Tuesday, 8 November 2011

ಸುಂದರವಾದ ಕೆರೆಯ ನಡುವೆ ಒಂದು ಸುಂದರಿ...


ಸುಂದರವಾದ ಕೆರೆಯ ನಡುವೆ ಒಂದು ಸುಂದರಿ...
ಮಾರುದ್ದ ಅವಳ ಕೇಶರಾಶಿ ನೋಡೋಕ್ಕೆ ಚೆಂದ ರೀ...
ಹತ್ರ ಹೋಗಿ ನೋಡಿದರೆ ಯಾವಾಗಲು ನಗ್ತಾ ಇರ್ತಾಳೆ ಕಣ್ರೀ ....
ನಾನ್ ಮಾತಾಡೋ ಭಾಷೆ ಅವಳಿಗೆ ಅರ್ಥ ಆಗ್ತಾ ಇಲ್ಲಾ ರೀ....
ಸ್ವಲ್ಪ ಯಾರಾದರೂ ಅವಳ ಹತ್ರ ಹೋಗಿ ನನ್ನ ವಿಷಯ ಹೇಳ್ರೀ....
ಕತ್ತಲಲ್ಲಿ ಅವಳನ್ನ ಹುಡುಕೋದು ಬಹಳ ಸುಲಭ ನೋಡ್ರೀ....
ಯಾವಾಗಲು ಅವಳು ಬಿಳಿ ಬಣ್ಣದ ಬಟ್ಟೆಯನ್ನೇ ಹಾಕಿರ್ತಾಳ್ರೀ......
ನೀವು ಅವಳ ಹತ್ರ ಹೋದಾಗ ದಯವಿಟ್ಟು ಹೆದರಬೇಡ್ರೀ.... :)


|| ಪ್ರಶಾಂತ್ ಖಟಾವಕರ್ ||


No comments:

Post a Comment