ಹಸಿರೆಲೆಗಳ ನಡುವಲ್ಲಿ....
ಹೂವೊಂದು ಅರಳಿದೆ ಇಲ್ಲಿ...
ಆ ಗುಲಾಬಿಯ ರಂಗಿನಲ್ಲಿ...
ತಾರೆಯೊಂದು ಮಿನುಗುತಿದೆ ಇಲ್ಲಿ..
ನಗುವಿನಲಿ ನಲಿಯುತಲಿ....
ತುಟಿ, ಬಣ್ಣದಲಿ ಹೊಳೆಯುತಲಿ...
ನಯನದಲಿ ನುಡಿಯುತಲಿ...
ಕಣ್ಣಂಚಿನಲಿ ಮಿಂಚುತಲಿ....
ಮನ ಮೋಹಕ ರೂಪ
ಕಾಣಲು, ಬಲು ಅಪರೂಪ...
ಕನ್ನಡ ಕುವರಿಯ ಈ ಸ್ವರೂಪ...
ಬೆಳಗುತಿದೆ ಕನ್ನಡ ದೀಪ...
ಸ್ನೇಹದಲಿ ಸಂಚಿತ
ನಟನೆಯಲಿ ಮಿಂಚುತ
ಮನಸಿನಲಿ ಉಳಿಯುತ
ಸಿಹಿ ನೆನಪುಗಳಾ ನೀಡುತ
ಸದಾ ಹೀಗೆ ನಗು ನಗುತಾ..
ಕನ್ನಡ ಕೀರ್ತಿಯ ಮೆರೆಸುತ ಬಾಳು..
ಕನ್ನಡತಿ ಎಂದು ಹೆಮ್ಮೆಯಿಂದ ಹೇಳು....
ನನ್ನ ಈ ಮನದಾಳದ ಭಾವನೆಗಳು...
ದೀಪಾವಳಿಯ ವಿಶೇಷ ಉಡುಗೊರೆಗಳು...
ನಿಮಗೂ ಮತ್ತು ಎಲ್ಲಾ ಸ್ನೇಹಿತರಿಗೂ
ದೀಪಾವಳಿಯ
ಹಾಗು ಕನ್ನಡ ರಾಜ್ಯೋತ್ಸವದ...
ವಿಶೇಷ ಮತ್ತು ಹಾರ್ದಿಕ ಶುಭಾಶಯಗಳು... J
|| ಪ್ರಶಾಂತ್ ಖಟಾವಕರ್ ||
No comments:
Post a Comment