Tuesday, 8 November 2011

ಸೂರ್ಯೋದಯದ ಸುಂದರ ಸೊಬಗಿನ ನೋಟ....


ಸೂರ್ಯೋದಯದ ಸುಂದರ ಸೊಬಗಿನ ನೋಟ
ತಲೆ ಎತ್ತಿದರೆ ಹಕ್ಕಿಗಳ ಚಿಲಿಪಿಲಿ ಸದ್ದು ಗದ್ದಲದ ಆಟ...
ಸುತ್ತಮುತ್ತಲು ಜನಗಳ ಬದುಕಿನ ಜಂಜಾಟ
ಶುಭದಿನದ ಕನಸು ಕಾಣುವ ಮನಸುಗಳ ಓಡಾಟ....


ತಣ್ಣನೆಯ ಗಾಳಿಯಲಿ ಬಿಸಿಯ ಹುಡುಕಾಟ
ನೋಡಲೆಸ್ಟು ಚೆನ್ನ ಮುಂಜಾನೆಯ ನಿನ್ನ ಓಟ....
ಕಳೆದು ಹೋದೆ ನಾ ನೋಡುತ ನಿನ್ನ ಮೈಮಾಟ
ಎಂದು ಶುರುವಾಗುವುದೋ ನಮ್ಮಿಬ್ಬರ ಪ್ರೀತಿಯ ಪಾಠ....


ಮನದಲ್ಲೇಕೋ ಉಂಟಾಗಿದೆ ವಿಚಿತ್ರ ಸಂಕಟ
ಸಾಕಾಗಿ ಹೋಗಿದೆ ದಿನವು ಅಡಿ ನಿನ್ನ ಜೊತೆ ಜೂಟಾಟ.....
ನೂರಕ್ಕೆ ನೂರರಷ್ಟು ಅಪ್ಪಟ ಚಿನ್ನ ಕಣೆ ನಾನೇನಲ್ಲ ಕೋಟ
ಬದುಕಲಾರೆ ನಾ ನಿನೆನಾದರು ಹೇಳಿದರೆ ನನ್ನ ಪ್ರೀತಿಗೆ ಟಾಟ.....

|| ಪ್ರಶಾಂತ್ ಖಟಾವಕರ್ ||

No comments:

Post a Comment