Wednesday, 4 January 2012

ಹರೆಯದ ವಯಸ್ಸು


ಹರೆಯದ ವಯಸ್ಸು
++++++++++++

ಬಣ್ಣ ಬಣ್ಣಗಳ ಆಸೆಗಳ ಬದುಕು
ಚೆಂದ ಚೆಂದದ ಕನಸುಗಳ ಕಾಲ
ನೂರು ನೂರು ನೆನಪುಗಳ ಪುಸ್ತಕ
ಓದಿ ಬರೆದು ಕಲಿಯುವ ವಿದ್ಯಾಲಯ
ಸರಸ್ವತಿ ಮಾತೆಯ ಭವ್ಯ ದೇವಾಲಯ..

ಇಲ್ಲಿ ಕಲಿಯುವ , ತಿಳಿಯುವ ಜ್ಞಾನವು
ಗರಿಕೆ ಹುಲ್ಲಿನ ಗಾತ್ರಕ್ಕೂ ಸಹ ಸಮವಲ್ಲ
ಬದುಕಿನೊಳು ಕಲಿಯುವುದು ಇನ್ನೂ ಇದೆ
ಒಂದೊಂದೇ ಅಕ್ಷರದ ಶಕ್ತಿಯ ತಿಳಿಯಬೇಕಿದೆ
ಬರೆದು ನೋಡು ನಿನ್ನ ಹೆಸರನೇ ಮೊದಲು..!!

ಕ್ಷಣ ಕ್ಷಣವೂ ಬದಲಾಗುವ ಭಾವನೆಗಳು
ದಿನ ದಿನವೂ ಹತ್ತಾರು ಪ್ರಶ್ನೋತ್ತರಗಳು
ಪ್ರೀತಿ ಸ್ನೇಹಗಳ ಒಂದು ಸುಂದರ ಲೋಕ
ಆಕರ್ಷಣೆಯ ಅಡಿಯಲ್ಲಿ ಮನಸ್ಸಿನ ಕಲ್ಪನೆ
ಅದಕ್ಕಿಲ್ಲಿ ಬಣ್ಣಗಳ ತುಂಬಿದ ಪ್ರೇಮ ಪತ್ರಗಳು..

ನಾನು ಹೆಚ್ಚು , ನೀನು ಹೆಚ್ಚು , ಪರೀಕ್ಷೆಯ ಸಮಯ
ನಾನು ನಾನೇ ಎನ್ನುವ ಪ್ರತಿಷ್ಟೆಗೋ , ಪ್ರಶಂಸೆಗೋ..!!
ಗೆಳಯ ಗೆಳತಿಯರ ಜೊತೆಯಲ್ಲಿಯೇ ಕಿತ್ತಾಟ ಆಡುತ
ನಾನೇನೆಂದು ಅರಿಯುವ ಮೊದಲೇ ವಿಧಿಯ ಸೆಳೆತ
ಏನನ್ನು ಮಾಡದೆ ಹೋಗುವ ಬದುಕಿನ ಅರ್ಥ ಸರಿಯೇ.. ?

ಜ್ಞಾನ ಭಂಡಾರದ ಮೂಟೆ ಹೊತ್ತು
ಮಾಡುವ ದಿನ ನಿತ್ಯದ ಕೂಲಿ ಕೆಲಸ
ಭವಿಷ್ಯದ ಸ್ವರ್ಗ ಸುಖದ ಕನಸಿಗಾಗಿ
ಹೊತ್ತಿರುವ ಭಾರವನ್ನು ತಿಳಿಯದೆಯೇ
ವರುಷ ಪೂರ್ತಿ ಬಯಕೆಗಳ ನೋಟವು

ಬಣ್ಣದ ಚಿಟ್ಟೆಯ ಹಿಡಿಯಲು ನಿಲ್ಲದ ಓಟವು
ಭೇದಭಾವಗಳ ಲೆಕ್ಕಿಸದ ಪ್ರೇಮಿಗಳ ಮನವು
ಮುಗ್ದತೆ ತುಂಬಿದ ಹರೆಯದ ವಯಸ್ಸಿನ ಆಟವು
ಸಾಧನೆಯ ಹಾದಿ ಹುಡುಕ ಹೊರಟರೆ ಈ ಜಗವು
ಹೇಳುವುದು ಮಾಡು ನೀ ನಿನ್ನ ಬದುಕಿಗಾಗಿ ಕೆಲಸವು

ಇಲ್ಲಿ ಪ್ರೀತಿ ಪ್ರೇಮಗಳ ಗೆಲ್ಲುವ ಮೊದಲು
ಗೆಲ್ಲಬೇಕು ನಾಲ್ಕು ಜನಗಳ ಸ್ನೇಹ ಸಂಘವ
ಸುತ್ತ ಮುತ್ತಲ ಪ್ರಕೃತಿ ಸೌಂದರ್ಯವ ಪ್ರೀತಿಸು
ಪ್ರೀತಿ ವ್ಯಾಮೋಹದ ಬಲೆಗೆ ಬೀಳುವ ಮೊದಲೇ
ಓದು ನೀ ಮನಸ್ಸುಗಳ , ಬೇಕು ಬೇಡಗಳ ಚಿಂತೆಗಾಗಿ
ಅಕ್ಷರಸ್ಥ ಆಗಬೇಕು ಓ ಮಾನವ.. ಬದುಕು ಕಲಿಯಲು..!!
ಪ್ರೀತಿ ಪ್ರೇಮಗಳ ನಿಜವಾದ ಅರ್ಥವ ನೀ ತಿಳಿಯಲು.. :)

|| ಪ್ರಶಾಂತ್ ಖಟಾವಕರ್ ||


1 comment:

  1. ಯುವ ಜನತೆಗೊಂದು ಒಳ್ಳೆಯ ಸಂದೇಶ ನಿಮ್ಮ ಕವನದಲ್ಲಿದೆ..... ! ಇಷ್ಟವಾಯಿತು

    ReplyDelete