ಪ್ರೆಮಲೋಕದಲ್ಲೊಬ್ಬ ಕವಿ
**************************************
ನಗ್ತಾಳೆ ನಗ್ತಾಳೆ ನನ್ನ ಚೆಲುವೆ
ನಗುವಾಗ ಮಿಂಚುತಾಳೆ
ಅದ ಕಂಡು ಇಡೀ ಜಗವ ನಾ ಗೆಲ್ಲುವೆ
ಕುಣಿತಾಳೆ ಕುಣಿತಾಳೆ ನನ್ನ ಚೆಲುವೆ
ಕುಣಿಯುವಾಗ ನವಿಲಿನಂತೆ
ಅದ ಕಂಡು ಅವಳಿಗೆ ನಾ ಸೋಲುವೆ
ಹಾಡ್ತಾಳೆ ಹಾಡ್ತಾಳೆ ನನ್ನ ಚೆಲುವೆ
ಹಾಡುವಾಗ ಕೋಗಿಲೆಯಂತೆ
ಅದ ಕಂಡು ಕೇಳಿ ನಾ ತಲೆಯಾಡಿಸುವೆ
ಬರಿತಾಳೆ ಬರಿತಾಳೆ ನನ್ನ ಚೆಲುವೆ
ಕವನಗಳ ಮುತ್ತಿನ ಮಾಲೆಯಂತೆ
ಅದ ಕಂಡು ಹೇಳಿದೆ ನಾ ಚೆಲುವೆಯೇ ನಿನ್ನೇ ಪ್ರೀತಿಸುವೆ.. :)
|| ಪ್ರಶಾಂತ್ ಖಟಾವಕರ್ ||
ಬಹಳ ಚನ್ನಾಗಿದೆ ಪ್ರಶಾಂತ್...ಯಾವುದಾದರೂ ಒಬ್ಬ ಚೆಲುವೆಲಿ ಇವೆಲ್ಲಾ ಗುಣ ಇದ್ರೆ ಅವಳನ್ನು ನೀವು ಮೆಚ್ಚಿದ್ರೆ...ವಾವ್ !!
ReplyDelete