ಇದೆಯಂತೆ ಅಲ್ಲಿ ಒಂದು ಅಗೋಚರ ಭೂತ
ಹೇಳುತಿದ್ದರು ಜನಗಳು ಹಲವಾರು ಮಾತ
ಕೆಲವೊಮ್ಮೆ ಕಥೆಗಳ ಹೇಳ್ತಿದ್ರು ನಮ್ಮ ತಾತ
ಭಯ ಬೇಡ ಎಲ್ಲಾ ಕಾಪಾಡ್ತಾನೆ ಆ ಭಗವಂತ
ಅಲ್ಲೊಂದಿಹುದು ಹಾಳು ಮನೆ
ಅದೊಂದು ಅತೀ ಹಳೆಯ ಮನೆ
ರಾತ್ರಿಯಲ್ಲಿ ಬರ್ತದಂತೆ ಏನೇನೋ ಶಬ್ಧ
ಹಗಲಲ್ಲಿ ಮಾತ್ರ ಎಲ್ಲಾನು ಅಲ್ಲಿ ನಿಶಬ್ಧ
ಇದೆಯೋ ಇಲ್ಲವೋ ಜನಗಳದ್ದಿಲ್ಲಿ ಯುದ್ಧ
ಏನು ಮಾಡೋದು ಪಾಪ ಮನಸ್ಸೆಲ್ಲಾ ಮುಗ್ದ
ಅಲ್ಲೊಂದಿಹುದು ಹಾಳು ಮನೆ
ಅದೊಂದು ಅತೀ ಹಳೆಯ ಮನೆ
ಭೂಮಿ ಮೇಲೆ ಅದೆಷ್ಟೋ ಭೂತ ಬಂಗಲೆಗಳು
ಊರಿಗೊಂದು ಇರುತ್ತಂತೆ ಇಂತ ಮನೆಗಳು
ಅದರಲ್ಲುಂಟು ಎಷ್ಟೋ ಹಳೆಯ ಕಥೆಗಳು
ಹೇಳ್ತಾರೆ ಜನ ಒಂದಿಷ್ಟು ಸತ್ಯ ಘಟನೆಗಳು
ಅಲ್ಲೊಂದಿಹುದು ಹಾಳು ಮನೆ
ಅದೊಂದು ಅತೀ ಹಳೆಯ ಮನೆ
ಪ್ರತಿಯೊಂದಕ್ಕೂ ಕಾರಣ ಅಂತೆ ಕೊಲೆ
ಯಾರಿಗೆ ಗೊತ್ತು ಆದರ ವಿಚಿತ್ರ ಹಿನ್ನೆಲೆ
ಯಾಕೋ ಏನೋ ಭಯ ಆಗೋದು ಕತ್ತಲಲ್ಲೇ
ಎಷ್ಟೊಂದು ಕೇಸು ಇರೋದು ಹಳ್ಳಿ ಮನೆ ಹಿತ್ತಲಲ್ಲೇ
ಅಲ್ಲೊಂದಿಹುದು ಹಾಳು ಮನೆ
ಅದೊಂದು ಅತೀ ಹಳೆಯ ಮನೆ...... :)
No comments:
Post a Comment