ಪದಕೊಂದು ಪದವನ್ನು ಪೋಣಿಸಿ ನಾ ಕವಿಯಾದೆ
ನನ್ನ ಕಲ್ಪನೆಯ ಕೇಳಲು ಗೆಳತಿ ನೀ ಕಿವಿಯಾದೆ
ಜೊತೆಗೂಡಿ ಹಾಡಲು ನೀನೆನಗೆ ದನಿಯಾದೆ
ಕನಸ ರಾಣಿಯ ಕುರಿತು ನಾ ಕವನವ ಬರೆದೆ
ಕೇಳಿದೊಡನೆಯೇ ನೀನೇಕೋ ಕುಪಿತಳಾದೆ
ನನ್ನ ಆ ಕನಸ ರಾಣಿಯು ನೀನೆಂಬುದ ತಿಳಿಯದೇ
ಗೆಳತಿಯೇ ನನ್ನ ನಿಜವಾದ ಪ್ರೀತಿಯ ನೀನರಿಯದೇ
ಏನು ಹೇಳದೇ.. ನೀನೇಕೆ ನನ್ನಿಂದ ದೂರವಾದೆ... ?..?
|| ಪ್ರಶಾಂತ್ ಖಟಾವಕರ್ ||
No comments:
Post a Comment