Saturday, 19 November 2011

ಗುಡ್ಡದ ಭೂತ


caution : not for weak hearted people ....
ಎಚ್ಚರಿಕೆ : ದುರ್ಬಲ ಹೃದಯದವರು ಇದನ್ನು ಓದಬೇಡಿ....




ಗುಡ್ಡದ ಮೇಲೊಂದು
ಭೂತವು ಇದೆಯೆಂದು
ಕಂಡಿದ್ದೆ ಕನಸೊಂದು
ಹೆದರಿದ್ದೆ ನಾ ಅಂದು....

ಕನಸನ್ನು ಮತ್ತೊಮ್ಮೆ ನೆನೆದು
ಭಯದಲ್ಲಿ ಮನದಲ್ಲೇ ನೊಂದು
ಕೇಳಿದೆ ಗೆಳಯರ ನಿಜ ಏನೆಂದು
ಯಾರ ಬಳಿಯೂ ಉತ್ತರ ಸಿಗದು...

ಹೆದರದ ಗೆಳಯರೆಲ್ಲ ಕೂಡಿ
ಹಲವಾರು ಚಿಂತೆಯ ಮಾಡಿ
ಒಮ್ಮೆ ಆ ಗುಡ್ಡವನ್ನು ನೋಡಿ
ಬಂದೆವು ಅಲ್ಲಿಂದ ಓಡೋಡಿ...

ಗುಡ್ಡದ ಮೇಲೊಂದು ಬೆಳ್ಳನೆ ಆಕಾರ
ಅಲ್ಲಿತ್ತು ಮಾತಾಡೋ ಅಸ್ಥಿಪಂಜರ
ನೋಟದಲ್ಲಿ ಅದೊಂದು ವಿಚಿತ್ರ ಅವತಾರ
ಹೇಗೆ ಹೇಳೋದು ಅದರ ವಿಕಾರ ವಿಚಾರ.....

ಕುಣಿಯುತ್ತೆ ಅದು ತಯ್ಯಾ ತಕ್ಕ
ಬಂದು ನಿಲ್ಲುತ್ತೆ ನಮ್ಮಾ ಪಕ್ಕ
ಅದಕಿಲ್ಲಿ ಸಿಗುತ್ತೆ ಭಾರೀ ಸುಖ
ನಮಗಂತೂ ಇಲ್ಲಿ ಅಯ್ಯೋ ದುಃಖ....

ಕರಿಯುತ್ತೆ ನಮ್ಮ ಹೆಸರ
ತರಿಸುತ್ತೆ ನಮಗಿಲ್ಲಿ ಬೆವರ
ತಿರುಗಿದರಿಲ್ಲಿ ಬಲು ಘೋರ
ಇರುತ್ತೆ ನಮ್ಮ ಬೆನ್ನ ಹತ್ತಿರ...

(ಕಥೆ ಇನ್ನೂ... ಇದೆ.. ಮುಂದುವರೆಯುವುದು.).. 

|| ಪ್ರಶಾಂತ್ ಖಟಾವಕರ್ ||

+++++++++++++++++++++++++++++++++++




ಗುಡ್ಡದ ಮೇಲೊಂದು
ಭೂತವು ಇದೆಯೆಂದು
ಕಂಡಿದ್ದೆ ಕನಸೊಂದು
ಹೆದರಿದ್ದೆ ನಾ ಅಂದು....


ಕನಸನ್ನು ಮತ್ತೊಮ್ಮೆ ನೆನೆದು
ಭಯದಲ್ಲಿ ಮನದಲ್ಲೇ ನೊಂದು
ಕೇಳಿದೆ ಗೆಳಯರ ನಿಜ ಏನೆಂದು
ಯಾರ ಬಳಿಯೂ ಉತ್ತರ ಸಿಗದು...


