Tuesday, 17 January 2012

ಜೀವನ ಕವನ ..!!



ಜೀವನ 
ಕವನ  .. !! 
****************


ಯಾರಿಗೂ ಬೇಡವಾಗಿದೆ ನಮ್ಮ ಮನಸ್ಸು
ಎಷ್ಟೆಷ್ಟೋ ಮಾಡಿದರೂ ಘೋರ ತಪಸ್ಸು
ಬಿಡಲಿಲ್ಲ ನಮ್ಮ ಮೇಲಿನ ಕಠೋರ ಮುನಿಸು
ನಿಜ ನುಡಿಯುವುದೇ ನಮ್ಮ ತಪ್ಪೆಂದರೆ ತಿಳಿಸು

ನಾವೇ ಮಾಡುವೆವು ನಮ್ಮ ಹೃದಯದ ಕೊಲೆ
ಪ್ರಶಾಂತ ಪ್ರಪಂಚದೊಳು ಇಲ್ಲ ಸತ್ಯಕ್ಕೆ ಬೆಲೆ
ಕಾಣುವುದು ಕಣ್ಣೆದುರಲ್ಲಿ ಕಷ್ಟಗಳ ಕಪ್ಪಾದ ಕಲೆ
ಸುತ್ತಮುತ್ತಲು ಸುಳಿದಾಡುತ್ತಿದೆ ಸುಳ್ಳಿನ ಸೆಲೆ

ಕಬ್ಬಿಣದ ಕಂಬಿಗಳ ಮೇಲಿನ ಬಾಳಿನ ಬಂಡಿ
ಆಗಿರುವುದಿಲ್ಲಿ ಹುಚ್ಚು ಹೊಟ್ಟೆಕಿಚ್ಚಿನ ಉಗಿಬಂಡಿ
ತುಂಬಿಹುದು ಮುಸುಕುಧಾರಿಗಳ ಸುಳ್ಳಿನ ಹುಂಡಿ
ಕಲ್ಪನೆಗಳ ಬರೆದಿಟ್ಟ ಕವನಗಳು ಸೇರಿ ತಿಪ್ಪೆಗುಂಡಿ

ನೆನಪುಗಳ ನೂರೊಂದು ನೋಟದ ನರ್ತನ
ಮನದಲ್ಲಿ ಮೂಡುವುದು ಪ್ರೀತಿಯ ಸಿಂಚನ
ಹೃದಯದ ಕೊಲೆ, ರಕ್ತದೋಕುಳಿಯ ಗಾಯನ
ಆ ನೆತ್ತರಿನೋಳು ಬರೆದಿರುವ ನಿಜವು ಈ ಕವನ .. !!

ಬಾಳೊಂದು ಚದುರಂಗದಾಟ..!!
ಬಾಳಿಗೂ ಚದುರಂಗಕ್ಕೂ ಇರುವ ನಂಟು
ಉತ್ತರ ತಿಳಿದರೂ ಬಿಡಿಸಲಾಗದ ಒಗಟು
ಎಷ್ಟು ಬರೆದರೂ ಇದು ಮುಗಿಯದ ಕವನ
ಎಲ್ಲವೂ "ಮಹಾ ರಹಸ್ಯ" ಇದುವೇ ಜೀವನ..!!


|| ಪ್ರಶಾಂತ್ ಖಟಾವಕರ್ ||

4 comments:

  1. ತುಂಬಾ ಚೆನ್ನಾಗಿದೆ ಸರ್
    ನಿಮ್ಮ ಕವಿತೆಗಳು ಸಾವಿರ ಕಥೆ ಹೇಳುತ್ತವೆ
    ನಿಮ್ಮ ಕಥೆಯೇ ಒಂದು ಕವಿತೆಯಾಗಿರುತ್ತವೆ !!


    ಬಾಳೊಂದು ಚದುರಂಗದಾಟ..!!
    ಬಾಳಿಗೂ ಚದುರಂಗಕ್ಕೂ ಇರುವ ನಂಟು
    ಉತ್ತರ ತಿಳಿದರೂ ಬಿಡಿಸಲಾಗದ ಒಗಟು
    ಎಷ್ಟು ಬರೆದರೂ ಇದು ಮುಗಿಯದ ಕವನ
    ಎಲ್ಲವೂ "ಮಹಾ ರಹಸ್ಯ" ಇದುವೇ ಜೀವನ..!!
    ಮನಸ್ಸಿನ ಭಾವನೆಗಳನ್ನು ಪದಗಳಲ್ಲಿ ಹೇಳಿರುವ ರೀತಿ ನಿಜಕ್ಕೋ ಅದ್ಭುತ !

    ReplyDelete
    Replies
    1. ನಿಮ್ಮ ಮಾತು ಮತ್ತು ನಿಮ್ಮ ಪ್ರೋತ್ಸಾಹಗಳಿಗೆ ಹೃತ್ಪೂರ್ವಕ ವಂದನೆಗಳು... :)

      Delete
  2. ಪದಗಳಲ್ಲಿ ಭಾವನೆಗಳನ್ನು ಹಿಡಿದಿಟ್ಟಿರುವ ರೀತಿ ತುಂಬ ಅದ್ಭುತವಾಗಿದೆ ಸರ್. ಕಥೆ ಇಲ್ಲಿ ಕವಿತೆಯಾಗಿದೆ, ಆ ಕವಿತೆ ಸಾವಿರ ಕಥೆ ಹೇಳಿದೆ. ತುಂಬಾ ಧನ್ಯವಾದಗಳು ಇಷ್ಟು ಒಳ್ಳೆಯ ಸಾಲುಗಳನ್ನು ಕಟ್ಟಿಕೊಟ್ಟಿದ್ದಕ್ಕೆ.

    ReplyDelete
    Replies
    1. ನಿಮ್ಮ ಮಾತು ಮತ್ತು ನಿಮ್ಮ ಪ್ರೋತ್ಸಾಹಗಳಿಗೆ ಹೃತ್ಪೂರ್ವಕ ವಂದನೆಗಳು... :)

      Delete