Tuesday, 8 November 2011

ಕಡಲಾಳಕೆ ಕರೆದೊಯ್ಯಿದು ಚೆಲುವೆ ನಿನ್ನ....


ಕಡಲಾಳಕೆ ಕರೆದೊಯ್ಯಿದು ಚೆಲುವೆ ನಿನ್ನ
ಮನದಾಳದ ಮಾತನು ಹೇಳುವೆ ಚಿನ್ನ
ಆಗಸದಷ್ಟು ಪ್ರೀತಿಯ ಮಾಡುವೆ ನಿನ್ನ
ಮರೆಯದ ಕಾಣಿಕೆಯ ಕೊಡುವೆ ಚಿನ್ನ


ಕಡಲಾಳದಲಿ ಇದೆಯಂತೆ ಸಾವಿರ ಮುತ್ತು
ತರಲಿಕ್ಕೆ ಹೋದರೆ ಆಗಬಹುದು ಸಾವಿನ ಸೊತ್ತು
ಬದಲಿಗೆ ನಾ ಕೊಡುವೆ ನನ್ನದೇ ಸಾವಿರ ಮುತ್ತು
ಕೊಡುವೆನು ನಿನ್ನ ಪ್ರೀತಿಯಲಿ ಸಾವಿಗೂ ಸಾತು...

ಕಡಲ ಮುತ್ತುಗಳ ಕಷ್ಟ ಒಂದು ಮತ್ತಿನ ಕಥೆ.
ಕಡಲ ಮುತ್ತುಗಳು ನಿನಗೇಕೆ ನಾನಿಲ್ಲವೇ ನಿನ್ನ ಜೊತೆ.
ಮುತ್ತಿನಂತಹ ಸಾಲುಗಳ ಈ ಪ್ರೀತಿಯ ಕವಿತೆ
ನಿನಗಾಗಿ ನಾ ಬರೆದೆ ನೀನಿಲ್ಲದಿರುವಾಗ ನನ್ನ ಜೊತೆ..... :)

|| ಪ್ರಶಾಂತ್ ಖಟಾವಕರ್ ||

1 comment: