Tuesday, 8 November 2011

ಯಾಕಿವರು ನಂಬಿದರು ಕೇವಲ ತ್ರಿಮೂರ್ತಿಗಳನ್ನು...


ಯಾಕಿವರು ನಂಬಿದರು ಕೇವಲ ತ್ರಿಮೂರ್ತಿಗಳನ್ನು
ಯಾರೊಬ್ಬರೂ ಆಡಲಿಲ್ಲ ಗೆಲ್ಲುವ ಆಟವನ್ನು

ಕ್ರಿಸ್ ಗೆಲ್ ಆಡಲಿಲ್ಲ ಗಾಳಿಯೊಡನೆ ಚೆಂಡಾಟವನ್ನು
ತಿಲಕರತ್ನೆ ದಿಲ್ಶಾನ್ ಮಾಡಲಿಲ್ಲ ದಿಲ್`ಸ್ಕೂಪ್ ದಾಳಿಯನ್ನು
ವಿರಾಟ್ ಕೊಹ್ಲಿ ಕೂಡ ತೋರಲಿಲ್ಲ ವೀರ ವಿರಾಟ ರೂಪವನ್ನು
ಈಡೇರಿಸಲು ಆಗಲಿಲ್ಲ ಡ್ಯಾನಿಯಲ್ ವಿಟ್ಟೊರಿ ವಿಕ್ಟರಿಯಾ ಕನಸನ್ನು

ಯಾಕಿವರು ನಂಬಿದರು ಕೇವಲ ತ್ರಿಮೂರ್ತಿಗಳನ್ನು
ಯಾರೊಬ್ಬರೂ ಆಡಲಿಲ್ಲ ಗೆಲ್ಲುವ ಆಟವನ್ನು

ಎದುರಿಸಲಾಗಲಿಲ್ಲ ಲಸಿತ್ ಮಲಿಂಗಾ ಅಡ್ಡಾ ದಿಡ್ಡಿ ಎಸೆತದ ವೇಗವನ್ನು
ಉತ್ತರಿಸಲು ಸಾಧ್ಯವಾಗಲಿಲ್ಲ ಹರಬ್ಬಜನ್ ಸಿಂಗ್ ತಿರುಗು ಬಾಣಗಳನ್ನು
ಕೇವಲ ಅಪರೂಪಕ್ಕೊಮ್ಮೆ ಆಡುವರು ಅಧ್ಭುತ ಅಸಾಧ್ಯ ಆಟಗಳನ್ನು
ಆದರೂ ಮೆಚ್ಚಿದರು ಕನ್ನಡದ ಜನತೆ ಇವರ ಅನೇಕ ಪ್ರತಿಭೆಗಳನ್ನು

ಯಾಕಿವರು ನಂಬಿದರು ಕೇವಲ ತ್ರಿಮೂರ್ತಿಗಳನ್ನು
ಯಾರೊಬ್ಬರೂ ಆಡಲಿಲ್ಲ ಗೆಲ್ಲುವ ಆಟವನ್ನು

ಮಾತೊಂದ ಹೇಳುವೆ ಕೇಳಿ ಗೆಳಯರೇ
ಕರ್ನಾಟಕದವರು ದೇಶಪ್ರೇಮವ ಸಾರಿದರು
ಕನ್ನಡದವರು ದೇಶದ ಹೆಸರಿಗೆ ಗೌರವ ತಂದರು
ಮುಂಬೈ ಭಾರತವನ್ನು ಆಟದೊಳು ಗೆಲ್ಲಿಸಿದರು

ಯಾಕಿವರು ನಂಬಿದರು ಕೇವಲ ತ್ರಿಮೂರ್ತಿಗಳನ್ನು
ಯಾರೊಬ್ಬರೂ ಆಡಲಿಲ್ಲ ಗೆಲ್ಲುವ ಆಟವನ್ನು

ಭಾರತದವರು ನಾವು ನೀಲಿಯು ನಮಗಿಷ್ಟ
ಅದರ ವಿರುದ್ದ ಗೆಲ್ಲೋದು ಎಲ್ಲರಿಗೂ ಬಲು ಕಷ್ಟ
ಯಾಕಿವರು ನಂಬಿದರು ಕೇವಲ ತ್ರಿಮೂರ್ತಿಗಳನ್ನು
ಯಾರೊಬ್ಬರೂ ಆಡಲಿಲ್ಲ ಗೆಲ್ಲುವ ಆಟವನ್ನು.... :)


|| ಪ್ರಶಾಂತ್ ಖಟಾವಕರ್ ||


No comments:

Post a Comment