Tuesday, 8 November 2011

ನನ್ನ ಮಾತನ್ನು ನೀವು ಕೇಳುವಿರಾ....


ಮುದ್ದು ಮುದ್ದು ಕಂದಮ್ಮಗಳಿರಾ ....
ನನ್ನ ಮಾತನ್ನು ನೀವು ಕೇಳುವಿರಾ....


ಕುಡಿಯಬೇಡಿರಿ ಆ ಬಾಟಲಿಯಲ್ಲಿ ಇಲ್ಲ ಹಾಲು
ಇರೋದೆಲ್ಲಾ ಸ್ವರ್ಗ ತೋರಿಸೋ ಆಲ್ಕೊಹಾಲು
ಉರಿದು ಸುಟ್ಟು ಹೋಗತ್ತೆ ನಿಮ್ಮ ಪುಟ್ಟ ಗಂಟಲು
ಅಪರೂಪಕ್ಕು ಕುಡಿದರು ಯಮಲೋಕದ ಪಾಲು

ಮುದ್ದು ಮುದ್ದು ಕಂದಮ್ಮಗಳಿರಾ ....
ನನ್ನ ಮಾತನ್ನು ನೀವು ಕೇಳುವಿರಾ....


ಚಾಕಲೇಟು ಅಲ್ಲ ಅದು ಸುಡುವ ಸಿಗರೇಟು
ನರಕಕ್ಕೆ ಕರೆದೊಯ್ಯೋ ಅಗೋಚರ ಏಜೆಂಟು
ಹೆಚ್ಚಾದರೆ ಆಗುವುದು ಅದು ರಿಸರ್ವ್ ಟಿಕೇಟು
ಮನೆಯವರ ಕೈಗೆ ಚಂಬಲ್ಲ ಸಿಕ್ಕೋದು ಬಕೇಟು

ಮುದ್ದು ಮುದ್ದು ಕಂದಮ್ಮಗಳಿರಾ ....
ನನ್ನ ಮಾತನ್ನು ನೀವು ಕೇಳುವಿರಾ....


ಅಪ್ಪ ಅಮ್ಮ ಎಂದು ಹಾಡಿರಿ....
ಅ ಆ ಇ ಈ ನೀವು ಕಲಿಯಿರಿ....
ಮುದ್ದಾಗಿ ನೀವು ನಕ್ಕು ಎಲ್ಲರ ನಗಿಸಿರಿ...
ನೂರಾರು ವರುಷ ನಗುತಾ ಬಾಳಿರಿ....

ಮುದ್ದು ಮುದ್ದು ಕಂದಮ್ಮಗಳಿರಾ ....
ನನ್ನ ಮಾತನ್ನು ನೀವು ಕೇಳುವಿರಾ.... :)

No comments:

Post a Comment