ಹೆದರದ ಗೆಳಯರೆಲ್ಲ ಕೂಡಿ
ಹಲವಾರು ಚಿಂತೆಯ ಮಾಡಿ
ಒಮ್ಮೆ ಆ ಗುಡ್ಡವನ್ನು ನೋಡಿ
ಬಂದೆವು ಅಲ್ಲಿಂದ ಓಡೋಡಿ...


ಗುಡ್ಡದ ಮೇಲೊಂದು ಬೆಳ್ಳನೆ ಆಕಾರ
ಅಲ್ಲಿತ್ತು ಮಾತಾಡೋ ಅಸ್ಥಿಪಂಜರ
ನೋಟದಲ್ಲಿ ಅದೊಂದು ವಿಚಿತ್ರ ಅವತಾರ
ಹೇಗೆ ಹೇಳೋದು ಅದರ ವಿಕಾರ ವಿಚಾರ.....


ಕುಣಿಯುತ್ತೆ ಅದು ತಯ್ಯಾ ತಕ್ಕ
ಬಂದು ನಿಲ್ಲುತ್ತೆ ನಮ್ಮಾ ಪಕ್ಕ
ಅದಕಿಲ್ಲಿ ಸಿಗುತ್ತೆ ಭಾರೀ ಸುಖ
ನಮಗಂತೂ ಇಲ್ಲಿ ಅಯ್ಯೋ ದುಃಖ....


ಕರಿಯುತ್ತೆ ನಮ್ಮ ಹೆಸರ
ತರಿಸುತ್ತೆ ನಮಗಿಲ್ಲಿ ಬೆವರ
ತಿರುಗಿದರಿಲ್ಲಿ ಬಲು ಘೋರ
ಇರುತ್ತೆ ನಮ್ಮ ಬೆನ್ನ ಹತ್ತಿರ...

(ಕಥೆ ಇನ್ನೂ... ಇದೆ.. ಮುಂದುವರೆಯುವುದು.).. 

|| ಪ್ರಶಾಂತ್ ಖಟಾವಕರ್ ||

3 comments:

  1. ಅಯ್ಯೋ ಮಿತ್ರ ಯಾಕೆ ಭಯಪಡಿಸುತ್ತೀಯ?
    ಭವಎಂಬುದು ನಮ್ಮ ಜಾತಃ ಕರ್ಮ!

    ಒಳ್ಳೆ ಕವನ ಒಳ್ಳೆ ವಸ್ತು.

    ನನ್ನ ಬ್ಲಾಗಿಗೂ ನಿಮಗೆ ಆತ್ಮೀಯ ಸ್ವಾಗತ.
    www.badari-poems.blogspot.com

    ReplyDelete
  2. ಚೆನ್ನಾಗಿದೆ ಕವಿತೆ ಪ್ರಶಾಂತ್.ದೃಶ್ಯ ಮಾಧ್ಯಮಕ್ಕೆ ಹೋಲಿಸಿದಾಗ ಇಲ್ಲಿಯ ಚಿತ್ರಣ ಭಯ ಪಡುವಂತಹದ್ದೇನು ಇಲ್ಲ.ಪ್ರತಿಮೆಯನ್ನು ಹಾಗೆ ಬೆಳೆಸಿಕೊಂಡು ಹೋಗಿದ್ದೀರಿ. ಪದಗಳು ಕೂಡ ಒಪ್ಪ ಓರಣದಲ್ಲಿ ತಪ್ಪಿಲ್ಲ. ಸುಂದರವಾಗಿ ಮೂಡಿ ಬಂದಿದೆ. ಅಭಿನಂದನೆಗಳು.

    ReplyDelete
  3. ಇ ಕವನವು ನಿಮ್ಮ ಕಲ್ಪನೆಯೂ ಅಥವಾ ನಿಮಗೆ ಆದ ಅನುಭವವೋ ? ಸಾಲುಗಳು ಚೆನ್ನಾಗಿ ಮೂಡಿ ಬಂದಿವೆ, ನಿಜವಾಗಿಯೂ ನಡುಕ ಹುಟ್ಟುವಂತ ಸಾಲುಗಳು..!!

    ReplyDelete