Thursday, 19 January 2012

ಅಗೋಚರ


ಅಗೋಚರ
**************
ಬಚ್ಚಿಟ್ಟ ಬಣ್ಣ ಬಣ್ಣಗಳ 
ಭಾವನೆಗಳ ಅವತಾರಗಳನ್ನು 
ಬಿಂಬಿಸುವ ಬದುಕು.. 

ಬಣ್ಣ ಹಚ್ಚಿ ಮುಖವಾಡ ಧರಿಸಿ 
ನಟಿಸಿ ನಗಿಸಿ ಕುಣಿದು ಹಾಡಿ 
ಕೂಗಾಡಿ ನುಡಿವ ನೂರಾರು 
ಭಾವಜೀವಿಗಳ ಬದುಕನ್ನು
ಕಾಲ್ಪನಿಕ ಕಥೆಗಳ ಕನಸಿನ 
ಮಾಯಾಲೋಕ ಸೃಷ್ಟಿಸಿ..

ಅಭಿಮಾನಿಗಳ 
ಮಹಾ ಸಾಗರದಲ್ಲಿ 
ದೂರದ ತೀರವ 
ಹತ್ತಿರಕ್ಕೆ ಕಾಣುವಂತೆ
ಮನೆ ಮನೆ ಮಾತುಗಳ ಕಟ್ಟಿಟ್ಟು
ಇಡೀ ಜಗದ ನಾಟಕವ ಹಿಡಿದಿಟ್ಟು
ಮನಸೆಳೆಯುವ ಚಿತ್ರಗಳ 
ತೆರೆಯ ಮೇಲೆ ತರುವ
ತೆರೆಯ ಹಿಂದಿನ 
ಕಾಣದ ಕೈ ಎಂದರೆ 
    ಛಾಯಾಗ್ರಾಹಕ .. :)



ಅದೇ ಪ್ರಪಂಚವ
ಪ್ರಕೃತಿ ಸೌಂದರ್ಯವ
ಐತಿಹಾಸಿಕ ಪುರಾಣವ
ನೈಜ ಘಟನೆಗಳ ನೋಟವ

ಕನ್ನಡ ಪದಗಳ ಮಾಲೆಯ ಮಾಡಿ
ಅದಕ್ಕಲ್ಲಿ ಸುಂದರ ಚಿತ್ರಣವ ನೀಡಿ
ಕಹಿ ಸಿಹಿ ನೆನಪುಗಳ ಸ್ವಲ್ಪ ಕೂಡಿ
ಬದಲಾವಣೆಯ ರಾಗದ ಜೊತೆ ಹಾಡಿ

ಎಲ್ಲರನ್ನು ವಿಸ್ಮಯಗೊಳಿಸುವ
ಅನನ್ಯ ಅತ್ಯದ್ಬುತ ಕವನಗಳೇ
      ಬದರಿನಾಥ ಪಲವಳ್ಳಿಯವರ ಕವನಗಳು .. :)


|| ಪ್ರಶಾಂತ್ ಖಟಾವಕರ್ || 


ಬದರಿನಾಥ ಪಲವಳ್ಳಿ ಅವರ ಬ್ಲಾಗ್ ಅನ್ನು ವೀಕ್ಷಿಸಲು .. ಇಲ್ಲಿ ಕೆಳಗಿರುವ ಅವರ ಬ್ಲಾಗ್ ಹೆಸರನ್ನು ಒತ್ತಿರಿ.. :)



(ಇದು ಹೊಗಳಿಕೆ ಎಂದು ನೀವು ತಿಳಿದರೂ ಸಹ...
ಇದು ನಿಜ ಸರ್.. ಒಬ್ಬ ಛಾಯಾಗ್ರಾಹಕ.. ನಿಜಕ್ಕೂ ಅಗೋಚರ ವ್ಯಕ್ತಿಯಂತೆ.. 
ಮತ್ತು ನಿಮ್ಮ ಕವನಗಳ ಭಾವಾರ್ಥಗಳು ಕೆಲವೊಮ್ಮೆ ನಮಗಿಲ್ಲಿ ಅಗೋಚರ.. 
ಅದಕ್ಕೆ ಆ ಶೀರ್ಷಿಕೆ ಮತ್ತು ಆ ಸಾಲುಗಳು.)
ಮನಸ್ಪೂರ್ವಕ ಮೆಚ್ಚಿ ಬರೆದ ಮನದ ಮಾತುಗಳು.. :)

1 comment: