ಮೂರು ಕವಿಗಳು
===========
ಸಂಜೆಯ ಹೊತ್ತಲ್ಲಿ
ಬಿಸಿ ಬಿಸಿ ಚಹಾ..
ಮಂಡಕ್ಕಿ ಮಸಾಲ
ಜೊತೆ ಜೊತೆಯಲ್ಲಿ
ನಾಲ್ಕಾರು ಮಾತು
ಒಂದು ಕವಿಯು ಹೇಳಿದ
ಕವಿತೆಯಲ್ಲಿ ಬೇಕು
ಸರಿಯಾದ ವಿಚಾರ
ಸುಮ್ಮನೆ ಬರೆಯೋದು ಬೇಡ
ಕಾಲ್ಪನಿಕ ಕವಿತೆ
ಇನ್ನೊದು ಕವಿಯು ಹೇಳಿದ
ಕವಿತೆಯಲ್ಲಿ ಬೇಕು
ಮನಸೆಳೆಯುವ ಮಾಯೆ
ಸುಮ್ಮನೆ ಬರೆಯೋದು ಬೇಡ
ಸತ್ಯ ಸಂಗತಿಗಳ ಸರಮಾಲೆ
ಕವಿತೆಯಲ್ಲಿ ಬೇಕು
ಹೊಸತನದ ವಿಶೇಷ ವಿಷಯ
ಸುಮ್ಮನೆ ಬರೆಯೋಣ ಈಗ..
ನಮ್ಮ ಈ ಮಾತುಗಳ ಕವಿತೆಯ..
ಸಂಜೆಯ ಹೊತ್ತಲ್ಲಿ
ಬಿಸಿ ಬಿಸಿ ಚಹಾ..
ಮಂಡಕ್ಕಿ ಮಸಾಲ
ಜೊತೆ ಜೊತೆಯಲ್ಲಿ
ನಾಲ್ಕಾರು ಮಾತು .. :)
|| ಪ್ರಶಾಂತ್ ಖಟಾವಕರ್ ||
No comments:
Post a Comment