ಕನಸಿನ ರಾಣಿ
``````````````````
ಲವ್ ಮಾಡ್ಬೇಕ್ ಅಂತ ಮನಸ್ಸಾಯಿತಲ್ಲ
ಹುಡುಗಿನೇ ಸಿಗದೇ ತಲೆ ಕೆಟ್ಟೋಯಿತಲ್ಲ
ಹಿಂಗ್ಯಾಕೋ ಹಿಂಗ್ಯಾಕೋ ಗೊತ್ತೇ ಇಲ್ಲ
ಕನಸೆಲ್ಲ ಅವಳೇನೆ, ಎದುರಲ್ಲಿ ಕಾಣೋದಿಲ್ಲ
ಏತಕೋ ಈ ರೀತಿ
ಮನದಲಿ ಪಜೀತಿ
ಎಲ್ಲಿರುವಳು ಆ ಗೆಳತಿ
ನನ್ನ ಕನಸಿನ ಸಂಗಾತಿ
ಲವ್ ಮಾಡ್ಬೇಕ್ ಅಂತ ಮನಸ್ಸಾಯಿತಲ್ಲ
ಹುಡುಗಿನೇ ಸಿಗದೇ ತಲೆ ಕೆಟ್ಟೋಯಿತಲ್ಲ
ಕೆಂಪು ಸೀರೆ ಉಟ್ಟು
ಕನಕಾಂಬರ ತಲೆಯಲ್ಲಿ ಇಟ್ಟು
ಕಾಸಗಲ ಕುಂಕುಮ
ಹಣೆಗದುವೆ ಸಿಂಗಾರ
ತಳುಕಿ ಬಳುಕಿ ನಡೆಯುವ
ಅದೇನು ಚೆಂದ ವಯ್ಯಾರ
ಲವ್ ಮಾಡ್ಬೇಕ್ ಅಂತ ಮನಸ್ಸಾಯಿತಲ್ಲ
ಹುಡುಗಿನೇ ಸಿಗದೇ ತಲೆ ಕೆಟ್ಟೋಯಿತಲ್ಲ
ಬರ್ತಾಳೆ ದಿನವೆಲ್ಲ
ನಿದ್ದೆಲ್ಲಿ ನನ್ನ ಕನಸಲ್ಲಿ
ಎದ್ದಿದ್ರೆ ಕಾಣೋಲ್ಲ
ಹುಡುಕಿದ್ರು ಸಿಕ್ಕೊಲ್ಲ
ಲವ್ ಮಾಡ್ಬೇಕ್ ಅಂತ ಮನಸ್ಸಾಯಿತಲ್ಲ
ಹುಡುಗಿನೇ ಸಿಗದೇ ತಲೆ ಕೆಟ್ಟೋಯಿತಲ್ಲ
ಹಾಲಿನಂತೆ ಬಣ್ಣ ಅವಳು ಬೆಳ್ಳಗೆ
ಸುಂದರಿಯ ಸೊಂಟ ಸ್ವಲ್ಪ ಸಣ್ಣಗೆ
ಕೊಡ್ತಾಳೆ ಅವಳೊಂದು ಕಿರುನಗೆ
ನೋಡ್ತಾಳೆ ಕಣ್ಣಿಟ್ಟು ಕಣ್ಣೊಳಗೆ
ಹಿಂಗ್ಯಾಕೋ ಹಿಂಗ್ಯಾಕೋ ಪ್ರೀತಿನೆ ಹೀಗೆ
ಕನಸಲ್ಲಿ ಮನಸಲ್ಲಿ ಅವಳೇನೆ ನನಗೆ
ಲವ್ ಮಾಡ್ಬೇಕ್ ಅಂತ ಮನಸ್ಸಾಯಿತಲ್ಲ
ಹುಡುಗಿನೇ ಸಿಗದೇ ತಲೆ ಕೆಟ್ಟೋಯಿತಲ್ಲ
ನನ್ನ ಕನಸಿನ ರಾಣಿಯು
ಕುಣಿತಾಳೆ ತಯ್ಯಾ ತಕ್ಕ
ಅವಳ ಹಾಡಿನ ಮೋಡಿಯು
ಮೈಯಲ್ಲೆಲ್ಲ ಜುಮ್ಮಾ ಜುಮ್ಕ
ಯಾರು ಇಲ್ಲ ನಮ್ಮಕ್ಕ ಪಕ್ಕ
ಆಹಾ ಚೆಲುವೆ ಎಂತಾ ಸುಖ
ಲವ್ ಮಾಡ್ಬೇಕ್ ಅಂತ ಮನಸ್ಸಾಯಿತಲ್ಲ
ಹುಡುಗಿನೇ ಸಿಗದೇ ತಲೆ ಕೆಟ್ಟೋಯಿತಲ್ಲ
ಹಿಂಗ್ಯಾಕೋ ಹಿಂಗ್ಯಾಕೋ ಗೊತ್ತೇ ಇಲ್ಲ
ಕನಸೆಲ್ಲ ಅವಳೇನೆ, ಎದುರಲ್ಲಿ ಕಾಣೋದಿಲ್ಲ
ಹಿಂಗ್ಯಾಕೋ ಹಿಂಗ್ಯಾಕೋ ಪ್ರೀತಿನೆ ಹೀಗೆ
ಕನಸಲ್ಲಿ ಮನಸಲ್ಲಿ ಅವಳೇನೆ ನನಗೆ
ಕಂಡ್ಳಲ್ಲೋ ಕಂಡ್ಳಲ್ಲೋ ನಮ್ಮೂರ ಸಂತ್ಯಾಗೆ
ಸಿಕ್ಕಳು ಕನಸಿನ ರಾಣಿಯು ಈಶ್ವರನ ಗುಡಿಯಾಗೆ
ಫೆಸ್`ಬುಕ್ ಅವಳಿಗಿಲ್ಲ, ಆರ್ಕುಟ್ ಗೊತ್ತಿಲ್ಲ
ಟ್ವೀಟರ್ ಇಟ್ಟಾವ್ಳೆ, ಕನಸಾಗೆ ಟಾರ್ಚರ್ ಕೊಡ್ತಾವ್ಳೆ
ಲವ್ ಮಾಡ್ಬೇಕ್ ಅಂತ ಮನಸ್ಸಾಯಿತಲ್ಲ
ಹುಡುಗಿನೇ ಸಿಗದೇ ತಲೆ ಕೆಟ್ಟೋಯಿತಲ್ಲ
ಲವ್ ಮಾಡ್ಬೇಕ್ ಅಂತ ಮನಸ್ಸಾಯಿತಲ್ಲ
ಹುಡುಗಿನೇ ಸಿಗದೇ ತಲೆ ಕೆಟ್ಟೋಯಿತಲ್ಲ
|| ಪ್ರಶಾಂತ್ ಖಟಾವಕರ್ ||