Tuesday, 8 November 2011

ಪರೀಕ್ಷೆಯಲ್ಲಿ ಫೇಲ್ ಆದ.. ಹುಡುಗ ಮತ್ತು ಹುಡುಗಿಯ... ಪ್ರೀತಿಯಲ್ಲಿ ಪಾಸಾಗಲು... ಒಂದು ಪ್ರೇಮದ ಕವನ ... :)


ಜೀವನದಲ್ಲಿ ನಾನೊಂದು ಸೊನ್ನೆ
ನಿನ್ನ ನೋಡಿದಾಗ ನೀನು ಸೊನ್ನೆ

ಬೀಸಿರುವೆ ನಿನ್ನ ಮೇಲೆ ನನ್ನ ಪ್ರೇಮದ ಬಲೆ
ಯೋಚನೆಯ ಮಾಡು ನನ್ನ ಪ್ರೀತಿಯ ಮೇಲೆ
ಸೇರಿದರೆ ನಾವಿಬ್ಬರು ಸಿಕ್ಕುವುದಾಗ ಬೆಲೆ
ಉತ್ತಮ ಬೆಲೆ ಇದ್ದರೆ ಜೀವನಕ್ಕೆ ಉತ್ತಮ ನೆಲೆ

( boy = 0/10 , Girl = 0/10 )
0 --> 0 --> 8 ( eight )


ನಾನು ನೀನು ಸೇರಿದರೆ ಎಂಟು
ಬಹಳಷ್ಟಿದೆ ಈ ಎಂಟರ ಗುಟ್ಟು
ಬೆಳೆಸೋಣ ನಮ್ಮಿಬ್ಬರಾ ನಂಟು
ನಾ ಹಾಕುವೆ ನಿನಗೆ ಮೂರು ಗಂಟು

ಜೀವನದಲ್ಲಿ ನಾನೊಂದು ಸೊನ್ನೆ
ನಿನ್ನ ನೋಡಿದಾಗ ನೀನು ಸೊನ್ನೆ

ನೀನು ಬಂದು ಇದ್ದರೆ ನನ್ನ ಪಕ್ಕದಲ್ಲಿ
ನಮ್ಮ ಪ್ರೀತಿಗೆ ಅಂತ್ಯವೆಲ್ಲಿದೆ ಇಲ್ಲಿ
ಯಾರು ಲೆಕ್ಕ ಹಾಕಿದರು ಕೊನೆಯಲ್ಲಿ
ಅನಂತವಾದ ನಮ್ಮ ಪ್ರೀತಿಗೆ ಸಾವಿಲ್ಲ ಇಲ್ಲಿ

( boy = 0/10 , Girl = 0/10 )
0 --> 0 --> oo ( infinity )


ಜೀವನದಲ್ಲಿ ನಾನೊಂದು ಸೊನ್ನೆ
ನಿನ್ನ ನೋಡಿದಾಗ ನೀನು ಸೊನ್ನೆ
ಇಲ್ಲಿದೆ ನೋಡು ನಮ್ಮ ಪ್ರೀತಿಯ ಚಿಹ್ನೆ
ಪ್ರೀತಿಯಿಂದ ಬಂದು ಸೇರು ನೀ ನನ್ನನ್ನೇ..... :)

No comments:

Post a Comment