತ್ತಲೇ ಇರಲಿ.
ಮನಮೋಹಕ ಸಾಲುಗಳು ಸರ್ :)
ReplyDeleteಒಂದು ಸುಂದರ ಕವನ !!