Tuesday, 8 November 2011

ವಾರೆವಾ ವಾಟ್ ಎ ಬ್ಯೂಟಿಫುಲ್ ಹುಡುಗಿ.....


ವಾರೆವಾ ವಾಟ್ ಎ ಬ್ಯೂಟಿಫುಲ್ ಹುಡುಗಿ
ಹೋಲಿಕೆಗೆ ಅವಳು ಬಾಲಿವುಡ್ ಬೆಡಗಿ 
ಒಮ್ಮೆ ನೋಡಿ ನಿಂತೆ ನಾನು ನಡುಗಿ

ಫುಲ್ ವೈಟು , ಒಳ್ಳೆ ಹೈಟು , ಸ್ವೀಟು ಹಾರ್ಟು 
ಡಾರ್ಕ್ ನೈಟು , ಅಲ್ಲಿ ಇಲ್ಲ ಸ್ತ್ರೀಟು ಲೈಟು 
ನಿಂತೆ ಹೋಯ್ತು ಊರ ಆಚೆ ನನ್ನ ಕಾರು ಕೆಟ್ಟು 

ಏನು ಆಯ್ತು ನೋಡಲೆಂದು ಬಂದೆ ಕಾರಿನಿಂದ ಹೊರಗೆ 
ಅಯ್ಯೋ ರಾಮ ಯಾರು ಇಲ್ಲ ಅಲ್ಲಿ ನನ್ನ ಜೊತೆಗೆ 
ದೇಹವೆಲ್ಲ ತಣ್ಣಗಾಯ್ತು ಆ ರಾತ್ರಿಯ ತಂಗಾಳಿಗೆ 
ಸ್ವಲ್ಪ ಭಯ ಆಯ್ತು ಆಗ ಅಜ್ಜಿ ಕಥೆಗಳ ನೆನಪಿಗೆ 

ದೂರದಲ್ಲಿ ಭಾರೀ ಬೆಳಕನೊಂದ ನೋಡಿದೆ 
ನನ್ನ ಹಿಂದೆ ಝಲ್ ಎಂಬ ಶಬ್ಧವನ್ನು ಕೇಳಿದೆ 
ಮೈಯಲೆಲ್ಲಾ ಝುಂ ಎಂದರು ನಾನು ಅಲ್ಲಿ ಹೆದರದೇ 
ಏನು ಎಂದು ನೋಡಲೆಂದು ಒಮ್ಮೆ ನಾನು ತಿರುಗಿದೆ 

ಒಂದು ಹುಡುಗಿ ಬಂದು ಅಲ್ಲಿ ನಿಂತಳು 
ನನ್ನ ನೋಡಿ ಅವಳು ಸ್ವಲ್ಪ ನಕ್ಕಳು 
ಯಾರು ನೀನು ಎಂದು ನಾನು ಕೇಳಲು 
ಅವಳ ಬಾಳ ಕಥೆಯನ್ನು ಹೇಳಿದಳು 

ಕೈಗಳಲ್ಲಿಲ್ಲ ಬಳೆ 
ಹಾಕ್ತಾಳಂತೆ ನಾಳೆ 
ಹಣೆಯಲ್ಲಿಲ್ಲ ಬಿಂದಿ 
ಮಾತು ಪೂರಾ ಹಿಂದಿ 
ಮೂಗಲ್ಲಿಲ್ಲ ಬೊಟ್ಟು 
ಹೇಳಿದಳೊಂದು ಗುಟ್ಟು 
ಕಿವಿಯಲ್ಲಿಲ್ಲ ಜುಮುಕಿ 
ಬಿದ್ದೆ ಅವಳ ಪ್ರೀತಿಯಲ್ಲಿ ಧುಮುಕಿ.... 

ವಾರೆವಾ ವಾಟ್ ಎ ಬ್ಯೂಟಿಫುಲ್ ಹುಡುಗಿ 
ಹೋಲಿಕೆಗೆ ಅವಳು ಬಾಲಿವುಡ್ ಬೆಡಗಿ...... :)


‎"OM SHRI GANESHAYA NAMHA"

1 comment:

  1. ಭಯಾನಕ ಬ್ಯೂಟಿ ನಿಮ್ಮ ಕವನ! ಚೆನ್ನಾಗಿದೆ!

    ReplyDelete