Tuesday, 8 November 2011

‎"ಕ"ದಲ್ಲಿ ಕನ್ನಡ ಕವಿತೆ....


ಕುಡುಕರ ಕೊನೆಯ ಕಥೆ

ಕುಡಿದರು ಕುಡುಕರು ಕೆಡಬಾರದು..
ಕೆಟ್ಟವರು ಕಂಡಿತ ಕುಡಿಯಬಾರದು..
ಕುಡಿದರೆ ಕೆಡಸುವರು ಕಾಲವನ್ನು..
ಕೆಟ್ಟರೆ ಕಾಲವು ಕ್ಷಣದಲ್ಲೇ ಕಣ್ಣೀರಾಕಿಸುವುದು
ಕೆಲವೊಮ್ಮೆ ಕೈಗಳಿಗೆ ಕೋಳವನ್ನು ಕೊಡಿಸುವುದು
ಕೆಡೆಸಿ ಕೊನೆಗೆ ಕತ್ತಲಲ್ಲಿ ಕೂರಿಸುವುದು..
ಕಣ್ಮುಚ್ಚಿದರೆ ಕನಸಲ್ಲಿ ಕಾಮಲೋಕವೇ ಕಾಣಿಸುವುದು
ಕಡಲಾಚೆಯಿಂದ ಕೆಂಪಣ್ಣನು ಕಾಣುವಷ್ಟರಲ್ಲಿ
ಕಾಳಭೈರವನು ಕೈಚಾಚಿ ಕರೆಯುವನು
ಕೊನೆಯಲ್ಲಿ ಕನಸುಗಳೆಲ್ಲಾ ಕಾಲಿ..
ಕಂಡ ಕನಸುಗಳೇ ಕಥೆಯಾಗಿ ಕಾಣುವುದಿಲ್ಲಿ..

No comments:

Post a Comment