Wednesday, 9 November 2011

Bhumika Ak


ಹಸಿರುಟ್ಟ ಹೆಣ್ಣಿಲ್ಲಿ ನೋಡಲೆಷ್ಟು ಚೆಂದ
ಅಲ್ಪ ಅಲಂಕಾರದೇ ಹೆಚ್ಚಿರುವ ಅಂದ
ಮೀನಿನಂತಹ ನಯನದ ನೋಟವೇ ಚೆಂದ
ಮುದ್ದಾದ ಅಧರದ ಕೆಂಬಣ್ಣದ ಮೋಹಕ ಅಂದ

ಹೂವ ಬಣ್ಣ ಮಿಂಚು ಮೆರಗುಗಳೇ ಚೆಂದ
ಹೊಳೆವ ಕೇಶರಾಶಿ ಮನವ ಸೆಳೆವ ಅಂದ
ಒಂದೇ ಸರದಲ್ಲಿ ಕಾಣುತಿದೆ ಕೊರಳಿನ ಚೆಂದ
ಚಿಕ್ಕದೊಂದು ಬೊಟ್ಟು ಉದ್ದದ ಕಿವಿಯೋಲೆ ಅಂದ

ಕನಸ ಲೋಕದಿ ಮೂಡುವ ಅಲೆಗಳೇ ಚೆಂದ
ನೋಡಿರಿಲ್ಲಿ ಮಂಗಳೂರು ಮತ್ಸ್ಯ ಕನ್ಯೆಯಾ ಅಂದ
ಬೆಂಗಳೂರಿನ ಬೇಡಗಿಯ ರೂಪವಿಲ್ಲಿ ಚೆಂದ
ಅಂದ ಚೆಂದ , ಚೆಂದ ಅಂದ , ವರ್ಣನೆಗೂ ನಿಲುಕದ

ಅಪರೂಪದ ಭಾವಚಿತ್ರದಲ್ಲಿನ ಭಾವನೆಗಳ ಬರೆಯುತ್ತ
ಕಲ್ಪನೆಯಲ್ಲಿ  ಮನದ ಮಿಡಿತ , ಪದಗಳ ಸೇರಿಸುತ್ತ
ಅಂದ ಚೆಂದಗಳ ಚಿತ್ತಾರವ ಕಾವ್ಯದಿ ಸೆರೆ ಹಿಡಿಯುತ್ತ...
ಬರೆದಿರುವ ಶುಭವನ್ನು ಕೋರುತ್ತ ಈ ಗೆಳಯ ಪ್ರಶಾಂತ.... :)

|| ಪ್ರಶಾಂತ್ ಖಟಾವಕರ್ ||

No comments:

Post a Comment