ಕನಸಿನ ಕಥೆ
ಏನಿದು ಏಕಿದು ಏನೂ ಗೊತ್ತಿಲ್ಲ
ಜಸ್ಟ್ ಫಾರ್ ಎ ಚೇಂಜ್ ..
ಐ ಲವ್ ಯು
ಆದರೆ ನೀನು ಯಾರು
ಎಲ್ಲಿದ್ದೀಯಾ ಏನು ಗೊತ್ತಿಲ್ಲ
ಕನಸಲ್ಲಿ ಬಂದಾಗ
ತುಂಬಾ ಚೆನ್ನಾಗಿದ್ದೆ
ಅದಿಕ್ಕೆ ನಾಳೆನೂ ಬಾ..
ಅಂತ ನಾ ಹೇಳಿದ್ದೆ
ನಿಂಗೆ ಅದು ಇಷ್ಟಾನೋ
ಏನೋ ಒಂದು ಗೊತ್ತಿಲ್ಲ
ನೀನು ಮಾತ್ರ ನನ್ನ ಕನಸಲ್ಲಿ
ಪ್ರತಿ ದಿನವೂ ತಪ್ಪದೆ ಬಂದೆ
ರಾಣಿ ತರಹ ನೀನು ಕಾಣ್ತಿದ್ದೆ
ಅದಕ್ಕೆ ನಿನ್ನ ಡ್ರೀಮ್ ಗರ್ಲ್
ನನ್ನ ಕನಸ ರಾಣಿ ಎಂದೆಲ್ಲಾ
ನೂರಾರು ಕವನ ನಾ ಬರೆದೆ
ಪ್ರತಿ ಕವನಕ್ಕೂ ಉತ್ತರ ಬರ್ತಿತ್ತು
ನನ್ನ ಕನಸಲ್ಲಿ ಹೇಗೋ ಗೊತ್ತಿಲ್ಲ
ನೀನು ಮಾತ್ರ ನನ್ನ ಕವನಗಳ
ನೋಡದಂತೆ ನಾನು ಬಚ್ಚಿಟ್ಟಿದ್ದೆ
ಪ್ರೀತಿ ಅಂದರೆ ಇದೇನಾ
ಪ್ರತಿ ದಿನ ನೀನು ನನ್ನ
ಕನಸಲ್ಲಿ ಬರೋದು ನಿಜವೇನಾ
ಹಿಂಗ್ಯಾಕೆ ಕಾಡ್ತೀಯಾ ನನ್ನ
ಜಸ್ಟ್ ಫಾರ್ ಎ ಚೇಂಜ್ ...
ಐ ಲವ್ ಯು
ಆದರೆ ನೀನು ಯಾರು
ಎಲ್ಲಿದ್ದೀಯಾ ಏನು ಗೊತ್ತಿಲ್ಲ
ಆಮೇಲೆ ಏನಾಯಿತೋ
ಒಂದು ಗೊತ್ತಾಗಲಿಲ್ಲ
ನೀನು ನನ್ನ ಕನಸಲ್ಲಿ
ಒಂದು ದಿನವು ಬರಲೇ ಇಲ್ಲ
ಪ್ರೀತಿ ಅಂದರೆ ಹೀಗೆನಾ
ಅದು ಗೊತ್ತಾದ ಮೇಲೆ
ನೀನು ನನ್ನಿಂದ ದೂರವೇನಾ
ಏನಿದು ಏಕಿದು ಏನೂ ಗೊತ್ತಿಲ್ಲ
|| ಪ್ರಶಾಂತ್ ಖಟಾವಕರ್ ||
No comments:
Post a Comment