ಬಾಳೊಂದು ಚದುರಂಗದಾಟ
ಆಟವ ಗೆಲ್ಲಲ್ಲು ಆಡಲೇಬೇಕು
ಆಡುವ ಮೊದಲೇ ಚಿಂತಿಸಬೇಕು
ಗೆಲ್ಲುವ ಯೋಜನೆಗಳ ರೂಪಿಸಬೇಕು.
ಬಾಳೊಂದು ಚದುರಂಗದಾಟ
ಕ್ಷಣ ಕ್ಷಣಕ್ಕೂ ಬದಲಾಗುವ ದಾರಿ
ಬದಲಾದರೂ ಇರಬೇಕು ಒಂದೇ ಗುರಿ
ಅದಕ್ಕಾಗಿ ಅನೇಕ ಚಿಂತನೆಯ ಪರಿ..
ಬಾಳೊಂದು ಚದುರಂಗದಾಟ
ಬಲ್ಲವರು ಯಾರು ವಿಧಿಯಾಟ
ಅದೆಷ್ಟೋ ಆಗುಹೋಗುಗಳ ಕಾಟ
ಏನೇ ಆದರೂ ನಿಲ್ಲದು ಆಸೆಗಳ ಓಟ..
ಇತಿಹಾಸ ಸಾಕ್ಷಿ , ನೆನಪುಗಳ ನೋಟ
ಬಾಳಿನಲ್ಲಿ ರಾಣಿಗಾಗಿ ರಾಜನ ಹೋರಾಟ
ಚದುರಂಗದಲ್ಲಿ ರಾಜನಿಗಾಗಿ ರಾಣಿಯ ಹೋರಾಟ
ಬಲ್ಲವರಾರು ಈ ಬಾಳೊಂದು ಚದುರಂಗದಾಟ..!!
**********************************************
ಒಂದು ವಿಚಿತ್ರ ಮಾತ್ರ ಅಸ್ಪಷ್ಟ..
ಇತಿಹಾಸ ಸಾಕ್ಷಿ , ನೆನಪುಗಳ ನೋಟ
ಬಾಳಿನಲ್ಲಿ ರಾಣಿಗಾಗಿ ರಾಜನ ಹೋರಾಟ
ಚದುರಂಗದಲ್ಲಿ ರಾಜನಿಗಾಗಿ ರಾಣಿಯ ಹೋರಾಟ
ಬಲ್ಲವರಾರು ಈ ಬಾಳೊಂದು ಚದುರಂಗದಾಟ..!!
--------------------------------------------------------
ಬಾಳಿನಲ್ಲಿ ರಾಣಿಗಾಗಿ ರಾಜನ ಹೋರಾಟ
ಹೆಣ್ಣಿಗಾಗಿ ಗಂಡಿನ ಹೊಡೆದಾಟ ...
ಇತಿಹಾಸದಲ್ಲಿ ಅನೇಕ ಉದಾಹರಣೆಗಳು ಇದೆ..
ಜಾಸ್ತಿ ಸಿನೆಮಾ , ನಾಟಕಗಳಲ್ಲಿ ಅದೇ.. ಇರುತ್ತೆ..
"ಜೀವನ ಒಂದು ನಾಟಕ ರಂಗ" ಅಂತಾರೆ.. ಅಲ್ಲಿ..
.
.
ಚದುರಂಗದಲ್ಲಿ ರಾಜನಿಗಾಗಿ ರಾಣಿಯ ಹೋರಾಟ
ಆ ಆಟದ ನಿಯಮ ಇರೋದೇ ಹಾಗೆ.. ರಾಜ ಯೋಚನೆ ಮಾಡಿ ಒಂದೊಂದೇ ಹೆಜ್ಜೆ ಹಾಕಬೇಕು..
ಆದರೆ ರಾಣಿ ಎಂಟು ದಿಕ್ಕಲ್ಲೂ ಸಂಚಾರ .. ರಾಜನ ಗೆಲುವಿನಲ್ಲಿ ಹೆಚ್ಚಿನ ಪಾತ್ರ ರಾಣಿಯದ್ದೆ ಆಗಿದೆ..
ಅದಕ್ಕೆ "ಪ್ರತೀ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ" ಅಂತಾರೆ ಅಲ್ಲಿ..
ಬಲ್ಲವರಾರು ಈ ಬಾಳೊಂದು ಚದುರಂಗದಾಟ..!! .. :)
|| ಪ್ರಶಾಂತ್ ಖಟಾವಕರ್ ||
SUPER GURUGALE!
ReplyDeleteನಿಮ್ಮ ಮಾತು ಮತ್ತು ನಿಮ್ಮ ಪ್ರೋತ್ಸಾಹಗಳಿಗೆ ಹೃತ್ಪೂರ್ವಕ ವಂದನೆಗಳು... :)
Deleteಪ್ರತಿಕ್ರಿಯೆ ಕನ್ನಡದಲ್ಲಿ ಬರೆದರೆ ತುಂಬಾ ಖುಷಿ.. ಕನ್ನಡ ಬರೆಯಲು ಇಲ್ಲೇ ಪಕ್ಕದಲ್ಲಿ ಎರಡು ರೀತಿಯ ಸಹಾಯಗಳು ಇದೆ.. ಒಮ್ಮೆ ನೋಡಿ ಕನ್ನಡ ಬರೆಯುವ ಪ್ರಯತ್ನ ಮಾಡಿ.. :)