ಬರೆಯಲು ಪ್ರೇಮದ ಹೊಸ ಕವನ
ನಾನಿಲ್ಲಿ ಈಗ ಸ್ವಲ್ಪ ನಿಧಾನ
ಚಿನ್ನ ರನ್ನ ನೀನೆ ನನ್ನ ಜೀವನ
ನಿನಗಾಗಿ ಬರೆದೆ ಈ ಕವನ...
ಹೇಳಿ ಹೇಳಿ ಹಳೆಯದಾಗಿದೆ
ಕೇಳಿ ಕೇಳಿ ಕೇಳಿ ಸಾಕಾಗಿದೆ
ಹೊಸದು ಏನೋ ಬೇಕೆಂದಿದೆ
ನಿನ್ನ ಚಿತ್ರವ ಕಂಡು ನಾ ಬರೆದೆ....
ಅದು ಗಾಳಿಯಲ್ಲಿ ಹಾರಿ ದೂರ ಹೋಗಿದೆ....
ಹಿಡಿಯಲು ಹೋದ ನನಗದು ಮತ್ತೆ ಸಿಗದೇ....
ಏನೂ ಮಾಡಲಾಗದೆ.. ನಾ ಸುಮ್ಮನೆ ಇದ್ದೆ..
ನನ್ನ ಪರಿಸ್ಥಿತಿಯ ಕಂಡ ಮೋಡ ಸುಮ್ಮನಿರದೇ...
ಮೇಲಿಂದ ನನ್ನ ನೋಡಿ ಸ್ವಲ್ಪ ಕಣ್ಣೀರಾಕಿತ್ತು....
ಬರೆದಿದ್ದ ಕವನದ ಹಾಳೆ ಕೆಳಗೆ ಬಂದು ಬಿತ್ತು...
ನೋಡಿದರೆ ಎಲ್ಲವೂ ನೆನೆದು ಒದ್ದೆಯಾಗಿತ್ತು...
ಬೇಸರದಿಂದ ನನ್ನ ಮನವು ನೊಂದು ಬಿಟ್ಟಿತ್ತು....
ರವಿಮಾಮನು ಕವನವ ಓದಲು ಬಂದನು
ಒದ್ದೆಯಾದ ಹಾಳೆಯ ಒಣಗಿಸಿ ಕೊಟ್ಟನು....
ಹೊಸ ಕಾವ್ಯವ ಬರೆಯಲು ಸ್ಪೂರ್ತಿಯಾದನು...
ಬಾಳನ್ನು ಬೆಳಗುವ ಅದ್ಭುತ ಜ್ಯೋತಿಯಾದನು... :)
|| ಪ್ರಶಾಂತ್ ಖಟಾವಕರ್ ||
ನಾನಿಲ್ಲಿ ಈಗ ಸ್ವಲ್ಪ ನಿಧಾನ
ಚಿನ್ನ ರನ್ನ ನೀನೆ ನನ್ನ ಜೀವನ
ನಿನಗಾಗಿ ಬರೆದೆ ಈ ಕವನ...
ಹೇಳಿ ಹೇಳಿ ಹಳೆಯದಾಗಿದೆ
ಕೇಳಿ ಕೇಳಿ ಕೇಳಿ ಸಾಕಾಗಿದೆ
ಹೊಸದು ಏನೋ ಬೇಕೆಂದಿದೆ
ನಿನ್ನ ಚಿತ್ರವ ಕಂಡು ನಾ ಬರೆದೆ....
ಅದು ಗಾಳಿಯಲ್ಲಿ ಹಾರಿ ದೂರ ಹೋಗಿದೆ....
ಹಿಡಿಯಲು ಹೋದ ನನಗದು ಮತ್ತೆ ಸಿಗದೇ....
ಏನೂ ಮಾಡಲಾಗದೆ.. ನಾ ಸುಮ್ಮನೆ ಇದ್ದೆ..
ನನ್ನ ಪರಿಸ್ಥಿತಿಯ ಕಂಡ ಮೋಡ ಸುಮ್ಮನಿರದೇ...
ಮೇಲಿಂದ ನನ್ನ ನೋಡಿ ಸ್ವಲ್ಪ ಕಣ್ಣೀರಾಕಿತ್ತು....
ಬರೆದಿದ್ದ ಕವನದ ಹಾಳೆ ಕೆಳಗೆ ಬಂದು ಬಿತ್ತು...
ನೋಡಿದರೆ ಎಲ್ಲವೂ ನೆನೆದು ಒದ್ದೆಯಾಗಿತ್ತು...
ಬೇಸರದಿಂದ ನನ್ನ ಮನವು ನೊಂದು ಬಿಟ್ಟಿತ್ತು....
ರವಿಮಾಮನು ಕವನವ ಓದಲು ಬಂದನು
ಒದ್ದೆಯಾದ ಹಾಳೆಯ ಒಣಗಿಸಿ ಕೊಟ್ಟನು....
ಹೊಸ ಕಾವ್ಯವ ಬರೆಯಲು ಸ್ಪೂರ್ತಿಯಾದನು...
ಬಾಳನ್ನು ಬೆಳಗುವ ಅದ್ಭುತ ಜ್ಯೋತಿಯಾದನು... :)
|| ಪ್ರಶಾಂತ್ ಖಟಾವಕರ್ ||
No comments:
Post a Comment