Tuesday, 8 November 2011

ದೀಪಾವಳಿ ಆಚರಿಸಿ.. :)


ಕಿಡಿಯೊಂದು ಬತ್ತಿಗೆ ಅಂಟಿಕೊಂಡು
ಕೆಂಪಾದ ಮಿಂಚೊಂದು ಮೂಡಿಬಂದು
ಸುರ್ ಸುರ್ ಅಂದು ಶಬ್ಧವ ಮಾಡಿಕೊಂಡು
ಒಡೆದು ಹೋಗಿದೆ ಕ್ಷಣದಲ್ಲೇ ಡುಂ ಎಂದು...
ನಾ ಹಚ್ಚಿದಾ ದೊಡ್ಡ ಪಟಾಕಿಯು ಇಂದು....

ಅಣ್ಣ ಹೇಳುವನು , ಹೊಡೆಯಬೇಡ ಹೆಚ್ಚು ಪಟಾಕಿಯನ್ನು
ನನ್ನ ನೋಡಿ ಸುಮ್ಮನಿರದೇ ಅವನು ಬಿಡುವನು ರಾಕೇಟನ್ನು.
ಬಾಲವ ಬಿಚ್ಚಿ , ಬೆಂಕಿಯ ಹಚ್ಚಿ , ಸರ ಸರ ಇಲ್ಲಿ ಅವಸರ
ರೋಡುದ್ದ ಹಚ್ಚಿದಾಗ ಚರ ಚರ ಸಾವಿರ ಪಟಾಕಿಯಾ ಸರ

ಕುಡಿಕೆಯ ಉರಿಸಿ , ಚಕ್ರವ ಸುತ್ತಿಸಿ , ಅಂಗಳವೆಲ್ಲಾ ಬೆಳಕು
ಹಬ್ಬ ಮುಗಿದ ನಂತರ ನೋಡಿದರೆ ಕಾಣುವುದು ಕೊಳಕು
ದೀಪವ ಹತ್ತಿಸಿ , ಪ್ರೀತಿಯ ಸೇರಿಸಿ , ಹಬ್ಬವ ಆಚರಿಸಿ....
ಸಿಹಿಯನು ಹಂಚುತ , ಸಂತಸ ಕೋರುತ , ದೀಪಾವಳಿ ಆಚರಿಸಿ.. :)


|| ಪ್ರಶಾಂತ್ ಖಟಾವಕರ್ ||



No comments:

Post a Comment