ಖಳ ನಾಯಕ ಆಗುವ ಆಸೆ...!!
+++++++++++++++++++++++
ಹುಚ್ಚು ಆಸೆಗಳ ಬಿಡಿಸಿ ಹೇಳುವ ಆಸೆ
ಒಮ್ಮೆಯಾದರೂ ಖಳ ನಾಯಕ ಆಗುವ ಆಸೆ....!!
ಹತ್ತು ಜನರು ನನ್ನ ಹಿಂದೆ ಬರಬೇಕು..
ನಾನು ಮಾತ್ರ ಸದಾ ಮುಂದಿರಬೇಕು..
ನಾನೇ ನಾಯಕನೆಂದು ಎಲ್ಲರು ಹೇಳಬೇಕು..
ಒಪ್ಪದವರ ಹಿಡಿದು ಹೊಡೆದೆ ಒಪ್ಪಿಸಬೇಕು..
ಹುಚ್ಚು ಆಸೆಗಳ ಬಿಡಿಸಿ ಹೇಳುವ ಆಸೆ
ಒಮ್ಮೆಯಾದರೂ ಖಳ ನಾಯಕ ಆಗುವ ಆಸೆ....!!
ಕಂಡ ಕಂಡ ಜನರನ್ನು ಲೂಟಿ ಮಾಡಬೇಕು..
ಕೋಟಿ ಕೋಟಿ ಹಣವನ್ನು ಕೂಡಿ ಹಾಕಬೇಕು..
ಕೊಡದವರ ಕುತ್ತಿಗೆ ಹಿಡಿದು ಕಿತ್ತುಕೊಳ್ಳಬೇಕು..
ಕೊಟ್ಟವರ ಗುರುತು ಸಿಗದಂತೆ ಇರಬೇಕು...
ಹುಚ್ಚು ಆಸೆಗಳ ಬಿಡಿಸಿ ಹೇಳುವ ಆಸೆ
ಒಮ್ಮೆಯಾದರೂ ಖಳ ನಾಯಕ ಆಗುವ ಆಸೆ....!!
ಹುಡುಗಿಯರು ನನ್ನ ಸುತ್ತ ಸುತ್ತಬೇಕು..
ಕೇಳಿದಾಗಲೆಲ್ಲಾ ಮುತ್ತು ಕೊಡಬೇಕು..
ಕಳ್ಳನಾದರೂ ಕೃಷ್ಣನೆಂದು ಹೊಗಳಬೇಕು..
ನನ್ನ ಪ್ರೀತಿಯ ಎಲ್ಲ ಹುಡುಗಿಯರು ಮೆಚ್ಚಬೇಕು..
ಹುಚ್ಚು ಆಸೆಗಳ ಬಿಡಿಸಿ ಹೇಳುವ ಆಸೆ
ಒಮ್ಮೆಯಾದರೂ ಖಳ ನಾಯಕ ಆಗುವ ಆಸೆ....!!
ನನ್ನ ಕಂಡರೆ ಎಲ್ಲರೂ ಭಯಭೀತರಾಗಬೇಕು..
ಸಾಕ್ಷಿ ಹೇಳಲು ನಡುಗಿ ಹೆದರುವಂತಾಗಬೇಕು..
ಎಲ್ಲರೂ ನನ್ನನ್ನು ಅಣ್ಣಾ ಅಣ್ಣಾ ಎಂದು ಕರೆಯಬೇಕು..
ಭಯದಲ್ಲಿ ಎಲ್ಲರೂ ತಲೆಬಾಗಿ ನಡೆಯಬೇಕು..
ಹುಚ್ಚು ಆಸೆಗಳ ಬಿಡಿಸಿ ಹೇಳುವ ಆಸೆ
ಒಮ್ಮೆಯಾದರೂ ಖಳ ನಾಯಕ ಆಗುವ ಆಸೆ....!!
ಪೊಲೀಸರು ಹುಡುಕಲು ಹೆಚ್ಚು ಕಷ್ಟವಾಗಿರಬೇಕು..
ಅಂತಹಾ ಕೋಟೆಯಲ್ಲಿ ನಾನು ರಾಜನಾಗಿರಬೇಕು..
ನೀಲಿ ಬಣ್ಣದ ಸೈನ್ಯಕ್ಕೆ ನಾನೇ ನಾಯಕನಾಗಿರಬೇಕು..
ಎಲ್ಲರಿಗೂ ಅದೊಂದು ವಿಶೇಷ ಅವತಾರವಾಗಿ ಕಾಣಬೇಕು..
ಹುಚ್ಚು ಆಸೆಗಳ ಬಿಡಿಸಿ ಹೇಳುವ ಆಸೆ
ಒಮ್ಮೆಯಾದರೂ ಖಳ ನಾಯಕ ಆಗುವ ಆಸೆ....!!
ಮುಗಿಯದ ಆಸೆಗಳ ಪಟ್ಟಿಯು ಉದ್ದವಾಗಿರಬೇಕು..
ಆ ಬ್ರಹ್ಮ ಕೂಡ ಬರೆದ ಬರಹ ನನಗೆ ಹಿತವಾಗಿರಬೇಕು..
ವಿಷ್ಣುವಿನ ವಿರಾಟ ರೂಪದ ಶಕ್ತಿಯು ನನ್ನ ಪಾಲಾಗಬೇಕು...
