ಬರಲಾಸೆಯಾಗಿದೆ ನಿನ್ನೆದುರಿಗೆ
ಇದ್ದು ಸಾಕಾಗಿದೆ ಈ ಮಣ್ಣೊಳಗೆ
ಇದ್ದು ಸಾಕಾಗಿದೆ ಈ ಮಣ್ಣೊಳಗೆ
ಕಂಪ್ಯೂಟರ್ ಇಲ್ಲದ ಕಾಲದವ ನಾನೊಬ್ಬ ಕನ್ನಡಿಗ
ಕಂಪ್ಯೂಟರ್ ಅಲ್ಲಿ ಕನ್ನಡ ನೋಡೋ ಆಸೆ ನನಗೀಗ
ಕೊಟ್ಟುಬಿಡು ಫ್ರೆಂಡ್ ರಿಕ್ವೆಸ್ಟ್ ಅನ್ನು ಬಲು ಬೇಗ
ಸದಾ ನಿನ್ನ ಮನದಲ್ಲಿ ಬರುವೆ ನನ್ನನ್ನು ನೆನೆದಾಗ
ಸದಾ ನಿನ್ನ ಮನದಲ್ಲಿ ಬರುವೆ ನನ್ನನ್ನು ನೆನೆದಾಗ
ಬರಲಾಸೆಯಾಗಿದೆ ನಿನ್ನೆದುರಿಗೆ
ಇದ್ದು ಸಾಕಾಗಿದೆ ಈ ಮಣ್ಣೊಳಗೆ
ಆಕಾರವಿಲ್ಲದವ ಅತಿ ಸುಲಭವಾಗಿ ಗಾಳಿಯಲ್ಲಿ ಸೇರುವೆನು
ಅಂತರ್ಜಾಲದೊಳಗಿಂದ ಅತಿ ವೇಗವಾಗಿ ಬರುವೆನು
ಒಮ್ಮೆ ಭೇಟಿ ಕೊಟ್ಟರೆ ಸಾಕು ನನ್ನ ತಾಣಕ್ಕೆ ನಾ ಸಿಗುವೆನು
ನಿಮ್ಮ ವಿಳಾಸವನ್ನು ಅಲ್ಲಿ ನೀಡಿದರೆ ಕ್ಷಣದಲ್ಲೇ ಕಾಣುವೆನು
ಬರಲಾಸೆಯಾಗಿದೆ ನಿನ್ನೆದುರಿಗೆ
ಇದ್ದು ಸಾಕಾಗಿದೆ ಈ ಮಣ್ಣೊಳಗೆ
ಕೆಲವೊಮ್ಮೆ ನಾ ಬಂದರು ನಿನ್ನ ಮುಂದೆ
ನೋಡಲಿಲ್ಲ ನೀ ತುಂಬಾ ಬ್ಯುಸಿ ಇದ್ದೆ
ನೀ ಮಾಡುವಾಗ ಸುಖವಾದ ನಿದ್ದೆ
ನಾ ನಿನ್ನ ಮನೆಯ ಮೇಲೆ ಕುಳಿತಿದ್ದೆ
ಬರಲಾಸೆಯಾಗಿದೆ ನಿನ್ನೆದುರಿಗೆ
ಇದ್ದು ಸಾಕಾಗಿದೆ ಈ ಮಣ್ಣೊಳಗೆ
ಕೂಗು ನನ್ನನ್ನು ಒಮ್ಮೆ ನೀನಿನ್ನು
ಕಂಪ್ಯೂಟರ್ ಅಲ್ಲಿ ಕನ್ನಡವನ್ನು
ನೋಡಬೇಕಾಗಿದೆ ನಾನಿನ್ನು
ನೀ ಮರಿಬೇಡ ಗೆಳಯ ನನ್ನನ್ನು
ಬರಲಾಸೆಯಾಗಿದೆ ನಿನ್ನೆದುರಿಗೆ
ಇದ್ದು ಸಾಕಾಗಿದೆ ಈ ಮಣ್ಣೊಳಗೆ
ಹಳಬನೆಂದು ನೀ ಯೋಚಿಸಬೇಡ
ಕಂಡಾಗ ಎದುರಿಗೆ ನೀ ಹೆದರಬೇಡ
ನನ್ನ ಕಥೆಯನ್ನು ಯಾರಿಗೂ ಹೇಳಬೇಡ
ಹೇಳಿದರು ನಿನ್ನನ್ಯಾರು ನಂಬುವುದಿಲ್ಲ ನೋಡ... :)
ಬರಲಾಸೆಯಾಗಿದೆ ನಿನ್ನೆದುರಿಗೆ
ಇದ್ದು ಸಾಕಾಗಿದೆ ಈ ಮಣ್ಣೊಳಗೆ.... :)
|| ಪ್ರಶಾಂತ್ ಖಟಾವಕರ್ ||
No comments:
Post a Comment