ಮನಸ್ಸು ಎಂಬುದು ಒಂದು ಗಾಜಿನ ಮನೆ...
ಒಡೆದು ಹೋದರೆ ಬಲು ನಷ್ಟ ನಮಗೆ ತಾನೇ....
ಜೋಪಾನವಾಗಿ ನೋಡಿಕೊಳ್ಳಬೇಕು ತಾನೇ...
ಎಲ್ಲಾ ತುಂಬಿದರೆ , ಭಾರ ಹೆಚ್ಚುವುದು ತಾನೇ...
ಕೊಳಕು ಇದ್ದರೆ , ತೊಳೆದು ಇಡಬೇಕು ತಾನೇ...
ಆಗಲೇ ಗಾಜಿನಂತೆ ಹೊಳೆಯುವುದು ತಾನೇ...
ಎಲ್ಲರು ಮೆಚ್ಚುವುದು ಅಂತಹಾ ಮನಸ್ಸನ್ನೇ...
ಈ ಮನಸ್ಸು ಎಂಬುದು ಒಂದು ಗಾಜಿನ ಮನೆ...
ನಾನಂತೂ ಅದನ್ನು ಸ್ವಚ್ಚವಾಗಿ ಇಟ್ಟಿದ್ದೇನೆ... :)
|| ಪ್ರಶಾಂತ್ ಖಟಾವಕರ್ ||
ಚೆನ್ನಾಗಿದೆ ಪ್ರಶಾಂತರೇ.. ಇಂದು ನಿಮ್ಮ ಬ್ಲಾಗಿಗೆ ಬರಲಾಯಿತು ನೋಡಿ.. ನಿಮ್ಮ ಹೆಚ್ಚಿನ ಕವನಗಳನ್ನೋದಿ ಕಥೆ, ಕವನದಲ್ಲಿ ಪ್ರತಿಕ್ರಿಯಿಸಿರುವ ಕಾರಣ ಇಲ್ಲಿ ಮತ್ತೆ ಬರೆಯುತ್ತಿಲ್ಲ.. ಮುಂದೆ, ಅಲ್ಲೋದುವ ಮೊದಲು ಇಲ್ಲೇ ಓದಿದರೆ ಖಂಡಿತ ಪ್ರತಿಕ್ರಿಯಿಸಲು ಪ್ರಯತ್ನಿಸುತ್ತೇನೆ..
ReplyDeleteಶುಭವಾಗಲಿ ನಿಮಗೆ:-)
ಇಂತಿ- ಪ್ರಶಸ್ತಿ.ಪಿ
ಮನಸ್ಸನ್ನ ಮನೆಗೆ ಹೋಲಿಸಿ ಸ್ವಚ್ಚವಾಗಿ ಇಡಬೇಕು ಅಂದಿದ್ದು ಇಷ್ಟ ವಾಯಿತು..
ReplyDeleteಒಳ್ಳೆಯ ಕವನ..
ನಿಜ ನಿಜ, ಚೆನ್ನಾಗಿದೆ:)
ReplyDelete