ಮಾಹಾ ಶಕ್ತಿ ಶಿವನ ಮೂರನೇ ಕಣ್ಣು ನನ್ನ ಹಣೆಯಲ್ಲಿರಬೇಕು...
ಹುಚ್ಚು ಆಸೆಗಳ ಬಿಡಿಸಿ ಹೇಳುವ ಆಸೆ
ಒಮ್ಮೆಯಾದರೂ ಖಳ ನಾಯಕ ಆಗುವ ಆಸೆ....!!
|| ಪ್ರಶಾಂತ್ ಖಟಾವಕರ್ ||
(ಬೆಳ್ಳಿ ಪರದೆಯಲ್ಲಿ ನಾಯಕನಾಗಿ ನಟಿಸಲು ಆಸೆ ಇರುವವರು ಎಷ್ಟೋ ಕಲಾವಿದರು
ಆದರೆ ಖಳ ನಾಯಕ ಆಗಲು ಆಸೆ ಪಡುವವರು ತೀರಾ ಕಡಿಮೆ.. ಅಂತವರ ಕಲ್ಪನೆಯಲ್ಲಿ ಈ ಕಥೆ..)
ಸಿನೆಮಾದಲ್ಲಿ ನಟನೆ ಮಾಡುವ ಅವಕಾಶ ಸಿಕ್ಕುವುದಾದರೆ ಎಷ್ಟೋ ಕಲಾವಿದರು ನಾವು ನಾಯಕನ ಪಾತ್ರ ಮಾಡಲು ಇಷ್ಟ ಅನ್ನೋರನ್ನ ಹೆಚ್ಚು ಕಂಡಿದ್ದೇವೆ.. ಅದಲ್ಲದೇ ನಾವೇ ನಾಟಕಗಳನ್ನು ಮಾಡೋವಾಗ ನನಗೆ ರಾಜನ ಪಾತ್ರವೇ ಬೇಕು ಅಥವಾ ಮುಖ್ಯ ಪಾತ್ರವೇ ಬೇಕು ಅನ್ನುತ್ತಿದೆ.. ಆದರೆ ಖಳನಾಯಕನಾಗಿ ಮಾಡುವ ಅವಕಾಶ ಕೊಡಿ ಎಂದು ಕೇಳಿದವರೇ ಆತೀ ಕಡಿಮೆ.. ಎಲ್ಲರು ನಾವು ಮಾಡೋಲ್ಲ ಅಂತ ಏನೇನೋ ಕಾರಣ ಹೇಳುತ್ತಿದ್ದರು.. ಆಗ ಬೇಡ ಎಂದ ಪಾತ್ರಗಳನ್ನು ಮಾಡುವುದರಲ್ಲಿ ತಪ್ಪಿಲ್ಲವಲ್ಲ .. ಅದು ಕೇವಲ ನಟನೆ ಮಾತ್ರ ಅನ್ನೋ ಚಿಂತನೆ ಈಗ ನೆನಪುಗಳಲ್ಲಿ ಕಾಣುತ್ತಿದೆ.. ಆ ಹಳೆಯ ದಿನಗಳ ನೆನಪುಗಳೇ ಈ ರೀತಿ ಬರೆಯಲು ಸ್ಫೂರ್ತಿಯಾಯಿತು.. :)
ReplyDeletekhaLanaayaka irodrindaane taane ? Naayakangu bele barodu, chennaagide..
ReplyDeleteಪೊಲೀಸರು ಹುಡುಕಲು ಹೆಚ್ಚು ಕಷ್ಟವಾಗಿರಬೇಕು..
ReplyDeleteಅಂತಹಾ ಕೋಟೆಯಲ್ಲಿ ನಾನು ರಾಜನಾಗಿರಬೇಕು..
ನೀಲಿ ಬಣ್ಣದ ಸೈನ್ಯಕ್ಕೆ ನಾನೇ ನಾಯಕನಾಗಿರಬೇಕು..
ಎಲ್ಲರಿಗೂ ಅದೊಂದು ವಿಶೇಷ ಅವತಾರವಾಗಿ ಕಾಣಬೇಕು..
ನಿಮ್ಮ ಕವಿತೆಯನ್ನು ಓದುವಾಗ ಜೇಮ್ಸ್ ಬಾಂಡ್ 007ನಲ್ಲಿ ಬರುವ ಕಳ್ಳನಾಯಕನ ನೆನಪಾಯಿತು :)
ತುಂಬಾ ಇಷ್ಟವಾಯಿತು :)
ಮೊದಲ ಆಸೆಯೇ ನನಗೆ ತುಂಬಾ ಇಷ್ಟ ಆಯಿತು
ReplyDeleteನಿಮ್ಮ ಮುಂದಿನ ಆಸೆಯನ್ನು
ಓದಲು,ನೋಡಲು, ಸವಿಯಲು,ಆನಂದಿಸಲು ...!!
ಕಾಯುತ್ತಿದ್ದೇನೆ !!
ಗೆಳೆಯರೆ,
ReplyDeleteತುಂಬಾ ಚೆನ್ನಾಗಿದೆ ಕವನ
ನಟರಾಜು
ನಿಮ್ಮ ರೌಡಿ ಗೆಟಪ್ಪಿನ ಚಿತ್ರಗಳೂ ಚೆನ್ನಾಗಿವೆ :-)
ReplyDelete