Tuesday, 8 November 2011

ನನ್ನ ಈ ಜೀವನ ನಿಂತ ನೀರಾಗಿದೆ ನನ್ನವರಿಗಾಗಿ ಇಂದು


ನೀ ಬಿಟ್ಟು ಹೋದ ಹಳೆ ದಿನಗಳು ಇಂದು
ಕನಸಲ್ಲಿ ಮೂಡಿ , ನಿನ್ನ ನೆನಪಲಿ ನೊಂದು
ಮತ್ತೊಮ್ಮೆ ನಿನ್ನ ಸೇರುವ ಆಸೆಯಲಿ ಬೆಂದು
ನಾ ಕಾಯುತ್ತಿದ್ದೆ ನೀ ಮತ್ತೆ ಬರುವೆ ಎಂದು
ಆದರೆ ನೀ ನನ್ನನ್ನೇ ಕೂಗಿದೆ ನನ್ನಲ್ಲಿಗೆ ಬಾ ಎಂದು

ನೀನಾ ನಾನಾ ಎಂದು ನನ್ನ ಮನನೊಂದು
ನಾ ಇಲ್ಲೇ ಉಳಿದೆ , ನನ್ನ ನಂಬಿದವರ ನೆನೆದು
ತಡ ಮಾಡಿದೆ ನಾ ನಿನ್ನ ಬಂದು ಸೇರುವುದು
ನನ್ನ ನಂಬಿದವರಿಗಾಗಿ ನಾ ಬದುಕಬೇಕೆಂದು

[ ನನ್ನ ಈ ಜೀವನ ನಿಂತ ನೀರಾಗಿದೆ ನನ್ನವರಿಗಾಗಿ ಇಂದು ]


|| ಪ್ರಶಾಂತ್ ಖಟಾವಕರ್ ||


No comments:

Post a Comment